ಯಾವೆಲ್ಲ ಆಧಾರದಲ್ಲಿ ಲಾಕ್ ಡೌನ್ ಮಾಡಲಾಗುತ್ತದೆ? 3 ಟಿ ತತ್ವ ಎಂದರೇನು?

By Suvarna NewsFirst Published Apr 16, 2020, 6:28 PM IST
Highlights
ಲಾಕ್ ಡೌನ್ ಆದೇಶವನ್ನು ಒಂದು ಚಾಲೆಂಜ್ ಆಗಿ ಸ್ವೀಕರಿಸಿ/ ಸರ್ಕಾರಗಳು ಯಾವ ಆಧಾರದಲ್ಲಿ ನಿರ್ದೇಶನ ನೀಡುತ್ತವೆ/ ಈ ಬಗ್ಗೆ ಒಂದು ವರದಿ ಇಲ್ಲಿದೆ
ಬೆಂಗಳೂರು(ಏ. 16)  ಒಂದು ಹಂತದ ಲಾಕ್  ಡೌನ್ ಮುಗಿದಿದೆ.  ಈಗ ದೇಶ ಎರಡನೇ ಹಂತದ ಲಾಕ್ ಡೌನ್ ಕಾಲದಲ್ಲಿ ಇದೆ.  ಜನರಿಗೆ ಮನೆಯಲ್ಲೇ ಇರಿ ಎಂದು ಪರಪರಿಯಾಗಿ ಬೇಡಿಕೊಂಡಿದ್ದೂ ಆಗಿದೆ.

ಹೋಂ ಕ್ವಾರಂಟೈನ್, ಸೋಶಿಯಲ್ ಡಿಸ್ಟಂಸಿಂಗ್ ಪದಗಳನ್ನು ಅರಿತು ಬಾಳುವುದ ಕಲಿತಾಗಿದೆ. ಹಾಗಾದರೆ ಮೂರು ಹಂತದಲ್ಲಿ ಈ ಸರ್ಕಾರದ ನಿರ್ದೇಶನಗಳು ಹೇಗೆ ಕೆಲಸ ಮಾಡುತ್ತವೆ. ಯಾವ ಆಧಾರದಲ್ಲಿ ಲಾಕ್ ಡೌನ್ ಘೊಷಣೆ ಮಾಡಲಾಗುತ್ತದೆ ಎಂಬುದನ್ನು ನೋಡಿಕೊಂಡು ಬರೋಣ

ವಾರ 1 : ಸೋಂಕು ಪತ್ತೆಮಾಡುವ ಯಂತ್ರಗಳು ಮತ್ತು ಪಿಪಿಇ ಗಳನ್ನು ಎಲ್ಲಾ ಆಸ್ಪತ್ರೆಯ ಸಿಬ್ಬಂದಿ ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು  ಹೈಡ್ರಾಕ್ಸಿಕ್ಲೋರೋಕ್ವಿನ್ ಸಾಕಷ್ಟು ಪ್ರಮಾಣದಲ್ಲಿ ಶೇಖರಿಸಿಟ್ಟು 7 ವಾರಗಳ ಕಾಲ ಜನರಿಗೆ ನೀಡುವಂತಿರಬೇಕು . ಸೋಂಕಿತರನ್ನು ಪ್ರತ್ಯೇಕವಾಗಿರಿಸಲು ತೊಂದರೆಯಾಗದಂತೆ ಬೆಡ್ ಮತ್ತು ವೆಂಟಿಲೇಟರ್ ಗಳನ್ನು ತಯಾರಿಸಬೇಕು .

ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ್ ಮೂರು ಕಠಿಣ ಕ್ರಮ; ಇಂದಿನಿಂದಲೇ ಜಾರಿ

ವಾರ 2 : ಮನೆಮನೆಗೂ ತೆರಳಿ ಪಾಸಿಟಿವ್ ಕೊರೋನಾ ಕೇಸ್ ಗಳು ಇದ್ದಲ್ಲಿ ಪರೀಕ್ಷಿಸಿದರೆ ವೈರಸ್ ಹರಡುವಿಕೆಯನ್ನು ತಡೆಯಲು ಸುಲಭವಾಗಬಹುದು .

ವಾರ 3 : ಲಾಕ್ ಡೌನ್ ಆರಂಭಿಸುವ ಮುನ್ನ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳಲು  ಪಿಪಿಇ ಕೊರತೆಯಿದ್ದು ಎಲ್ಲಾ ಆಸ್ಪತ್ರೆಗಳಿಗೂ ಸಾಧ್ಯವಾದಷ್ಟು  ಪಿಪಿಇ ಗಳನ್ನು ಒದಗಿಸಿ ಕೊರತೆ ಬಾರದಂತೆ  ನೋಡಿಕೊಳ್ಳಬೇಕು . 

ದೆಹಲಿ ಮರ್ಕಜ್ ಮುಖ್ಯಸ್ಥನ ಸಂಬಂಧಿಗಳಿಗೂ ಕೊರೋನಾ

3ಟಿ ತತ್ವ ಸಹ ಅಷ್ಟೇ ಪ್ರಮುಖ; ಟ್ರೇಸ್ , ಟೆಸ್ಟ್ , ಟ್ರೀಟ್ 

ಈಗಾಗಲೇ 21 ದಿನಗಳ ಲಾಕ್ ಡೌನ್ ಮುಗಿದಿದ್ದು  ನಮ್ಮ ಮುಂದಿರುವ ಸವಾಲುಗಳೇನು ? ಮುಂದಿನ ಭವಿಷ್ಯ ಹೇಗಿರುತ್ತದೆ ? ನಾವು ತೆಗೆದುಕೊಳ್ಳಬೇಕಾದ ಕ್ರಮಗಳೇನು ? ಇದರ ಬಗ್ಗೆ ಚಿಂತಿಸಿ , ಚರ್ಚಿಸಲು ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ .  ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ನೋಡಿಕೊಂಡು ಬನ್ನಿ

1 . ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ ಮಾಜಿ ಸಿ ಐ ಐ - ಪಾತ್ರೋನ್ 
2  ತೇಜಸ್ವಿ ಸೂರ್ಯ -  ಸಂಸದ ಮತ್ತು ಮಾರ್ಗದರ್ಶಿ 
3 . ಧನಂಜಯ ಕೆವಿ - ಸರ್ವೋಚ್ಚ ನ್ಯಾಯಾಲಯದ ವಕೀಲರು 
4 . ಡಾ . ಪ್ರೊಫೆಸರ್ . ಅಶೋಕ್ ಪಾಟೀಲ್ - ರಾಷ್ಟ್ರೀಯ ಕಾನೂನು ಶಾಲೆ 
5 . ಡಾ . ಯು ಎಸ್ ವಿಶಾಲ್ ರಾವ್ - ಹೆಚ್ ಸಿ ಜಿ ಕ್ಯಾನ್ಸರ್ ಆಸ್ಪತ್ರೆಯ ಪ್ರಮುಖ ವೈದ್ಯರು 
6 .  ಸೀಮಾರ್ ಸೂರಿ - ಅಂತಾರಾಷ್ಟ್ರೀಯ ಪ್ರ್ಯಾಕ್ಟೀಸ್ ಗ್ರೂಪ್ , ಪಬ್ಲಿಕ್ ಪಾಲಿಸಿ ಮತ್ತು ಕಾನೂನು . ದೆಹಲಿ 
7 . ಸೀತಾಲಕ್ಷ್ಮಿ ಮತ್ತು ಶ್ರೀ ರಾಹುಲ್ ನಂದನ್ - ಮಾಜಿ ಸಂಪಾದಕರು ಟೈಮ್ಸ್ ಆಫ್ ಇಂಡಿಯಾ 
8 . ಡಾ ಶ್ರೀನಿವಾಸ್ ಡಿ ಆರ್ - ಕೋವಿಡ್ ೧೯ ನೀತಿಯ ಸ್ಟ್ರ್ಯಾಟಜಿಸ್ಟ್ ತರಬೇತಿ ಸಂಯೋಜಕರು 
9 . ಡಾ ಪ್ರಶಾಂತ್ ರೆಡ್ಡಿ - ನೆಟ್ವರ್ಕ್ ಆವಿಷ್ಕಾರ ಮತ್ತು ಸಂಪರ್ಕ 
10 .  ನಿರಂಜನ ಮೂಡುಬಿದ್ರೆ - ವೈದ್ಯಕೀಯ ವಿತರಕ ( ಪಿಪಿಇ ,ಕಿಟ್ , ವೆಂಟಿಲೇಟರ್ , ಔಷಧ ) 
11 . ಡಾ ಕುನಾಲ್ ಶರ್ಮ - ಶಿರ ರೋಗಶಾಸ್ತ್ರ 
12 . ಡಾ ಕೃಪೇಶ್ - ಐಸಿಯು ಇಂಟೆನ್ಸಿವಿಸ್ಟ್ 
13 .  ವಿಶ್ವಾಸ್ ಯುಎಸ್ - ಆರ್ಥಿಕ ಸಂಯೋಜಕ 
14 - ಮಧುಕರ್ ಎಸಎಮ್ - ಎ ಎಂ ಟಿ ಜೆಡ್ ಮೆಕ್ ಟೆಕ್ ಜೋನ್ . ಸ್ಟಾರ್ಟ್ ಅಪ್ ಪ್ರಾಜೆಕ್ಟ್ಸ್ ಮತ್ತು ಗ್ರ್ಯಾಂಟ್ಸ್ 
15 .  ಅಮಿತ್ ಕಾರ್ಣಿಕ್ - ಎನ್ ಜಿ ಒ ಮತ್ತು ಸ್ವಯಂಸೇವಕರ ಸಂಯೋಜಕರು
16 . ಬೀನಾ ಸಿಂಗ್ - ಡಿಸೈನ್ ಟ್ರ್ಯಾನ್ಸಿಟ್ - ಕೊಲಬಿರೇಶನ್ , ನಿರ್ದೇಶಕರು 
17 . ಡಾ ಚಂದ್ರಶೇಖರ್ - ಸಾರ್ವಜನಿಕ ಆರೋಗ್ಯ ಮತ್ತು ಸರ್ಕಾರಿ ಸಂಪರ್ಕ 
18 . ಡಾ ತ್ರಿವೇಣಿ ಬಿಎಸ್ - ಸಾರ್ವಜನಿಕ ಆರೋಗ್ಯ ತಜ್ಞರು , ಹೆಲ್ತ್ ಸಿಟಿ ಸಹಭಾಗಿತ್ವ , 
19 .  ಆನಂದ್ - ಐಟಿ ಮತ್ತು ಕಾಲ್ ಸೆಂಟರ್ 
20. ಡಾ ಗುರುರಾಜ್ ಅರಕೇರಿ - ಎಡಿಟರ್ -ಪಿಎಲ್ ಓಎಸ್ ( ಮೆಡಿಕಲ್ ರಿಸರ್ಚ್ ) 
21 .  ಅನುರಾಗ್ ಎಸ್- ಲೇಖಕ , ಸೃಜನಶೀಲ  
22 . ಲಕ್ಷ್ಮೀ ಪ್ರಾತ್ರಿ  - ಇನ್ ಟಾಕ್ಸ್ ಸಂಸ್ಥಾಪಕರು , ಕಾರ್ಯತಂತ್ರದ ಸಲಹೆಗಾರರು .
23 . ಪೂರ್ವಾಂಕರ - ಸಿಎಸ್ ಆರ್ ಪಾರ್ಟ್ನರ್ 
24  . ಡಾ . ಶ್ರೀನಾಥ್ ಡಿ - ಸರ್ಕಾರ ಮತ್ತು ಮುಖ್ಯಮಂತ್ರಿ ಕಚೇರಿಯ ಸಂಪರ್ಕರು . 




 
click me!