ವೈರಲ್ ಆದ ಇಟಲಿ ಪ್ರಧಾನಿಯ ಮೆಲೋಡಿ ಸೆಲ್ಫಿಗೆ ನರೇಂದ್ರ ಮೋದಿ ಪ್ರತಿಕ್ರಿಯೆ!

By Suvarna NewsFirst Published Dec 2, 2023, 8:00 PM IST
Highlights

ಸಿಒಪಿ28 ಸಭೆಯಲ್ಲಿ ಪ್ರಧಾನಿ ಮೋದಿ ಜೊತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತೆಗೆದ ಸೆಲ್ಫಿ ಫೋಟೋವನ್ನು ಮೆಲೋಡಿ ಎಂದು ಟ್ವೀಟ್ ಮಾಡಿದ್ದರು. ಟ್ವೀಟ್ ಭಾರಿ ವೈರಲ್ ಆಗಿತ್ತು. ಇದೀಗ ಮೆಲೋನಿಯ ವೈರಲ್ ಟ್ವೀಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದರೆ. 

ನವದೆಹಲಿ(ಡಿ.02) ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ (ಸಿಒಪಿ28) ಪ್ರಧಾನಿ ಮೋದಿ ಸೇರಿದಂತೆ ಪ್ರಮುಖ ದೇಶಗಳ ಪ್ರಧಾನಿ ಹಾಗೂ ಗಣ್ಯರು ಪಾಲ್ಗೊಂಡಿದ್ದರು.  ಈ ಸಭೆಯ ನಡುವೆ ಪ್ರಧಾನಿ ಮೋದಿ ಜೊತೆ ಇಟಲಿ ಪ್ರಧಾನಿ ಜಾರ್ಜಿಯಾ ಮಲೊನಿ ಸೆಲ್ಫಿ ಫೋಟೋ ತೆಗೆದಿದ್ದರು. ಈ ಫೋಟೋವನ್ನು MELODI ( ಮೆಲೋಡಿ) ಎಂದು ಬಣ್ಣಿಸಿ ಜಾರ್ಜಿಯಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಭಾರಿ ವೈರಲ್ ಆಗಿತ್ತು. ಇದೀಗ ಪ್ರಧಾನಿ ನರೇಂದ್ರ ವೈರಲ್ ಆಗಿರುವ ಮೆಲೋಡಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸ್ನೇಹಿತರ ಭೇಟಿ ಸದಾ ಸಂತೋಷವಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ.

ಜಾರ್ಜಿಯಾ ಮೆಲೊನಿ ಟ್ವೀಟ್‌ಗೆ ರಿಪ್ಲೈ ಮಾಡಿರುವ ಮೋದಿ ಸ್ನೇಹಿತರ ಭೇಟಿ ಯಾವಾಗಲು ಸಂತಸವಾಗಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಕಳೆದೆರಡು ದಿನದಲ್ಲಿ ಟ್ರೆಂಡಿಂಗ್‌ನಲ್ಲಿರುವ ಈ ಫೋಟೋ ಇದೀಗ ಮೋದಿ ಪ್ರತಿಕ್ರಿಯೆಂದ ಮತ್ತೆ ಸಂಚಲನ ಸೃಷ್ಟಿಸಿದೆ. ಜಾರ್ಜಿಯಾ ಮೆಲೊನಿ ಹಾಗೂ ಪ್ರಧಾನಿ ಮೋದಿ ನಗುಮುಖದ ಈ ಸೆಲ್ಫಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಅಭಿವೃದ್ಧಿ - ಪರಿಸರ ಸಮತೋಲನಕ್ಕೆ ಜಗತ್ತಿಗೇ ಭಾರತ ಮಾದರಿ: ಮೋದಿ; ಗ್ರೀನ್‌ ಕ್ರೆಡಿಟ್‌ ಪ್ರಸ್ತಾಪಿಸಿದ ಪ್ರಧಾನಿ

ಈ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಟ್ರೆಂಡ್ ಸೃಷ್ಟಿಮಾಡಿತ್ತು. ಫೋಟೋ ಕುರಿತ ಮೀಮ್ಸ್ ಕೂಡ ಹರಿದಾಡಿತ್ತು. ಜಾಗತಿಕ ನಾಯಕನಿಗೆ ಎಲ್ಲರು ಮನ್ನಣೆ ನೀಡುತ್ತಾರೆ. ಮೋದಿ ವಿಶ್ವನಾಯಕ ಅನ್ನೋ ಮೆಚ್ಚುಗೆ ಮಾತುಗಳು ಕೇಳಿಬಂದಿತ್ತು. 

 

Meeting friends is always a delight. https://t.co/4PWqZZaDKC

— Narendra Modi (@narendramodi)

 

ಸಿಒಪಿ28(ಪ್ರತಿನಿಧಿಗಳ 33ನೇ ಸಮ್ಮೇಳನ)ಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ನಡುವೆ ಹೇಗೆ ಸಮತೋಲನ ಸಾಧಿಸಬೇಕು ಎಂಬುದರ ಬಗ್ಗೆ ಇಡೀ ವಿಶ್ವಕ್ಕೇ ಭಾರತ ಮಹಾನ್‌ ಉದಾಹರಣೆಯಾಗಿದೆ ಎಂದರು. ಜಾಗತಿಕ ತಾಪಮಾನ ಹೆಚ್ಚಳವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸುವ ರಾಷ್ಟ್ರೀಯ ಯೋಜನೆಯನ್ನು ಸಾಧಿಸುವ ವಿಷಯದಲ್ಲಿ ನಿಗಾ ಇಟ್ಟಿರುವ ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ ಎಂದು ಮೋದಿ ಹೇಳಿದ್ದಾರೆ.

 

ವಿದೇಶ ಪ್ರವಾಸದ ವೇಳೆ ಪತ್ರಕರ್ತರನ್ನು ಕರೆದುಕೊಂಡು ಹೋಗೋದು ಪ್ರಧಾನಿ ಕೆಲಸವಲ್ಲ ಎಂದಿದ್ದ ಮೋದಿ!

ಹವಾಮಾನ ಬದಲಾವಣೆ ವಿರುದ್ದದ ಹೋರಾಟದಲ್ಲಿ ಪ್ರತಿಯೊಬ್ಬರ ಹಿತವನ್ನು ರಕ್ಷಣೆ ಮಾಡಬೇಕು. ಹಾಗೆಯೇ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಕಿವಿಮಾತು ಹೇಳಿದರು. ಇದೇ ವೇಳೆ 2028ರಲ್ಲಿ ಭಾರತದಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ಆಯೋಜಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿದ್ದಾರೆ.  
 

click me!