Operation Sindoor ಲೋಗೋ ಡಿಸೈನ್‌ ಮಾಡಿದ ಸೇನಾಧಿಕಾರಿಗಳು ಇವರು..

Published : May 27, 2025, 09:26 AM IST
Operation Sindoor

ಸಾರಾಂಶ

ಆಪರೇಷನ್ ಸಿಂಧೂರ್ ಲೋಗೋವನ್ನು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹರ್ಷ್ ಗುಪ್ತಾ ಮತ್ತು ಹವಾಲ್ದಾರ್ ಸುರೀಂದರ್ ಸಿಂಗ್ ರಚಿಸಿದ್ದಾರೆ. 

ನವದೆಹಲಿ (ಮೇ.27): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಜೀವಗಳನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ನಂತರ ಭಾರತದ ಮಿಲಿಟರಿ ಪ್ರತಿಕ್ರಿಯೆ ಕೇವಲ ಕಾರ್ಯತಂತ್ರದ ಪ್ರತೀಕಾರ ಮಾತ್ರವಲ್ಲ, ಇಡೀ ದಾಳಿ ಪಾಕಿಸ್ತಾನಕ್ಕೆ ಒಂದು ಸಂದೇಶ ಇದ್ದಂತೆ ಇರಬೇಕು ಎಂದು ಪ್ರಧಾನಿ ಮೋದಿ ಬಯಸಿದ್ದರು. ಮೇ 7 ರಂದು ಆಪರೇಷನ್ ಸಿಂದೂರ್‌ ಅಡಿಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ಪ್ರತೀಕಾರದ ನಿಖರವಾದ ದಾಳಿಯನ್ನು ಪ್ರಾರಂಭಿಸಿದಾಗ, ಭಾರತ ತನ್ನ ಸಂಕಲ್ಪದ ಲಾಂಛನವನ್ನು ಸಹ ಅನಾವರಣಮಾಡಿತ್ತು. ಆಪರೇಷನ್‌ ಸಿಂದೂರ್‌ ಲೋಗೋ ಹೇಗಿತ್ತೆಂದರೆ, ಭಾರತಕ್ಕೆ ಆದ ಅನ್ಯಾಯ ಹಾಗೂ ನಮ್ಮ ಕೋಪ ಅದರೊಂದಿಗೆ ನ್ಯಾಯಕ್ಕಾಗಿ ನಮ್ಮ ನಿಷ್ಠೆಯನ್ನು ಅನಾವರಣ ಮಾಡಿತ್ತು

ಆಪರೇಷನ್ ಸಿಂದೂರ್ ಲೋಗೋವನ್ನು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹರ್ಷ್ ಗುಪ್ತಾ ಮತ್ತು ಹವಾಲ್ದಾರ್ ಸುರೀಂದರ್ ಸಿಂಗ್ ರಚಿಸಿದ್ದರು. ಆಪರೇಷನ್‌ ಸಿಂದೂರ್ ಲೋಗೋ ಕಾರ್ಯಾಚರಣೆಯ ಹೆಸರನ್ನು ದಪ್ಪನೆಯ ಬ್ಲಾಕ್‌ ಲೆಟರ್‌ನಲ್ಲಿ ಬರೆಯಲಾಗಿತ್ತು. ಇನ್ನೂ ಸಿಂದೂರ್‌ನ ಎರಡು 'O' ಅಕ್ಷರಗಳನ್ನು ಸಿಂದೂರದ ಡಬ್ಬಿಯ ರೀತಿಯಲ್ಲಿ ಚಿತ್ರಿಸಲಾಗಿತ್ತು. ಚೆಲ್ಲಿದ ಸಿಂಧೂರವು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ವಿಧವೆ ಮಹಿಳೆಯರನ್ನು ಪ್ರತಿನಿಧಿಸುತ್ತದೆ . ಸಾಂಪ್ರದಾಯಿಕವಾಗಿ ವೈವಾಹಿಕ ಸ್ಥಿತಿಯ ಸಂಕೇತವಾಗಿ ಹಿಂದೂ ಮಹಿಳೆಯರು ಸಿಂದೂರವನ್ನು ಧರಿಸುತ್ತಾರೆ. ಚೆಲ್ಲಿದ ಸಿಂದೂರದ ಅರ್ಥ ಅವರನ್ನು ವಿಧವೆಯರನ್ನಾಗಿ ಮಾಡಿದ ಭಯೋತ್ಪಾದಕ ದಾಳಿಯ ಮೇಲಿನ ಸಿಟ್ಟನ್ನು ಪ್ರತಿಧ್ವನಿಸಿತ್ತು.

ಪಹಲ್ಗಾಮ್ ಹತ್ಯಾಕಾಂಡದ ಭಾವನಾತ್ಮಕ ಪರಿಣಾಮಗಳನ್ನು, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಉಂಟಾದ ಭಾವನಾತ್ಮಕ ಅನುಭವಗಳನ್ನು ಪ್ರತಿಬಿಂಬಿಸಲು ಆಪರೇಷನ್ ಸಿಂಧೂರ್ ಎಂಬ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅನುಮೋದಿಸಿದ್ದರು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಬಹುತೇಕ ಎಲ್ಲಾ ಹಿಂದಿನ ಮಿಲಿಟರಿ ಕಾರ್ಯಾಚರಣೆಗಳು ಆಂತರಿಕವಾಗಿ ವಿಶ್ವಾಸವನ್ನು ಪ್ರೇರೇಪಿಸಲು ಮತ್ತು ಬಾಹ್ಯವಾಗಿ ಶಕ್ತಿಯ ಸಂದೇಶವನ್ನು ಕಳುಹಿಸಲು ಸಾಂಪ್ರದಾಯಿಕ ಮಿಲಿಟರಿ ಹೆಸರುಗಳನ್ನು ಹೊಂದಿದ್ದವು. ಕೆಲವೊಮ್ಮೆ ಕಾರ್ಯಾಚರಣೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಹೆಸರುಗಳನ್ನು ಆಯ್ಕೆ ಮಾಡಲಾಗುತ್ತಿತ್ತು ಮತ್ತು ಕೆಲವೊಮ್ಮೆ, ಭಾರತೀಯ ಪುರಾಣಗಳಿಂದಲೂ ಹೆಸರುಗಳನ್ನು ಪಡೆಯಲಾಗುತ್ತಿತ್ತು.

ಕಳೆದ ವಾರ, ಪ್ರಧಾನಿ ಮೋದಿ ಅವರು "ಸಿಂದೂವು ಗನ್‌ಪೌಡರ್ ಆಗಿ ಬದಲಾದಾಗ ಏನಾಗುತ್ತದೆ ಎಂದು ಜಗತ್ತು ಮತ್ತು ಭಾರತದ ಶತ್ರುಗಳು ಈಗ ನೋಡಿದ್ದಾರೆ" ಎಂದು ಹೇಳಿದ್ದರು, ಈಗ ಅವರ ರಕ್ತನಾಳಗಳಲ್ಲಿ ರಕ್ತದ ಬದಲು ಸಿಂದೂರ ಹರಿಯುತ್ತದೆ ಎಂದು ಹೇಳಿದ್ದರು.

"ಮೋದಿ ಕಾ ದಿಮಾಗ್ ಥಂಡಾ ಹೈ, ಥಂಡಾ ರೆಹತಾ ಹೈ, ಲೇಕಿನ್ ಮೋದಿ ಕಾ ಲಹು ಗರಂ ಹೋತಾ ಹೈ. ಔರ್ ಅಬ್ ತೋ ಮೋದಿ ಕಿ ನಾಸೋನ್ ಮೇ ಲಾಹು ನಹೀ, ಗರಂ ಸಿಂಧೂರ್ ಬೆಹ್ ರಹಾ ಹೈ (ಈಗ, ಭಾರತ ಮಾತೆಯ ಸೇವಕ ಮೋದಿ ಇಲ್ಲಿ ತಲೆಯೆತ್ತಿ ನಿಂತಿದ್ದಾರೆ. ಮೋದಿ ಅವರ ಮನಸ್ಸು ತಂಪಾಗಿದೆ. ಮೋದಿ ಅವರ ತಲೆ ಶಾಂತವಾಗಿದೆ. ಅದು ಹಾಗೆಯೇ ಇರುತ್ತದೆ. ಆದರೆ, ಮೋದಿಯ ರಕ್ತ ಬಿಸಿಯಾಗಿದೆ. ಈಗ ಬರೀ ರಕ್ತವಲ್ಲ, ನನ್ನ ರಕ್ತನಾಳದಲ್ಲಿ ಸಿಂದೂರ ಹರಿಯುತ್ತದೆ) ಎಂದು ಅವರು ಬಿಕಾನೇರ್‌ನಲ್ಲಿ ನಡೆದ ಸಮಾವೇಶದಲ್ಲಿ ಹೇಳಿದರು.

ಆಪರೇಷನ್ ಸಿಂದೂರ್: ಆಪರೇಷನ್ ಸಿಂದೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಲಾಗಿತ್ತು, ಇದರ ಪರಿಣಾಮವಾಗಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದರು. ಈ ಕಾರ್ಯಾಚರಣೆಯು ಬಹಾವಲ್ಪುರ್, ಮುಜಫರಾಬಾದ್, ಕೋಟ್ಲಿ ಮತ್ತು ಸಿಯಾಲ್ಕೋಟ್‌ನಲ್ಲಿನ ಪ್ರಮುಖ ತಾಣಗಳು ಸೇರಿದಂತೆ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಸೌಲಭ್ಯಗಳನ್ನು ಧ್ವಂಸಗೊಳಿಸಿತು. ಕೊಲ್ಲಲ್ಪಟ್ಟವರಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನ ಆಪ್ತ ಸಹಾಯಕರು ಮತ್ತು ಕುಟುಂಬ ಸದಸ್ಯರು ಸೇರಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..