ಬೆಂಗಳೂರು(ಜ.29): ದೇಶ ವಿರೋಧಿಗಳಿಗೆ ಗುಂಡಿಕ್ಕಿ ಎಂಬ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿಕೆಯನ್ನು ಪ್ರವಾಸೋದ್ಯಮ ಸಚಿವ ಸಿಟಿ ರವಿ ಬೆಂಬಲಿಸಿದ್ದಾರೆ.
ದೇಶದ ವಿರೋಧಿಗಳಿಗೆ ಬುಲೆಟ್ ಅಲ್ಲದೇ ಇನ್ನೇನು ಬಿರಿಯಾನಿ ಕೊಡಬೇಕೇ ಎಂದು ಸಿಟಿ ರವಿ ಪ್ರಶ್ನಿಸಿದ್ದು, ಅನುರಾಗ್ ಠಾಕೂರ್ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಟಿ ರವಿ, ದೇಶದ್ರೋಹಿಗಳ ವಿರುದ್ಧ ಹೇಳಿಕೆ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಖಂಡಿಸುವವರು ಭಯೋತ್ಪಾದಕರಾದ ಅಜ್ಮಲ್ ಕಸಬ್, ಯಾಕುಬ್ ಮೆಮನ್ ಸಾವನ್ನು ವಿರೋಧಿಸುವವರು ಎಂದರ್ಥ ಎಂದು ಹೇಳಿದ್ದಾರೆ.
ಟುಕ್ಡೆ ಟುಕ್ಡೆ ಗ್ಯಾಂಗ್ ಸೇರಿಕೊಂಡು ಸಿಎಎ ವಿರುದ್ಧ ಅಪಪ್ರಚಾರ ನಡೆಸುವವರ ವಿರುದ್ಧ ನುರಾಗ್ ಠಾಕೂರ್ ಸರಿಯಾದ ಹೇಳಿಕೆಯನ್ನೇ ನೀಡಿದ್ದಾರೆ ಎಂದು ಸಿಟಿ ರವಿ ಅಭಿಪ್ರಾಯಪಟ್ಟಿದ್ದಾರೆ.
ದೇಶ ವಿರೋಧಿಗಳಿಗೆ ಬುಲೆಟ್ ಕೊಡಬೇಕು ಬಿರಿಯಾನಿ ಅಲ್ಲ ಎಂದು ‘ಐ ಸ್ಟ್ಯಾಂಡ್ ವಿತ್ ಅನುರಾಗ್ ಠಾಕೂರ್’ ಎಂದು ಹ್ಯಾಶ್ ಟ್ಯಾಗ್ ಬರೆದು ಸಿಟಿ ತವಿ ಟ್ವೀಟ್ ಮಾಡಿದ್ದಾರೆ.
ಸಿಎಎ ವಿರೋಧಿಗಳಿಗೆ ‘ಗೋಲಿ ಮಾರೋ’ ಎಂದ ಕೇಂದ್ರ ಸಚಿವ!
ದೆಹಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ನುರಾಗ್ ಠಾಕೂರ್, ದೇಶ ವಿರೋಧಿಗಳಿಗೆ ಗೋಲಿ ಮಾರೋ ಎಂದು ಹೇಳಿಕೆ ನೀಡಿದ್ದರು. ಸದ್ಯ ಚುನಾವಣಾ ಆಯೋಗ ಅನುರಾಗ್ ಠಾಕೂರ್ ಅವರಿಗೆ ನೊಟೀಸ್ ಜಾರಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ