
ನವದೆಹಲಿ(ಜ.29): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯ ಶಾಹೀನ್ ಬಾಗ್’ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ, ಪ್ರತಿಭಟನಾಕಾರನೋರ್ವ ಪಿಸ್ತೂಲು ಪ್ರದರ್ಶಿಸಿದ ಘಟನೆ ನಡೆದಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಹಾಜಿ ಲುಕ್ಮಾನ್ ಎಂಬಾತ, ಪ್ರತಿಭಟನಾಕಾರರೊಂದಿಗೆ ಜಗಳ ತೆಗೆದು ಪಿಸ್ತೂಲು ಪ್ರದರ್ಶಿಸಿದ್ದಾನೆ ಎನ್ನಲಾಗಿದೆ.
ಸಹ ಪ್ರತಿಭಟನಾಕಾರರೊಂದಿಗೆ ಕ್ಯಾತೆ ತೆಗೆದ ಹಾಜಿ ಲುಕ್ಮಾನ್, ಕೂಡಲೇ ತನ್ನ ಪಿಸ್ತೂಲನ್ನು ಹೊರತೆಗೆದಿದ್ದಾನೆ. ಈ ವೇಳೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಶಾಹೀನ್ ಬಾಗ್ ಪ್ರತಿಭಟನಾಕಾರರು ರೇಪ್ ಮಾಡಬಹುದು: ಬಿಜೆಪಿ ಸಂಸದ!
ಕೂಡಲೇ ಹಾಜಿ ಲುಕ್ಮಾನ್’ನನ್ನು ತಡೆದ ಸಹ ಪ್ರತಿಭನಾಕಾರರು ಆತನನ್ನು ಹೊರಗೆ ಕಳುಹಿಸಿದ್ದಾರೆ. ಹಾಜಿ ಲುಕ್ಮಾನ್ ಪಿಸ್ತೂಲು ಹೊರತೆಗೆದು ಪ್ರದರ್ಶಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲೀಸರು, ಇದುವರೆಗೂ ಘಟನೆಯ ಕುರಿತು ದೂರು ದಾಖಲಿಸಲಾಗಿಲ್ಲವಾದರೂ ಹಾಜಿ ಲುಕ್ಮಾನ್ ಕೈಯಲ್ಲಿದ್ದ ಪಿಸ್ತೂಲಿಗೆ ಪರವಾನಿಗೆ ಇರುವುದು ಗೊತ್ತಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ