Latest Videos

ಕೇದಾರನಾಥದ ಸರೋವರದಲ್ಲಿ ಹಿಮಕುಸಿತ: ಭಕ್ತರಲ್ಲಿ ಆತಂಕ

By Kannadaprabha NewsFirst Published Jul 1, 2024, 6:32 AM IST
Highlights

ಕೇದಾರನಾಥ ದೇವಸ್ಥಾನದ ಹಿಂದಿನ ಬೆಟ್ಟಗಳಲ್ಲಿ ಭಾನುವಾರ ಹಿಮಕುಸಿತ ಸಂಭವಿಸಿದ್ದು, ಯಾತ್ರಿಕರ ಆತಂಕಕ್ಕೆ ಕಾರಣವಾಗಿದೆ

ಕೇದಾರನಾಥ (ಜು.1): ಕೇದಾರನಾಥ ದೇವಸ್ಥಾನದ ಹಿಂದಿನ ಬೆಟ್ಟಗಳಲ್ಲಿ ಭಾನುವಾರ ಹಿಮಕುಸಿತ ಸಂಭವಿಸಿದ್ದು, ಯಾತ್ರಿಕರ ಆತಂಕಕ್ಕೆ ಕಾರಣವಾಗಿದೆ. ‘ಭಾನುವಾರ ಮುಂಜಾನೆ 5 ಗಂಟೆಗೆ ಹಿಮಕುಸಿತವಾಗಿದ್ದು ಯಾವುದೇ ಆಸ್ತಿ ಹಾನಿ ಹಾಗೂ ಸಾವುನೋವು ಸಂಭವಿಸಿಲ್ಲ’ ಎಂದು ರುದ್ರಪ್ರಯಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಶಾಖಾ ಅಶೋಕ್ ಭದನೆ ಹೇಳಿದ್ದಾರೆ. 

ಹಿಮ ಬೆಟ್ಟದಿಂದ ಕೆಳಗಿಳಿದು ಬಂದಿದ್ದು, ಅದರ ಧೂಳು ಎದ್ದಿತ್ತು. ಈ ಪರಿಸ್ಥಿತಿ ಕೆಲಕಾಲ ಮುಂದುವರೆದಿದೆ. ಬದರಿನಾಥ, ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ಸೇರಿದ ನಾಲ್ಕು ಧಾಮಗಳ ಯಾತ್ರೆಗೆ ಈಗ ನಡೆದಿದ್ದು, ಲಕ್ಷಾಂತರ ಭಕ್ತರು ಭೇಟಿ ನೀಡಿದ್ದಾರೆ 

ಕೇದಾರನಾಥದಲ್ಲಿ ಅಣ್ಣ ತಮ್ಮನ ಸಮಾಗಮ: ಮುಖಾಮುಖಿಯಾದ ರಾಹುಲ್, ವರುಣ್ ಗಾಂಧಿ !

 ಕೇದಾರನಾಥ ಕಣಿವೆಯ ಮೇಲಿನ ತುದಿಯಲ್ಲಿರುವ ಹಿಮದಿಂದ ಆವೃತವಾದ ಪರ್ವತ ಶ್ರೇಣಿಯ ಕೆಳಗೆ ಚೋರಬರಿ ಹಿಮನದಿಯಲ್ಲಿರುವ ಗಾಂಧಿ ಸರೋವರದ ಮೇಲಿನ ಪ್ರದೇಶದಲ್ಲಿ ಹಿಮಕುಸಿಯುತ್ತಿದೆ. ಆದರೆ ಹಿಮಕುಸಿತದಿಂದ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ. ಕೇದಾರನಾಥ ಕಣಿವೆ ಸೇರಿದಂತೆ ಇಡೀ ಪ್ರದೇಶ ಸುರಕ್ಷಿತವಾಗಿದೆ ಎಂದು ವರದಿಯಾಗಿದೆ. 

ಕೇದಾರನಾಥ, ಬದ್ರಿನಾಥ ದೇಗುಲಕ್ಕೆ 5 ಕೋಟಿ ರೂ ದೇಣಿಗೆ ನೀಡಿದ ಉದ್ಯಮಿ ಮುಕೇಶ್ ಅಂಬಾನಿ!

ಸುಮಾರು ಐದು ನಿಮಿಷಗಳ ಕಾಲ ನಡೆದ ಈ ನೈಸರ್ಗಿಕ ವಿದ್ಯಮಾನವನ್ನು ನೋಡಿದ ಭಕ್ತರಲ್ಲಿ ಕುತೂಹಲ ಜೊತೆಗೆ ಆತಂಕವೂ ಮೂಡಿಸಿತು. ಕಳೆದ ಜೂನ್ 8 ರಂದು ಚೋರಬರಿ ಹಿಮನದಿಯಲ್ಲಿ ಹಿಮಕುಸಿತ ಸಂಭವಿಸಿತ್ತು. 2022 ರಲ್ಲಿ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಮೂರು ಹಿಮಕುಸಿತವಾಗಿತ್ತು. 2023 ರ ಮೇ ಮತ್ತು ಜೂನ್‌ನಲ್ಲಿ ಚೋರಬರಿ ಹಿಮನದಿಯಲ್ಲಿ ಇಂತಹ ಐದು ಹಿಮಪಾತದ ಘಟನೆ ನಡೆದ ಬಗ್ಗೆ ವರದಿಯಾಗಿತ್ತು. ಇದೀಗ ಮತ್ತೊಮ್ಮೆ ಹಿಮ ಕುಸಿತವಾಗಿದೆ.

click me!