
ನವದೆಹಲಿ(ಏ.16): ಕೊರೋನಾ ವೈರಸ್ ಹತೋಟಿಗೆ ತರಲು ಕೇಂದ್ರ ಸರ್ಕಾರ ಇದೀಗ ಲಾಕ್‌ಡೌನ್ ಅವಧಿ ವಿಸ್ತರಿಸಿದೆ. ಮೊದಲು ಮಾರ್ಚ್ 24 ರಿಂದ ಏಪ್ರಿಲ್ 14ರ ವರೆಗೆ ಲಾಕ್‌ಡೌನ್ ಹೇರಲಾಗಿತ್ತು. ಬಳಿಕ ಮೇ.3ರ ವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಇದರ ನಡುವೆ ವಿಮಾನಯಾನ ಸಚಿವಾಲಯ ಮಹತ್ವದ ಪ್ರಕಟಣೆ ಹೊರಡಿಸಿದೆ. ಮೊದಲ ಹಂತದ ಲಾಕ್‌ಡೌನ್ ವೇಳೆ ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಸಂಪೂರ್ಣ ಹಣ ವಾಪಸ್ ಸಿಗಲಿದೆ.
ಯಾವೆಲ್ಲ ಆಧಾರದಲ್ಲಿ ಲಾಕ್ ಡೌನ್ ಮಾಡಲಾಗುತ್ತದೆ? 3 ಟಿ ತತ್ವ ಎಂದರೇನು?
ವಿಮಾಯಾನ ಸಚಿವಾಲಯ ಹೊರಡಿಸಿದೆ ಪ್ರಕಟಣೆಯಲ್ಲಿ ವಿಮಾನ ಕಂಪನಿಗಳಿಗೆ ಕೆಲ ಸೂಚನೆಗಳನ್ನು ನೀಡಿದೆ . ಮಾ.24 ರಿಂದ ಏಪ್ರಿಲ್ 14ರವರೆಗೆ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ಬಕ್ ಮಾಡಿದ ಗ್ರಾಹಕರಿಗೆ ಟಿಕೆಟ್ ಹಣವನ್ನು ಸಂಪೂರ್ಣವಾಗಿ ವಾಪಸ್ ನೀಡಲು ಸೂಚಿಸಿದೆ. ಗ್ರಾಹಕರು ಟಿಕೆಟ್ ಕ್ಯಾನ್ಸಲ್ ಮಾಡಿ ಹಣ ಹಿಂತಿರುಗಿಸಲು ಆಗ್ರಹಿಸಿದರೆ ವಿಮಾನ ಕಂಪನಿಗಳು ಹಣ ಹಿಂತಿರುಗಿಸಬೇಕು ಎಂದು ಸೂಚಿಸಿದೆ.
ಮೊದಲ ಹಂತದ ಲಾಕ್‌ಡೌನ್ ಏಪ್ರಿಲ್ 14ಕ್ಕೆ ಕೊನೆಗೊಳ್ಳುತ್ತಿತ್ತು. ಹೀಗಾಗಿ ಹಲವು ವಿದೇಶಿ ಕಂಪನಿಗಳು ಏಪ್ರಿಲ್ 15 ರಿಂದ ಗ್ರಾಹಕರಿಗೆ ಟಿಕೆಟ್ ಬುಕಿಂಗ್ ಅವಕಾಶ ನೀಡಿತ್ತು. ಏರ್ ಇಂಡಿಯಾ ಹೊರತು ಪಡಿಸಿ ಉಳಿದೆಲ್ಲಾ ವಿಮಾನ ಸೇವೆ ಕಂಪನಿಗಳು ಟಿಕೆಟ್ ಬುಕಿಂಗ್ ಅವಕಾಶ ನೀಡಿತ್ತು ಆದರೆ ಪ್ರಧಾನಿ ಮೋದಿ ಲಾಕ್‌ಡೌನ್ 2ನೇ ಹಂತಕ್ಕೆ ವಿಸ್ತರಿಸಿದ್ದಾರೆ. ಇದೀಗ 2ನೇ ಹಂತದಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಹಣ ವಾಪಸ್ ನೀಡುವುದಿಲ್ಲ. ಈ ಗ್ರಾಹಕರಿಗೆ ಡಿಸೆಂಬರ್ 31ರ ವರೆಗೆ ಪ್ರಯಾಣದ ಅವಕಾಶ ನೀಡಲಾಗದುವುದು. ಇಷ್ಟ ಅಲ್ಲ ಹೆಚ್ಚಿನ ಶುಲ್ಕ ವಿಧಿಸಿವುದಿಲ್ಲ ಎಂದು ವಿದೇಶಿ ವಿಮಾನ ಕಂಪನಿಗಳು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ