ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಮೌಲ್ವಿ
ದೇಶದಲ್ಲಿ ಹಿಂದುಗಳನ್ನು ನಾಶ ಪಡಿಸುವ ಪ್ರತಿಜ್ಞೆ
ವಿಡಿಯೋ ವೈರಲ್ ಆಗುತ್ತಿದ್ದಂತೆ, ಕ್ಷಮೆ ಕೇಳಿದ ಮೌಲ್ವಿ ಫಾರುಕ್
ನವದೆಹಲಿ (ಮಾ.27): ಕಾಶ್ಮೀರಿ ಪಂಡಿತರ ನರಮೇಧದ (Kashmiri Pandit genocide)ನೈಜ ಕಥೆಗಳನ್ನು ಆಧರಿಸಿದ ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಕಾಶ್ಮೀರದಲ್ಲಿ ಮುಗ್ಧ ಹಿಂದೂಗಳ ಮೇಲೆ ನಡೆದ ಭೀಕರ ಭಯೋತ್ಪಾದನೆಯನ್ನು ರಾಷ್ಟ್ರವು ನೆನಪಿಸಿಕೊಳ್ಳುತ್ತಿರುವಾಗ, ಚಿತ್ರದ ಬಗ್ಗೆ ಅಸಮಾಧಾನಗೊಂಡ ಕೆಲವರು ಕಾಣಸಿಗುತ್ತಿದ್ದಾರೆ. 1990 ರ ದಶಕದಲ್ಲಿ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯೆಯ ನೇತೃತ್ವ ವಹಿಸಿದ ಕಾಶ್ಮೀರಿ ಮುಸ್ಲಿಮರ ನಿಜವಾದ ಮುಖವನ್ನು ತೋರಿಸಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕರನ್ನು ನಿಂದಿಸುವ ಮತ್ತು ಬೆದರಿಕೆ ಹಾಕುವಲ್ಲಿ ನಿರತರಾಗಿದ್ದಾರೆ.
ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ (Rajouri district of Jammu and Kashmir) ವಿವಾದಿತ ಮೌಲಾನಾ ಫಾರುಕ್ (Maulvi Farooq ), ಕಾಶ್ಮೀರ್ ಫೈಲ್ಸ್ ಚಿತ್ರ ನಿರ್ಮಾಪಕ ಹಾಗೂ ಹಿಂದೂಗಳಿಗೆ ಬೆದರಿಸಿದ್ದು ಮಾತ್ರವಲ್ಲದೆ, ಚಿತ್ರ ಪ್ರದರ್ಶನವನ್ನು ನಿಲ್ಲಿಸದೇ ಹೋದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾನೆ.
ಪತ್ರಕರ್ತ ಆಶಿಶ್ ಕೊಹ್ಲಿ ವಿವಾದಾತ್ಮಕ ಧರ್ಮಗುರು ಮೌಲ್ವಿ ಫಾರೂಕ್ ಮಾಡಿದ ದ್ವೇಷದ ಭಾಷಣದ ವೀಡಿಯೊವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಫಾರುಖ್, ಕಾಶ್ಮೀರ್ ಫೈಲ್ಸ್ ಚಿತ್ರ ತಂಡಕ್ಕೆ ಬೆದರಿಕೆ ಹಾಕುವ ಮಾತುಗಳಿದ್ದು, ಚಿತ್ರದಲ್ಲಿ ಪಂಡಿತರ ಹತ್ಯೆ ಬಗ್ಗೆ ಮಾತ್ರ ಹೇಳಲಾಗಿದೆ. ಆದರೆ, ಸಾವಿರಾರು ಮುಸ್ಲಿಮರ ಸಾವುಗಳ ಬಗ್ಗೆ ಸ್ವಲ್ಪವೂ ತೋರಿಸಿಲ್ಲ ಎಂದು ಹೇಳಿದ್ದಾನೆ. ಮೌಲ್ವಿ ಪ್ರಕಾರ, ವಿವೇಕ್ ಅಗ್ನಿಹೋತ್ರಿ-ನಿರ್ದೇಶನದ ಚಿತ್ರ ದೇಶವನ್ನು ವಿಭಜಿಸುವ ಪ್ರಯತ್ನ ಮತ್ತು ಇದು ಮುಸ್ಲಿಮರ ವಿರುದ್ಧ ಪೂರ್ವ ಯೋಜಿತ ಪಿತೂರಿ ಎಂದಿದ್ದಾನೆ.
राजौरी के मौलवी साहब का कहना हैः
“यह फ़िल्म बंद होनी चाहिए… हमनें ८०० साल तुम पे हुकूमत की तुम ७० साल की हुकूमत में हमारा निशान मिटाना चाहते हो…”
दोस्तों, बिलकुल इसी तरह कश्मीर से कश्मीरी हिंदुओं का नाम ओ निशान मिटा दिया गया था। pic.twitter.com/Xm2SZJuxU9
ಚಲನಚಿತ್ರವನ್ನು ಪ್ರಚಾರ ಮಾಡಿದ್ದಕ್ಕಾಗಿ ಮೋದಿ ಸರ್ಕಾರದ ವಿರುದ್ಧವೂ ವಾಗ್ದಾಳಿ ಮಾಡಿದ್ದಾನೆ. 1990 ರ ದಶಕದಲ್ಲಿ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಭಯಾನಕ ಕಥೆಯನ್ನು ತರುವ 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವನ್ನು ಮುಸ್ಲಿಮರು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ.
Rajouri के मौलवी ने पहले पर ऊँगली नफरत और फिर मांगी माफ़ी pic.twitter.com/lGTQvU9a8i
— Ashish Kohli ॐ🇮🇳 (@dograjournalist)
ಚಿತ್ರದ ಮೇಲೆ ನಿಷೇಧಕ್ಕೆ ಕರೆ ನೀಡಿದ ಮೌಲ್ವಿ ಫಾರೂಕ್, "ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವನ್ನು ನಿಷೇಧಿಸುವ ವಿಚಾರವನ್ನು ನೀವು ಒಪ್ಪುವುದಿಲ್ಲವೇ? ಈ ಸಿನಿಮಾದ ಮೇಲೆ ನಿರ್ಬಂಧ ಹೇರಬೇಕು. ನಾವು (ಮುಸ್ಲಿಮರು) ಶಾಂತಿಪ್ರಿಯ ಜನರು, ನಾವು ದೇಶವನ್ನು ಶಾಂತಿಯುತವಾಗಿಡಲು ಉದ್ದೇಶಿಸಿದ್ದೇವೆ' ಎಂದು ಹೇಳಿದ್ದಾನೆ.
ಕೊನೆಗೂ The Kashmir Files ಬಗ್ಗೆ ಬಾಯಿಬಿಟ್ಟ Taapsee Pannu
ಮುಸ್ಲಿಮರು ಈ ದೇಶವನ್ನು 800ಕ್ಕೂ ಅಧಿಕ ವರ್ಷಗಳ ಕಾಲ ಆಳಿದ್ದಾರೆ, ಆದರೆ 70 ವರ್ಷಗಳ ಹಿಂದೆ ಹಿಂದೂಗಳು ಅಧಿಕಾರಕ್ಕೆ ಬಂದಿದ್ದಾರಷ್ಟೇ ಎಂದು ಹೇಳಿದ್ದಾನೆ. “ನೀವು ನಮ್ಮನ್ನು ಗುರಿಯಾಗಿಸಲು ಬಯಸುತ್ತಿದ್ದೀರಿ. ವಾಸ್ತವವೆಂದರೆ ನೀವು ಸಾವು ಮತ್ತು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಆದರೆ ಕಲ್ಮಾ-ಪಠಣ ಮಾಡುವ ಮುಸ್ಲಿಮರನ್ನು ನೀವು ಏನನ್ನೂ ಮಾಡಲು ಸಾಧ್ಯವಿಲ್ಲ, ”ಎಂದು ಹೇಳಿದ್ದಾನೆ. ಮೌಲಾನಾ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಮಸೀದಿಯಲ್ಲಿ ನೆರೆದಿದ್ದ ಮುಸ್ಲಿಮರು ‘ನಾರಾ-ಎ-ತಕ್ಬೀರ್’ ಎಂಬ ಇಸ್ಲಾಮಿಕ್ ಘೋಷಣೆಗಳನ್ನು ಕೂಗಿದರು.
Kashmir Files ನೋಡಿ ಸಲ್ಮಾನ್ ಹೇಳಿದ್ದೇನು ಎಂದು ಬಹಿರಂಗ ಪಡಿಸಿದ ನಟ ಅನುಪಮ್ ಖೇರ್
ಕ್ಷಮೆ ಕೇಳಿದ ಮೌಲ್ವಿ: ದ್ವೇಷ ಭಾಷಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ಫಾರುಕ್ ಕ್ಷಮೆ ಕೇಳಿದ್ದಾನೆ. ಕಾನೂನು ಕ್ರಮದ ಎಚ್ಚರಿಕೆ ಬಂದ ಬೆನ್ನಲ್ಲಿಯೇ ವಿಡಿಯೋ ಪ್ರಕಟಿಸಿ ದೇಶದ ಕ್ಷಮೆ ಯಾಚಿಸಿದ್ದಾರೆ. ಯಾವುದೇ ಧರ್ಮದ ವಿರುದ್ಧವಾಗಿ ನಾನು ಮಾತನಾಡಿಲ್ಲ. ಬದಲಾಗಿ ಸರ್ಕಾರದ ವಿರುದ್ಧವಾಗಿ ಮಾತನಾಡಿದ್ದೇನೆ. ಇಂಥ ಚಿತ್ರಗಳು ಬಂದಲ್ಲಿ ಸಮಾಜದ ಸ್ವಾಸ್ತ್ಯ ಹಾಳಾಗುತ್ತದೆ. ಸರ್ಕಾರ ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ಕಾಶ್ಮೀರಿ ಪಂಡಿತರು ನಮ್ಮ ಹೆಮ್ಮೆ, ಅವರು ಇಲ್ಲದೇ ಇದ್ದಲ್ಲಿ ಜಮ್ಮು ಕಾಶ್ಮೀರ ಪೂರ್ಣವಾಗುವುದಿಲ್ಲ ಎಂದು ಹೇಳಿದ್ದಾರೆ.