"ಮಿಯಾ, ಪಾಕಿಸ್ತಾನಿ" ಧಾರ್ಮಿಕ ಭಾವನೆಗೆ ಧಕ್ಕೆಯಲ್ಲ: ಸುಪ್ರೀಂ

Published : Mar 05, 2025, 09:53 AM ISTUpdated : Mar 05, 2025, 09:56 AM IST
"ಮಿಯಾ, ಪಾಕಿಸ್ತಾನಿ" ಧಾರ್ಮಿಕ ಭಾವನೆಗೆ ಧಕ್ಕೆಯಲ್ಲ: ಸುಪ್ರೀಂ

ಸಾರಾಂಶ

ಯಾರಿಗೇ ಆದರೂ "ಮಿಯಾ-ತಿಯಾ, ಪಾಕಿಸ್ತಾನಿ" ಎಂದು ಕರೆಯುವುದು ತಪ್ಪಾದರೂ ಅದು ಕ್ರಿಮಿನಲ್‌ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇ

ನವದೆಹಲಿ: ಯಾರಿಗೇ ಆದರೂ "ಮಿಯಾ-ತಿಯಾ, ಪಾಕಿಸ್ತಾನಿ" ಎಂದು ಕರೆಯುವುದು ತಪ್ಪಾದರೂ ಅದು ಕ್ರಿಮಿನಲ್‌ ಅಪರಾಧ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪದವಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಹರಿನಂದನ್‌ ಸಿಂಗ್‌ ಎಂಬ 80 ವರ್ಷದ ವ್ಯಕ್ತಿ ವಿರುದ್ಧ ಉರ್ದು ಅನುವಾದಕ ಹಾಗೂ ಜಾರ್ಖಂಡ್‌ನ ವಿಭಾಗೀಯ ಕಚೇರಿಯ ಮಾಹಿತಿ ಹಕ್ಕು ವಿಭಾಗದ ಕ್ಲರ್ಕ್‌ವೊಬ್ಬರು ದಾಖಲಿಸಿದ್ದ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯಪಟ್ಟಿದೆ. ಮಾಹಿತಿ ಹಕ್ಕು ಕಾಯ್ದೆಅಡಿ ಅರ್ಜಿ ವಿಚಾರಕ್ಕೆ ಸಂಬಂಧಿಸಿ ಕಚೇರಿಗೆ ಬಂದಿದ್ದ ಹರಿನಂದನ್‌ ಸಿಂಗ್ ಮಿಯಾ-ತಿಯಾ, ಪಾಕಿಸ್ತಾನಿ ಎಂದು ಬೈಯ್ಯುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾ.ಸತೀಶ್‌ ಚಂದ್ರ ಶರ್ಮಾ ಅವರ ಪೀಠವು, ಈ ರೀತಿಯ ಪದ ಬಳಕೆ ಖಂಡಿತವಾಗಿಯೂ ಸರಿಯಲ್ಲ. ಆದರೆ, ಇದು ಕ್ರಿಮಿನಲ್‌ ಅಪರಾಧವಲ್ಲ, ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುವುದೂ ಇಲ್ಲ. ಈ ರೀತಿಯ ಪದ ಬಳಕೆಗೆ ಯಾರನ್ನೇ ಆದರೂ ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಶೀಘ್ರ ದಿಲ್ಲೀಲಿ ಆಫ್ಘನ್‌ಉಗ್ರ ಸರ್ಕಾರದ ಪ್ರತಿನಿಧಿಗೆ ಅವಕಾಶ?
ಆಫ್ಘಾನಿಸ್ತಾನದಲ್ಲಿ ಅಧಿಕಾರ ನಡೆಸುತ್ತಿರುವ ತಾಲಿಬಾನ್ ಉಗ್ರ ಸರ್ಕಾರಕ್ಕೆ, ದೆಹಲಿಯಲ್ಲಿ ತನ್ನ ಪ್ರತಿನಿಧಿಯನ್ನು ಇರಿಸುವ ಅವಕಾಶವನ್ನು ಕಲ್ಪಿಸಲು ಭಾರತ ಸಮ್ಮತಿಸಿದೆ ಎಂದು ವರದಿಗಳು ತಿಳಿಸಿವೆ. ಆದರೆ ಪ್ರತಿನಿಧಿಗೆ ರಾಯಭಾರ ಸಿಬ್ಬಂದಿ ಸ್ಥಾನಮಾನ ಮತ್ತು ಕಚೇರಿಗೆ ದೂತಾವಾತ ಕಚೇರಿ ಸ್ಥಾನಮಾನ ನೀಡುವ ಸಾಧ್ಯತಗೆ ಇಲ್ಲ ಎಂದು ಮೂಲಗಳು ತಿಳಿಸಿವೆ. ತಾಲಿಬಾನ್ ಅಧಿಕಾರಕ್ಕೆ ಬರುವ ಪೂರ್ವದಲ್ಲಿದ್ದ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನ’ದ ರಾಜತಾಂತ್ರಿಕ ಕಾರ್ಯಾಚರಣೆಯಾಗಿಯೇ ರಾಯಭಾರ ಕಚೇರಿ ಅಧಿಕೃತವಾಗಿ ಮುಂದುವರಿಯುತ್ತದೆ. ಅವರ ಬಿಳಿ ಧ್ವಜವನ್ನು ಸಹ ಇಲ್ಲಿ ಹಾರಿಸಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಾಲಿಬಾನ್‌ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಇತ್ತೀಚೆಗೆ ಸಭೆ ನಡೆಸಿದ್ದರು. ಅದರ ಬೆನ್ನಲ್ಲೆ ಈ ಸುದ್ದಿ ಹೊರಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ