ನಾಗಪುರದ ಸ್ಫೋಟಕ ತಯಾರಿಕಾ ಘಟಕ ಬ್ಲಾಸ್ಟ್ 6 ಮಹಿಳೆಯರು ಸೇರಿ 9 ಸಾವು

By Suvarna NewsFirst Published Dec 18, 2023, 10:42 AM IST
Highlights

ಮಹಾರಾಷ್ಟ್ರದ ನಾಗ್ಪುರದಲ್ಲಿ ಸ್ಫೋಟಕ ಹಾಗೂ ರಕ್ಷಣಾ ಸಲಕರಣೆ ತಯಾರಿಕಾ ಕಂಪನಿ ‘ಸೋಲಾರ್‌ ಎಕ್ಸ್‌ಪ್ಲೋಸಿವ್’ನಲ್ಲಿ ಸ್ಫೋಟಗೊಂಡ ಪರಿಣಾಮ 6 ಮಹಿಳೆಯರು ಸೇರಿ 9 ಜನ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ನಾಗ್ಪುರ (ಡಿ.18): ಮಹಾರಾಷ್ಟ್ರದ ನಾಗ್ಪುರದಲ್ಲಿ ಸ್ಫೋಟಕ ಹಾಗೂ ರಕ್ಷಣಾ ಸಲಕರಣೆ ತಯಾರಿಕಾ ಕಂಪನಿ ‘ಸೋಲಾರ್‌ ಎಕ್ಸ್‌ಪ್ಲೋಸಿವ್’ನಲ್ಲಿ ಸ್ಫೋಟಗೊಂಡ ಪರಿಣಾಮ 6 ಮಹಿಳೆಯರು ಸೇರಿ 9 ಜನ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಗಾಯಗೊಂಡ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಗಾಯಾಳುಗಳ ಪೈಕಿ ಹಲವರ ಸ್ಥತಿ ಗಂಭೀರವಾಗಿದೆ.

ಕುನೋ ಅರಣ್ಯದಲ್ಲಿ ಪ್ರವಾಸಿಗರಿಗೆ ಚೀತಾ ವೀಕ್ಷಣೆ ಭಾಗ್ಯ, ಪ್ರವಾಸಿ ವಲಯದಲ್ಲಿ 2 ಗಂಡು ಚೀತಾ

ನಾಗ್ಪುರದ ಬಜಾರ್‌ಗಾಂವ್‌ ಗ್ರಾಮದಲ್ಲಿರುವ ಸೋಲಾರ್‌ ಕಂಪನಿಯ ಬೂಸ್ಟರ್‌ ಘಟಕದಲ್ಲಿ ಉತ್ಪನ್ನವೊಂದನ್ನು ಸೀಲ್‌ ಮಾಡುತ್ತಿರುವಾಗ ಭಾನುವಾರ ಮುಂಜಾನೆ 9 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಭಾರೀ ಸ್ಫೋಟ ಸಂಭವಿಸಿದೆ. ಆದರೆ ಸ್ಫೋಟಕ್ಕೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಘಟನೆ ನಡೆದ ವೇಳೆ ಸ್ಥಳದಲ್ಲಿ 12 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದತ್ತಪೀಠದ ಹೆಸರಲ್ಲಿ ಮತ್ತೊಂದು ವಿವಾದ, ದತ್ತಾತ್ರೇಯರ ಸ್ಥಿರಾಸ್ಥಿ- ಚರಾಸ್ಥಿ ಏನಾಯ್ತು?

ಅಲ್ಲದೇ ಘಟಕದೊಳಗೆ ಇನ್ನೂ ಹಲವರು ಸಿಲುಕಿಕೊಂಡಿರುವ ಶಂಕೆಯಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ಘಟನೆ ಕುರಿತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಬೇಸರ ಹೊರಹಾಕಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.

click me!