#Unite2FightCorona, ಕೋವಿಡ್‌ ವಿರುದ್ಧ ಜನಾಂದೋಲನ, ಬೃಹತ್ ಕಾರ್ಯಕ್ರಮಕ್ಕೆ ಮೋದಿ ಚಾಲನೆ!

By Suvarna News  |  First Published Oct 8, 2020, 8:37 AM IST

ಕೋವಿಡ್‌ ವಿರುದ್ಧ ಜನಾಂದೋಲನ| ಬೃಹತ್‌ ಪ್ರಚಾರ ಕಾರ್ಯಕ್ರಮಕ್ಕೆ ಮೋದಿ ಚಾಲನೆ| ಮಾಸ್ಕ್‌, ಅಂತರ, ಸ್ವಚ್ಛತೆಗೆ ಒತ್ತು


ನವದೆಹಲಿ(ಆ.08): ಹಬ್ಬದ ಸೀಸನ್‌, ಚಳಿಗಾಲ ಆರಂಭವಾಗುತ್ತಿರುವುದು ಹಾಗೂ ಆರ್ಥಿಕತೆ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿರುವ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಈ ಜನಾಲೋಂದನಕ್ಕೆ ಚಾಲನೆ ನೀಡಿದ್ದಾರೆ. #Unite2FightCorona ಸಮಎಂಬ ಹ್ಯಾಷ್‌ ಟ್ಯಾಗ್‌ನಡಿ ಟ್ವೀಟ್‌ ಮಾಡಲಾಗುತ್ತಿದ್ದು, ಕೊರೋನಾ ವಿರುದ್ಧದ ಸಮರದಲ್ಲಿ ಒಗ್ಗಟ್ಟಿನಿಂದ ಹೋರಾಡಲು ಕರೆ ಮಾಡಿದ್ದಾರೆ.

India’s COVID-19 fight is people driven and gets great strength from our COVID warriors. Our collective efforts have helped saved many lives. We have to continue the momentum and protect our citizens from the virus. pic.twitter.com/GrYUZPZc2m

— Narendra Modi (@narendramodi)

ಈ ಅಭಿಯಾನದಡಿ ಸರಣಿ ಟ್ವೀಟ್ ಮಾಡಿರುವ ಮೋದಿ 'ಕೊರೋನಾದ ವಿರುದ್ಧ ಭಾರತದ ಸಮರ ಜನರ ನೇತೃತ್ವದಲ್ಲೇ ನಡೆಯುತ್ತಿದೆ. ಇದಕ್ಕೆ ಕೊರೋನಾ ವಾರಿಯರ್ಸ್ ಮತ್ತಷ್ಟು ಬಲ ತುಂಬಿದ್ದಾರೆ. ನಮ್ಮ ಈ ಒಗ್ಗಟ್ಟಿನ ಶ್ರಮ ಅನೇಕರ ಪ್ರಾಣ ಕಾಪಾಡಿದೆ. ಈ ನಮ್ಮ ಶ್ರಮವನ್ನು ನಮ್ಮ ನಾಗರಿಕರನ್ನು ಕಾಫಾಡುವ ಸಲುವಾಗಿ ಮುಂದುವರೆಸೋಣ ಎಂದು ಮನವಿ ಮಾಡಿದ್ದಾರೆ.

Let us !

Let us always remember:

Wear a mask.

Wash hands.

Follow social distancing.

Practice ‘Do Gaj Ki Doori.’

Together, we will succeed.

Together, we will win against COVID-19. pic.twitter.com/x5bymQpqjx

— Narendra Modi (@narendramodi)

Latest Videos

undefined

ಇದೇ ವೇಳೆ ಕೊರೋನಾ ವಿರುದ್ಧದ ಸಮರದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನೂ ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ. ಮಾಸ್ಕ್ ತಪ್ಪದೇ ಧರಿಸಿ, ಕೈಗಳನ್ನು ಆಗಾ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ರೆರಡು ಅಡಿ ಅಂತರವಿರಲಿ. ಒಗ್ಗಟ್ಟಿನಿಂದ ನಾವು ಗೆಲ್ಲುತ್ತೇವೆ. ಒಂದಾಗಿ ನಾವು ಕೊರೋನಾ ವಿರುದ್ಧ ಹೋರಾಡೋಣ ಎಂದು ಯಾಚಿಸಿದ್ದಾರೆ.

ಇನ್ನು ಈ ಸಂಬಂಧ ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಲಸಿಕೆ ಲಭ್ಯವಾಗುವವರೆಗೂ ಜನರು ಕೊರೋನಾ ನಿಯಂತ್ರಿಸಲು ಸ್ಕ್‌ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರಬೇಕು. ಈ ಮೂರೂ ಕ್ರಮಗಳು ವೈರಸ್‌ ವಿರುದ್ಧ ಪ್ರತಿರೋಧದಂತೆ ಕೆಲಸ ಮಾಡಲಿವೆ ಎಂದು ತಿಳಿಸಿದ್ದಾರೆ.

ಜನಾಂದೋಲನದ ಭಾಗವಾಗಿ ಪೋಸ್ಟರ್‌, ಬ್ಯಾನರ್‌ ಹಾಗೂ ಸ್ಟಿಕರ್‌ಗಳನ್ನು ಸಾರ್ವಜನಿಕ ಸ್ಥಳಗಳು, ಮೆಟ್ರೋ, ಆಟೋರಿಕ್ಷಾ ಹಾಗೂ ಇನ್ನಿತರೆ ಸಾರ್ವಜನಿಕ ಸಾರಿಗೆ ಮೇಲೆ ಅಳವಡಿಸಿ ಜನರಿಗೆ ಸಂದೇಶ ರವಾನಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳನ್ನೂ ಬಳಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದಲ್ಲದೆ ಗೋಡೆ ಬರಹ, ಸರ್ಕಾರಿ ಕಚೇರಿ ಆವರಣದಲ್ಲಿ ಎಲೆಕ್ಟ್ರಾನಿಕ್‌ ಡಿಸ್‌ಪ್ಲೇ, ಕರಪತ್ರ ವಿತರಣೆಯಂತಹ ಕ್ರಮಗಳನ್ನೂ ಕೈಗೊಳ್ಳಲು ಸರ್ಕಾರ ಉದ್ದೇಶಿಸಿದೆ. ಸ್ಥಳೀಯ ಕೇಬಲ್‌ ಆಪರೇಟರ್‌ಗಳ ಸಹಕಾರದ ಮೂಲಕ ಟೀವಿಗಳಲ್ಲಿ ಕೋವಿಡ್‌ ಸಂದೇಶ ಬಿತ್ತರಿಸುವ ಆಲೋಚನೆಯೂ ಇದೆ.

ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಪಾಲಿಸಿ, ಕೈಗಳನ್ನು ಶುದ್ಧವಾಗಿಟ್ಟುಕೊಳ್ಳಿ ಎಂಬ ಸಂದೇಶದೊಂದಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಭಾರಿ ತೀವ್ರತೆಯ ಪ್ರಚಾರಾಂದೋಲನ ನಡೆಸಲು ಸರ್ಕಾರ ಉದ್ದೇಶಿಸಿದೆ. ಜನರಲ್ಲಿ ಇದರ ಸಹಭಾಗಿತ್ವವನ್ನು ಪ್ರೋತ್ಸಾಹಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

click me!