ಪಾಕಿಸ್ತಾನದ ಕೈ ಜಾರುತ್ತಿದೆ PoK, ಪ್ರತಿಭಟನೆಯಲ್ಲಿ ಮೊಳಗಿತು ಭಾರತದೊಂದಿಗೆ ವಿಲೀನ ಘೋಷಣೆ!

By Chethan Kumar  |  First Published May 12, 2024, 4:06 PM IST

ಪಾಕಿಸ್ತಾನ ಸರ್ಕಾರ, ಪಾಕಿಸ್ತಾನ ಸೇನೆ ಹಾಗೂ ಪೊಲೀಸರಿಗೆ ಇದೀಗ ತಲೆನೋವು ಹೆಚ್ಚಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪಾಕಿಸ್ತಾನ ಸೇನೆ, ಪೊಲೀಸರ ವಿರುದ್ಧ ದಾಳಿ ನಡೆಸಲಾಗಿದೆ. ಇದೇ ವೇಳೆ ಪ್ರತಿಭಟನೆಯಲ್ಲಿ ಭಾರತದ ಜೊತೆ ವಿಲೀನ ಘೋಷಣೆಗಳು ಮೊಳಗಿದೆ.
 


ನವದೆಹಲಿ(ಮೇ.12) ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಮ್ಮ ಅಂಗ, ಪಾಕಿಸ್ತಾನ ಕಬ್ಜಾ ಮಾಡಿಕೊಂಡಿದೆ ಎಂದು ಭಾರತ ಪದೇ ಪದೆ ಹೇಳಿಕೆ ನೀಡಿದೆ. ಇತ್ತೀಚೆಗಷ್ಟೇ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಲಿದೆ ಅನ್ನೋ ಹೇಳಿಕೆಗೆ ಭಾರತದಲ್ಲಿ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿತ್ತು. ಆದರೆ ಸದ್ಯ ನಡೆಯುತ್ತಿರುವ ಬೆಳವಣಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ತಾನಾಗಿ ಭಾರತದ ಜೊತೆ ವಿಲೀನಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದೆ. ಪಿಒಕೆಯಲ್ಲಿ ಪಾಕಿಸ್ತಾನ ಸರ್ಕಾರ, ಸೇನೆ ಹಾಗೂ ಪೊಲೀಸರು ವಿರುದ್ಧ ಆರಂಭಗೊಂಡ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದೆ. 144 ಸೆಕ್ಷನ್ ಜಾರಿ ಮಾಡಿದ್ದರೂ ಭಾರಿ ಸಂಖ್ಯೆಯಲ್ಲಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪಾಕ್ ಸೇನೆ ಹಾಗೂ ಪೊಲೀಸರ ದಬ್ಬಾಳಿಕೆ, ದೌರ್ಜನ್ಯ, ಬೆಲೆ ಏರಿಕೆ, ವಿದ್ಯುತ್ ಕಡಿತ ಸೇರಿದಂತೆ ಹಲವು ವಿಚಾರ ಮುಂದಿಟ್ಟು ಪ್ರತಿಭಟನೆ ಆರಂಭಗೊಂಡು ಇದೀಗ ತಾರಕಕ್ಕೇರಿದೆ. ಈ ಪ್ರತಿಭಟನೆಯಲ್ಲಿ ಸ್ಥಳೀಯರು ಭಾರತದ ಜೊತೆ ವಿಲೀನ ಘೋಷಣೆ ಕೂಗಿದ್ದಾರೆ. ಬ್ಯಾನರ್ ಹಿಡಿದ ಘಟನೆ ವರದಿಯಾಗಿದೆ.

ಕಳೆದೆರಡು ದಶಕಗಳಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ವಿರುದ್ಧವೂ ಹಲವು ಪ್ರತಿಭಟನೆಗಳು ನಡೆದಿದೆ. ಪಾಕಿಸ್ತಾನ ಹಾಗೂ ಚೀನಾ ಒಪ್ಪಂದ ಆಧಾರಿತ ಯೋಜನೆಗಳಿಗೆ ಹಲವು ಸ್ಥಳೀಯ ಸಂಘಟನೆಗಳು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದೆ. ಪಾಕಿಸ್ತಾನ ಸೇನೆ ನಡೆಸುತ್ತಿರುವ ದೌರ್ಜನ್ಯ, ಪಾಕಿಸ್ತಾನ ಸರ್ಕಾರದ ದುರಾಡಳಿತ ಕುರಿತು ಪ್ರತಿಭಟನೆಗಳಾಗಿದೆ. ಆದರೆ ಇದೇ ಮೊದಲ ಬಾರಿಗೆ ಪ್ರತಿಭಟನೆಯಲ್ಲಿ ಭಾರತದ ಜೊತೆ ವಿಲೀನದ ಮಾತುಗಳು ಕೇಳಿಬಂದಿದೆ. ಪಾಕಿಸ್ತಾನ ಇದೀಗ ಆಕ್ರಮಿತ ಕಾಶ್ಮೀರದ ಮೇಲಿಟ್ಟಿದ್ದ ಹಿಡಿತ ಸಡಿಲಗೊಳ್ಳುತ್ತಿದೆ.

Tap to resize

Latest Videos

undefined

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಾರಿತು ತಿರಂಗ, ಪಾಕ್ ಸೇನೆ ಮೇಲೆ ಸ್ಥಳೀಯರ ದಾಳಿ!

ಮುಜಾಫರಾಬಾದ್ ಹಾಗೂ ರಾವಲ್‌ಕೋಟ್ ಪ್ರಾಂತ್ಯದಲ್ಲಿ ಭಾರಿ ಪ್ರಮಾಣದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನೆಗಳು ತೀವ್ರಗೊಂಡಿದೆ. ಭದ್ರತಾ ಪಡೆಗಳ ವಿರುದ್ದವೇ ಸ್ಥಳೀಯರು ದಾಳಿ ನಡೆಸಿದ್ದಾರೆ. ಈ ಪೈಕಿ ರಾವಲ್‌ಕೋಟ್ ಮಂದಿ ಪ್ರತಿಭಟನೆಯಲ್ಲಿ ನಾವು ಭಾರತದ ಜೊತೆ ವಿಲೀನವಾಗುತ್ತೇವೆ ಅನ್ನೋ ಘೋಷಣೆ ಮೊಳಗಿಸಿದ್ದಾರೆ.

ಪ್ರತಿಭಟನೆಗಳಲ್ಲಿ ಆತಂಕಕಾರಿ ಬೆಳವಣಿಗೆ ಆಗುತ್ತಿರುವ ಕಾರಣ ಸೇನೆ ಹಾಗೂ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಆಶ್ರುವಾಯ ಸಿಡಿಸಿದ್ದಾರೆ. ಪೊಲೀಸರು ಪ್ರತಿಭಟನಾ ನಿರತರನ್ನು ಚದುರಿಸಲು ಪ್ರತಿದಾಳಿ ನಡೆಸಿದ್ದಾರೆ. ಈ ಘರ್ಷಣೆಯಲ್ಲಿ ಹಲವು ಸ್ಥಳೀಯರು ಗಾಯಗೊಂಡಿದ್ದಾರೆ. ಇಬ್ಬರು ಅಪ್ರಾಪ್ತ ಬಾಲಕಿಯರು ಈ ದಾಳಿಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಪಾಕಿಸ್ತಾನ ಸೇನೆ, ಗುಪ್ರಚರ ಇಲಾಖೆ ಅಧಿಕಾರಿಗಳ ವಾಹನಗಳನ್ನು ಪ್ರತಿಭಟನಾ ನಿರತರು ಪುಡಿ ಮಾಡಿದ್ದಾರೆ. 

ಬಿಜೆಪಿ ಸರ್ಕಾರ ರಚನೆಯಾಗುತ್ತಲೇ ಪಿಒಕೆ ಮರುವಶ: ಅಮಿತ್‌ ಶಾ

ಪಾಕಿಸ್ತಾನ ಹೆಚ್ಚುವರಿ ಸೇನೆ ಹಾಗೂ ಪೊಲೀಸರನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕಳುಹಿಸಿದೆ. ಪ್ರತಿಭಟನಾ ನಿರತರ ಆಕ್ರೋಶ ಹೆಚ್ಚಾಗುತ್ತಿದೆ. ಇತ್ತ ಪಾಕಿಸ್ತಾನ ಸರ್ಕಾರ ತುರ್ತು ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸುವ ಪ್ರಯತ್ನ ಮಾಡಿದೆ. 
 

click me!