100 ಕೋಟಿ ರೂ. ಆರೋಪ 500 ಕೋಟಿಯಾಗಿದ್ದು ಹೇಗೆ? ಕಾನೂನು ಸಮರಕ್ಕೆ ಸಿದ್ಧವಾದ ಬಿಜೆಪಿ

Published : Oct 25, 2026, 09:23 AM IST
bjp flag

ಸಾರಾಂಶ

ಮರಾಠಾ ಮೀಸಲು ಹೋರಾಟಗಾರ ಮನೋಜ್‌ ಜಾರಂಗೆ ಅವರಿಗೆ 500 ಕೋಟಿ ರೂ. ನೀಡಿದ ಆರೋಪದ ಆಡಿಯೋ ನಕಲಿ ಎಂದು ಬಿಜೆಪಿ ಹೇಳಿದೆ. ಇದರ ಹಿಂದೆ ಸಂಜಯ್‌ ರಾವುತ್‌ ಅವರ ಕೈವಾಡವಿದ್ದು, ಎಐ ಬಳಸಿ ಈ ಆಡಿಯೋ ಸೃಷ್ಟಿಸಲಾಗಿದೆ ಎಂದು ಆರೋಪಿಸಿದೆ. ಈ ಬಗ್ಗೆ ಫಾರೆನ್ಸಿಕ್ ತನಿಖೆಗೆ ಆದೇಶಿಸಲಾಗಿದೆ.

ಮುಂಬೈ: ಮರಾಠಾ ಮೀಸಲು ಹೋರಾಟಗಾರ ಮನೋಜ್‌ ಜಾರಂಗೆ ಅವರನ್ನು ಸುಮ್ಮನಾಗಿಸಲು 500 ಕೋಟಿ ರು. ನೀಡಿದ ಆರೋಪಕ್ಕೆ ಸಂಬಂಧಿಸಿದ ವಿವಾದಾತ್ಮಕ ಆಡಿಯೋ ನಕಲಿ, ಇದರ ಹಿಂದೆ ಶಿವಸೇನೆ (ಉದ್ದವ್‌ ಬಣ) ಮುಖಂಡ ಸಂಜಯ್‌ ರಾವುತ್‌ ಇದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಭಿನ್ನಮತ ಸೃಷ್ಟಿಸಲು ಪ್ರಯತ್ನ

ಸಂಜಯ್‌ ರಾವುತ್‌ ಅವರು ನಕಲಿ ಎಐ ಆಡಿಯೋ ಸೃಷ್ಟಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಅಜೆಂಡಾ ಜಾರಿಗೊಳಿಸಲು ಹಾಗೂ ಆಡಳಿತಾರೂಢ ಮೈತ್ರಿಕೂಟ ನಡುವೆ ಭಿನ್ನಮತ ಸೃಷ್ಟಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದೆ. ಜತೆಗೆ ಅಗತ್ಯಬಿದ್ದರೆ ರಾವುತ್‌ ವಿರುದ್ಧ ದೂರು ನೀಡಲಾಗುವುದು ಎಂದು ಹೇಳಿದೆ.

ರಾಹುಲ್‌ ಗಾಂಧಿಯಿಂದ ಹಣ ನೀಡಿದ್ದಾರೆಯೇ?

ರಾವುತ್‌ ಅವರು ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾದ ಆಡಿಯೋ ಕ್ಲಿಪ್‌ ಅನ್ನು ಬಿಜೆಪಿ ಎಂಎಎಲ್ಸಿಯೊಬ್ಬರು ಲೀಕ್‌ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ನವನಾಥ್‌ ಬನ್‌ ಅವರು, ಆ ಆಡಿಯೋ ಸಂಬಂಧ ಅಗತ್ಯಬಿದ್ದರೆ ಸಂಜಯ್‌ ರಾವುತ್‌ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಮತ್ತು ಈ ರೀತಿಯ ಷಡ್ಯಂತ್ರ ರೂಪಿಸಲು ರಾಹುಲ್‌ ಗಾಂಧಿಯಿಂದ ಹಣ ನೀಡಿದ್ದಾರೆಯೇ ಎಂಬ ಬಗ್ಗೆ ತನಿಖೆಯನ್ನೂ ನಡೆಸಲಾಗುವುದು ಎಂದು ಹೇಳಿದ್ದಾರೆ.

ಮಾಧ್ಯಮದ ಗಮನ ಸೆಳೆಯಲು 500 ಕೋಟಿಗೆ ಹೆಚ್ಚಳ

ರಾವುತ್‌ ಅವರು ಈ ಆಡಿಯೋ ಕ್ಲಿಪ್‌ ವಿಚಾರವಾಗಿ 2 ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ, ಯೂಟ್ಯೂಬ್‌ನಲ್ಲಿ ಲಭ್ಯವಿರುವ ಧ್ವನಿ ಮಾದರಿಯನ್ನು ಆಧಾರವಾಗಿಟ್ಟುಕೊಂಡು ಎಐ ಬಳಸಿ ಈ ಆಡಿಯೋ ಸಿದ್ಧಪಡಿಸಲಾಗಿದೆ. ಈ ಕುರಿತ ಸ್ಕ್ರಿಪ್ಟ್‌ ಅನ್ನು ಸಾಮ್ನಾದಲ್ಲಿ ಸಿದ್ಧವಾಗಿದ್ದು, ಆರಂಭದಲ್ಲಿ 100 ಕೋಟಿ ರು. ನೀಡಿದ ಆರೋಪ ಮಾಡಲಾಗಿತ್ತು. ಆ ಬಳಿಕ ಮಾಧ್ಯಮದ ಗಮನ ಸೆಳೆಯಲು ಅದನ್ನು 500 ಕೋಟಿ ರು.ಗೆ ಹೆಚ್ಚಿಸಲಾಗಿದೆ ಎಂದು ದೂರಿದ್ದಾರೆ.

ಬಿಜೆಪಿ ನಾಯಕರು, ಶಿಂದೆ ಹಾಗೂ ಜಾರಂಗೆ ಅವರ ಗೌರವ ಹಾಳುಗೆಡವಲು ಮತ್ತು ಮಿತ್ರಪಕ್ಷಗಳ ನಡುವೆ ಭಿನ್ನಮತ ಸೃಷ್ಟಿಸಲು ಈ ಆಡಿಯೋ ಸಿದ್ಧಪಡಿಸಲಾಗಿದೆ. ಈಗಾಗಲೇ ಈ ಆಡಿಯೋ ಕುರಿತು ಮುಖ್ಯಮಂತ್ರಿ ಫಡ್ನವೀಸ್‌ ಅ‍ವರು ಫಾರೆನ್ಸಿಕ್‌ ತನಿಖೆಗೆ ಆದೇಶಿಸಿದ್ದಾರೆ ಎಂದರು.

ಇದನ್ನೂ ಓದಿ: Farooq Abdullah: 'ಪಾಕಿಸ್ತಾನ ನಮ್ಮನ್ನು ರಕ್ಷಿಸುತ್ತಿದೆ..' ಫಾರೂಕ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Adulterated Ghee: ತಿರುಪತಿ ಬಳಿಕ ಶಬರಿಮಲೇಲೂ ಕಳಪೆ ತುಪ್ಪ ಪೂರೈಕೆ ಗೋಲ್ಮಾಲ್, ಗುತ್ತಿಗೆದಾರ ಅರೆಸ್ಟ್
Farooq Abdullah: 'ಪಾಕಿಸ್ತಾನ ನಮ್ಮನ್ನು ರಕ್ಷಿಸುತ್ತಿದೆ..' ಫಾರೂಕ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ!