* ವೈವಾಹಿಕ ಅತ್ಯಾಚಾರ ಅಪರಾಧವೇ ಅಥವಾ ಅಲ್ಲವೇ ಎಂಬ ಬಗ್ಗೆ ಸಿಗದ ಅಂತಿಮ ತೀರ್ಪು
* ದೆಹಲಿ ಹೈಕೋರ್ಟ್ ನ್ಯಾಯಾಧೀಶರಲ್ಲಿ ಮೂಡದ ಒಮ್ಮತ
* ಸುಪ್ರೀಂ ಅಂಗಳಕ್ಕೆ ಬಿದ್ದ ಪ್ರಕರಣದ ವಿಚಾರಣೆ
ನವದೆಹಲಿ(ಮೇ.11): ವೈವಾಹಿಕ ಅತ್ಯಾಚಾರ ಅಪರಾಧವೇ ಅಥವಾ ಅಲ್ಲವೇ ಎಂಬುದರ ಕುರಿತು ದೆಹಲಿ ಹೈಕೋರ್ಟ್‌ನಲ್ಲಿ ಯಾವುದೇ ತೀರ್ಪು ಸಿಕ್ಕಿಲ್ಲ. ಹೈಕೋರ್ಟಿನ ದ್ವಿಸದಸ್ಯ ಪೀಠವು ವೈವಾಹಿಕ ಅತ್ಯಾಚಾರದ ಬಗ್ಗೆ ಪ್ರತ್ಯೇಕವಾಗಿ ತೀರ್ಪು ನೀಡಿದೆ. ಇದರಿಂದಾಗಿ ನಿರ್ಧಾರದ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ನ್ಯಾಯಮೂರ್ತಿ ಶಕ್ಧರ್ ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಕರೆದರು. ಮತ್ತೊಂದೆಡೆ, ನ್ಯಾಯಮೂರ್ತಿ ಹರಿಶಂಕರ್ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಈ ನಿರ್ಧಾರದ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗದಿದ್ದಾಗ, ಇಬ್ಬರೂ ನ್ಯಾಯಾಧೀಶರು ಈ ವಿಷಯವನ್ನು ಸುಪ್ರೀಂ ಕೋರ್ಟ್‌ಗೆ ಹೋಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಮೂರ್ತಿ ರಾಜೀವ್ ಶಕ್ಧರ್ ಅವರು ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಹೇಳಿದ್ದಾರೆ. ಅಲ್ಲದೆ, ಐಪಿಸಿಯ ಸೆಕ್ಷನ್ 375 ರ ವಿನಾಯಿತಿ 2 ಅನ್ನು ಅಸಂವಿಧಾನಿಕ ಎಂದು ಕರೆದಿದ್ದಾರೆ. ಆದರೆ ನ್ಯಾಯಮೂರ್ತಿ ಸಿ.ಹರಿಶಂಕರ್ ಇದನ್ನು ಒಪ್ಪಲಿಲ್ಲ.
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, 20 ವರ್ಷದ ಮಹಿಳೆಯ ಮೇಲೆ ಕೇಸ್!
ಅರ್ಜಿದಾರರು ತಮ್ಮ ಪತಿಯಿಂದ ಲೈಂಗಿಕ ಕಿರುಕುಳಕ್ಕೊಳಗಾದ ವಿವಾಹಿತ ಮಹಿಳೆಯರಿಗೆ ತಾರತಮ್ಯವನ್ನು ತೋರಿಸುತ್ತಾರೆ ಎಂಬ ಕಾರಣಕ್ಕಾಗಿ ಐಪಿಸಿ (ಅತ್ಯಾಚಾರ) ಸೆಕ್ಷನ್ 375 ರ ಅಡಿಯಲ್ಲಿ ವೈವಾಹಿಕ ಅತ್ಯಾಚಾರವನ್ನು ಪ್ರಶ್ನಿಸಿದ್ದರು. ಐಪಿಸಿಯ ಸೆಕ್ಷನ್ 375 ರ ವಿನಾಯಿತಿಯು ವೈವಾಹಿಕ ಅತ್ಯಾಚಾರವನ್ನು ಅಪರಾಧದ ವರ್ಗದಿಂದ ಹೊರಗಿಡುತ್ತದೆ ಮತ್ತು ಮದುವೆಯಲ್ಲಿ ಪುರುಷನು ತನ್ನ ಹೆಂಡತಿಯೊಂದಿಗೆ ಬಲವಂತದ ಲೈಂಗಿಕತೆಯನ್ನು ಹೊಂದುವುದು ಅತ್ಯಾಚಾರವಲ್ಲ ಎಂದು ತೋರಿಸುತ್ತದೆ.
ಮಾರ್ಚ್‌ನಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು
ಕರ್ನಾಟಕ ಹೈಕೋರ್ಟ್ ಮಾರ್ಚ್‌ನಲ್ಲಿ ಈ ವಿಷಯದ ಕುರಿತು ಮಹತ್ವದ ತೀರ್ಪು ನೀಡಿತ್ತು. ಸಂತ್ರಸ್ತೆಯನ್ನು ತನ್ನ ಹೆಂಡತಿ ಎಂದು ಹೇಳುವ ಮೂಲಕ ಪುರುಷನನ್ನು ಅತ್ಯಾಚಾರ ಆರೋಪಗಳಿಂದ ಮುಕ್ತಗೊಳಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಸಂಸತ್ತಿನಲ್ಲಿ ಕಾನೂನಿನಲ್ಲಿ ಬರುವ ಇಂತಹ ಅಸಮಾನತೆಗಳನ್ನು ಹೋಗಲಾಡಿಸಲು ಪ್ರಯತ್ನಿಸಬೇಕು ಎಂದು ಸಂಸದರಿಗೂ ಹೈಕೋರ್ಟ್ ಸೂಚಿಸಿದೆ.
2017ರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ
ಕಳೆದ ವರ್ಷ ಆಗಸ್ಟ್‌ನಲ್ಲಿ ಕೇರಳ ಹೈಕೋರ್ಟ್ ಭಾರತದಲ್ಲಿ ವೈವಾಹಿಕ ಅತ್ಯಾಚಾರಕ್ಕೆ ಯಾವುದೇ ಶಿಕ್ಷೆ ವಿಧಿಸಲು ಅವಕಾಶವಿಲ್ಲ ಎಂದು ಗಮನಿಸಿತ್ತು. ಇದು ವಿಚ್ಛೇದನಕ್ಕೆ ಕಾರಣವಿರಬಹುದು. ಈ ಹಿಂದೆ ಅಕ್ಟೋಬರ್ 11, 2017 ರಂದು ವೈವಾಹಿಕ ಅತ್ಯಾಚಾರದ ಕುರಿತು ಮಹತ್ವದ ತೀರ್ಪು ನೀಡುವಾಗ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಂಡತಿಯೊಂದಿಗೆ ದೈಹಿಕ ಸಂಬಂಧವನ್ನು ಸಹ ಅಪರಾಧವೆಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಒಂದು ವರ್ಷದೊಳಗೆ ಹೆಂಡತಿ ದೂರು ಸಲ್ಲಿಸಿದರೆ ಕ್ರಮ ಕೈಗಪೊಳ್ಳಬಹುದೆಂದಿತ್ತು.
15ರ ಬಾಲಕಿಯ ಥಳಿಸಿ ಸಾಮೂಹಿಕ ಅತ್ಯಾಚಾರ, ಆರೋಪಿಗಳು ಪರಾರಿ: ಯೋಗಿ ನಾಡಿನಲ್ಲಿ ಶಾಕಿಂಗ್ ಘಟನೆ!
ಅಷ್ಟಕ್ಕೂ ಅತ್ಯಾಚಾರದ ವ್ಯಾಖ್ಯಾನವೇನು?
ಪುರುಷನು ಮಹಿಳೆಯೊಂದಿಗೆ ಬಲವಂತವಾಗಿ ದೈಹಿಕ ಸಂಬಂಧವನ್ನು ಬೆಳೆಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 375 ಹೇಳುವಂತೆ ಒಬ್ಬ ವ್ಯಕ್ತಿಯು ಮಹಿಳೆಯ ಇಚ್ಛೆಯಿಲ್ಲದೆ, ಆಕೆಯ ಒಪ್ಪಿಗೆಯಿಲ್ಲದೆ, ಯಾವುದೇ ಭಯ ಅಥವಾ ಹಾನಿ, ಮದುವೆ ಅಥವಾ ಯಾವುದೇ ಪ್ರಚೋದನೆಯನ್ನು ತೋರಿಸಿ ಮಹಿಳೆಯೊಂದಿಗೆ ಸಂಬಂಧವನ್ನು ಹೊಂದಿದ್ದಲ್ಲಿ ಮಹಿಳೆಯು ಉತ್ತಮ ಮಾನಸಿಕ ಅಥವಾ ದೈಹಿಕ ಸ್ಥಿತಿಯಲ್ಲಿಲ್ಲ ಮತ್ತು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯೊಂದಿಗೆ ಸಂಬಂಧವನ್ನು ಹೊಂದಿದ್ದರೆ, ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ವೈವಾಹಿಕ ಅತ್ಯಾಚಾರದ ಬಗ್ಗೆ ಇದುವರೆಗೆ ಯಾವುದೇ ನಿರ್ದಿಷ್ಟ ನಿರ್ಧಾರವನ್ನು ತೆಗೆದುಕೊಂಡಿಲ್ಲ.