ಸರ್ಕಾರದ ನಿರ್ಧಾರ ಸಮಾನತೆಯ ಹಕ್ಕನ್ನು ನಿರಾಕರಿಸುತ್ತಿದೆ ಎಂದಿತ್ತು. ಮೀಸಲು ಮಿತಿಯನ್ನು ಶೇ.50ಕ್ಕಿಂತ ಹೆಚ್ಚಿಸಲು ಯಾವುದೇ ವಿಶೇಷ ಸನ್ನಿವೇಶ ಎದುರಾಗಿಲ್ಲ ಎಂದು ಹೇಳಿತ್ತು. ಜೊತೆಗೆ ಮೀಸಲಿಗೆ ಶೇ.50ರ ಮಿತಿ ಹಾಕಿದ್ದ 29 ವರ್ಷಗಳ ಹಳೆಯ ಮಂಡಲ್ ತೀರ್ಪನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆಂಬ ಮನವಿಯನ್ನು ಸಾಂವಿಧಾನಿಕ ಪೀಠ ತಿರಸ್ಕರಿಸಿತ್ತು.
ನವದೆಹಲಿ (ಏಪ್ರಿಲ್ 22, 2023): ಮರಾಠ ಸಮುದಾಯಕ್ಕೆ ಶೇ.12ರಷ್ಟು ಮೀಸಲು ನೀಡುವ ಮೂಲಕ ರಾಜ್ಯದಲ್ಲಿನ ಒಟ್ಟಾರೆ ಮೀಸಲು ಪ್ರಮಾಣವನ್ನು ಶೇ. 65ಕ್ಕೆ ಏರಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಮತ್ತೆ ನೀಡಿದೆ. ಈ ಮೂಲಕ ಅತ್ಯಂತ ಅನಿವಾರ್ಯ ಸನ್ನಿವೇಶ ಹೊರತುಪಡಿಸಿ ಉಳಿದ ಸನ್ನಿವೇಶದಲ್ಲಿ ಮೀಸಲು ಮಿತಿ ಶೇ.50ರ ಗಡಿ ದಾಟಬಾರದು ಎಂದು ಪುನರುಚ್ಚರಿಸಿದೆ.
ಪ್ರಕರಣ ಹಿನ್ನೆಲೆ: ಮಹಾರಾಷ್ಟ್ರ ಸರ್ಕಾರ (Maharashtra Government) 2018ರಲ್ಲಿ ಮರಾಠರಿಗೆ (Marathas) ಉದ್ಯೋಗ (Job), ಶಿಕ್ಷಣದಲ್ಲಿ (Education) ಶೇ.12ರಷ್ಟು ಮೀಸಲು (Reservation) ನೀಡಿತ್ತು. ಈ ಮೂಲಕ ರಾಜ್ಯದಲ್ಲಿದ್ದ (State) ಶೇ. 53ರ ಮೀಸಲು ಮಿತಿಯನ್ನು ಶೇ. 65ಕ್ಕೆ ಹೆಚ್ಚಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ (Supreme Court) ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿಗಳನ್ನು ಮಾನ್ಯ ಮಾಡಿದ್ದ ಸುಪ್ರೀಂಕೋರ್ಟ್ 2021ರಲ್ಲಿ ಮರಾಠ ಮೀಸಲು ಆದೇಶ ವಜಾ ಮಾಡಿತ್ತು. ಸರ್ಕಾರದ ನಿರ್ಧಾರ ಸಮಾನತೆಯ ಹಕ್ಕನ್ನು ನಿರಾಕರಿಸುತ್ತಿದೆ ಎಂದಿತ್ತು. ಮೀಸಲು ಮಿತಿಯನ್ನು ಶೇ.50ಕ್ಕಿಂತ ಹೆಚ್ಚಿಸಲು ಯಾವುದೇ ವಿಶೇಷ ಸನ್ನಿವೇಶ ಎದುರಾಗಿಲ್ಲ ಎಂದು ಹೇಳಿತ್ತು. ಜೊತೆಗೆ ಮೀಸಲಿಗೆ ಶೇ.50ರ ಮಿತಿ ಹಾಕಿದ್ದ 29 ವರ್ಷಗಳ ಹಳೆಯ ಮಂಡಲ್ ತೀರ್ಪನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆಂಬ ಮನವಿಯನ್ನು ಸಾಂವಿಧಾನಿಕ ಪೀಠ ತಿರಸ್ಕರಿಸಿತ್ತು.
ಇದನ್ನು ಓದಿ: ಸುಪ್ರೀಂಕೋರ್ಟ್ ವಿರೋಧ ಪಕ್ಷಗಳಿಗೆ ಹೊಡೆತ ನೀಡಿದೆ: ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪಕ್ಕೆ ಚಾಟಿ ಬೀಸಿದ ಮೋದಿ
ಬಳಿಕ 2022ರಲ್ಲಿ ಈ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಮತ್ತು ಈ ಅರ್ಜಿಯನ್ನು ಮುಕ್ತ ವಿಚಾರಣೆಗೆ ಒಳಪಡಿಸುವಂತೆ ಮಹಾರಾಷ್ಟ್ರ ಸರ್ಕಾರ ಕೋರಿತ್ತು. ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ನ್ಯಾಯಪೀಠ, 2021ರ ಆದೇಶ ಪುನರ್ ಪರಿಶೀಲನೆ ಅಗತ್ಯವಿಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಏಪ್ರಿಲ್ 11ರಂದು ತನ್ನ ಆದೇಶದಲ್ಲಿ ತಿಳಿಸಿದೆ. ಈ ಆದೇಶ ತಡವಾಗಿ ಬಹಿರಂಗವಾಗಿದೆ.
2021ರಲ್ಲಿ ಹೇಳಿದ್ದೇನು?
ಮೇ 5, 2021 ರಂದು ಸುಪ್ರೀಂ ಕೋರ್ಟ್, ಮಹಾರಾಷ್ಟ್ರದಲ್ಲಿ ಕಾಲೇಜು ಪ್ರವೇಶ ಮತ್ತು ಉದ್ಯೋಗಗಳಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಒಟ್ಟಾರೆ ಮೀಸಲಾತಿಗಳ ಮೇಲಿನ 50 ಪ್ರತಿಶತ ಮಿತಿಯ ಉಲ್ಲಂಘನೆಯನ್ನು ಸಮರ್ಥಿಸಲು ಯಾವುದೇ ಅಸಾಧಾರಣ ಸಂದರ್ಭಗಳಿಲ್ಲ ಎಂದೂ ಹೇಳಿತ್ತು.
ಇದನ್ನೂ ಓದಿ: ರಾಹುಲ್ ಗಾಂಧಿ ರೀತಿ ತತ್‌ಕ್ಷಣದ ಅರ್ನಹತೆ ಚುನಾಯಿತ ಪ್ರತಿನಿಧಿಯ ವಾಕ್ ಸ್ವಾತಂತ್ರ್ಯ ಕಸಿಯುತ್ತದೆ: ಸುಪ್ರೀಂಗೆ ಮೊರೆ
ಈ ಮಧ್ಯೆ, ಮರಾಠಾ ಮೀಸಲಾತಿ ಕುರಿತ ಮರುಪರಿಶೀಲನಾ ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಲು ನಿರ್ಧರಿಸಿತ್ತು. ಶುಕ್ರವಾರ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಸಮಿತಿಯ ಭಾಗವಾಗಿರುವ ಇತರ ಸಂಪುಟ ಸಚಿವರ ನೇತೃತ್ವದಲ್ಲಿ ಮರಾಠಾ ಮೀಸಲಾತಿ ಸಮಿತಿಯ ಸಭೆ ನಡೆಯಿತು.
ಸಭೆಯ ನಂತರ, ರಾಜ್ಯದಲ್ಲಿ ಮರಾಠ ಸಮುದಾಯದ ಸಮಗ್ರ ಮತ್ತು ವೈಜ್ಞಾನಿಕ ಸಮೀಕ್ಷೆ ನಡೆಸಲು ಹೊಸ ಆಯೋಗವನ್ನು ನೇಮಿಸಲು ನಿರ್ಧರಿಸಲಾಯಿತು. ಮಹಾರಾಷ್ಟ್ರ ಸರ್ಕಾರವು ಮರಾಠ ಮೀಸಲಾತಿ ಬಗ್ಗೆ ಸಕಾರಾತ್ಮಕವಾಗಿದೆ ಮತ್ತು ಅದನ್ನು ಪೂರೈಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಿಜೆಪಿ ಸರ್ಕಾರ ಜೇನು ನೀಡಿದೆ: ಕೋಟ ಶ್ರೀನಿವಾಸ ಪೂಜಾರಿ