
ಸಾಧನೆ ಮಾಡಿದವರ ಹಿಂದೆ ಸ್ಫೂರ್ಥಿ ಇರುತ್ತದೆ. ಕಷ್ಟದಲ್ಲಿ ಬೆಂಬಲಿಸಿ ನಿಂತವರು, ಹೈಹಿಡಿದು ನಡೆಸಿದವರು, ಯಾವುದೋ ಚಿಕ್ಕ ಸಹಾಯ ಮಾಡಿದ್ದರೂ ಅದರ ಬೆಲೆ ದೊಡ್ಡದಿರುತ್ತದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೀರಾಬಾಯಿ ಚಾನು ಅವರ ಕಷ್ಟದ ಸಮಯದಲ್ಲಿ ಉಚಿತವಾಗಿ ಅವರಿಗೆ ಲಿಫ್ಟ್ ಕೊಡುತ್ತಿದ್ದ ಟ್ರಕ್ ಡ್ರೈವರ್‌ಗಳಗಳಿಗೆ ಅವರು ಥ್ಯಾಂಕ್ಸ್ ಹೇಳಿದ್ದಾರೆ. 2020 ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 49 ಕೆಜಿ ಭಾರ ಎತ್ತುವ ವಿಭಾಗದಲ್ಲಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಈ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ನಂತರ ಪದಕ ಗೆದ್ದ ಮೊದಲ ಮಹಿಳೆ ಈಕೆ.
ಮಿರಾಬಾಯಿ ಅವರ ಗ್ರಾಮ ನೊಂಗ್‌ಪಾಕ್ ಕಾಕ್ಚಿಂಗ್ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿರುವ ಕ್ರೀಡಾ ಅಕಾಡೆಮಿಯಿಂದ 25 ಕಿಮೀಗಿಂತ ಹೆಚ್ಚು ದೂರದಲ್ಲಿದೆ. ಆಕೆ ಮನೆಯಿಂದ ತರಬೇತಿ ಅಕಾಡೆಮಿಗೆ ದಿನನಿತ್ಯ ಪ್ರಯಾಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಆಕೆಯ ಹಳ್ಳಿಯ ಸಮೀಪದ ಟ್ರಕ್ಕರ್‌ಗಳು ಆಕೆಗೆ ಅಕಾಡೆಮಿಗೆ ದೈನಂದಿನ ಲಿಫ್ಟ್ ನೀಡುತ್ತಿದ್ದರು.
ಮೀರಾಬಾಯಿ ಅವರನ್ನು ASPಯಾಗಿ ನೇಮಿಸಲಿದೆ ಮಣಿಪುರ ಸರ್ಕಾರ
ಟ್ರಕ್ಕರ್‌ಗಳ ಸಹಾಯಕ್ಕಾಗಿ ಮೀರಾಬಾಯಿ ಕೃತಜ್ಞರಾಗಿದ್ದಾರೆ. ತನ್ನ ಆರಂಭಿಕ ದಿನಗಳಲ್ಲಿ ಟ್ರಕ್ಕರ್‌ಗಳ ಸಹಾಯವಿಲ್ಲದಿದ್ದರೆ ಒಲಿಂಪಿಕ್ ಪದಕ ಗೆಲ್ಲುವ ಕನಸು ನನಸಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಟೋಕಿಯೊದಿಂದ ಬಂದಾಗಿನಿಂದ ಮೀರಾಬಾಯಿ ತನಗೆ ಉಚಿತ ಲಿಫ್ಟ್ ನೀಡಿದ ಟ್ರಕ್ಕರ್‌ಗಳ ಹುಡುಕಾಟದಲ್ಲಿದ್ದರು.
ಸರಿಸುಮಾರು 150 ಟ್ರಕ್ ಚಾಲಕರಿಗೆ ಗುರುವಾರ ಮಣಿಪುರಿ ಸ್ಕಾರ್ಫ್, ಶರ್ಟ್ ನೀಡಿ ಭೋಜನ ಕೂಟ ಏರ್ಪಡಿಸುವ ಮೂಲಕ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರನ್ನೂ ಭೇಟಿಯಾದ ನಂತರ ಕಣ್ಣೀರಾಗಿದ್ದರು ಮೀರಾಬಾಯಿ.
ನಾನು ಇಲ್ಲಿಗೆ ತಲುಪಲು ಅನೇಕ ತ್ಯಾಗಗಳನ್ನು ಮಾಡಿದ್ದೇನೆ. ದೊಡ್ಡ ಆಟಗಾರಳಾಗಲು ಅಥವಾ ದೊಡ್ಡದನ್ನು ಸಾಧಿಸಲು, ನೀವು ತ್ಯಾಗಗಳನ್ನು ಮಾಡಬೇಕು ಮತ್ತು ನಾನು ಅನೇಕ ತ್ಯಾಗಗಳನ್ನು ಮಾಡಿದ್ದೇನೆ ಎಂದು ಮೀರಾಬಾಯಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ