ಮೋದಿ ಮುಂದೆ ಮನೋಜ್ ತಿವಾರಿಗೆ ಹೇಳಿದ್ದೇನು?: ಸಮಾವೇಶದಲ್ಲಿ ಆಗಿದ್ದೇನು?

Suvarna News   | Asianet News
Published : Feb 04, 2020, 01:28 PM IST
ಮೋದಿ ಮುಂದೆ ಮನೋಜ್ ತಿವಾರಿಗೆ ಹೇಳಿದ್ದೇನು?: ಸಮಾವೇಶದಲ್ಲಿ ಆಗಿದ್ದೇನು?

ಸಾರಾಂಶ

ಪ್ರಧಾನಿ ಮುಂದೆಯೇ ಮನೋಜ್ ತಿವಾರಿ ಘೋಷಿಸಿದ್ದೇನು?| ಮೋದಿ ಮುಂದೆಯೇ ಹೇಳುತ್ತೇನೆ ಎಂದು ತಿವಾರಿ ನುಡಿದಿದ್ದೇನು?| ಸಿಎಎ ವಿರೋಧಿ ಹೋರಾಟಗಾರರು ಪಾಕಿಗಳು ಎಂದ ದೆಹಲಿ ಬಿಜೆಪಿ ಅಧ್ಯಕ್ಷ| ‘ಬಿಜೆಪಿ ದೆಹಲಿಯನ್ನು ಶಾಂತಿ ಬಾಗ್(ಶಾಂತಿಯ ಹೂದೋಟ)ನ್ನಾಗಿ ಮಾಡಲು ಹೊರಟಿದೆ’| ‘ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ವೃದ್ಧಿಸುತ್ತಿದ್ದಾರೆ’| ‘ಸಿಎಎ ವಿರೋಧಿಗಳು ನಮ್ಮ ನೆಲದಲ್ಲಿ ಭಾರತಕ್ಕೆ ಮಸಿ ಬಳಿಯುತ್ತಿದ್ದಾರೆ’| ಬಿಜೆಪಿ ಪ್ರಚಾರ ಸಭೆಯಲ್ಲಿ ಹೂಂಕರಿಸಿದ ಮನೋಜ್ ತಿವಾರಿ|

ನವದೆಹಲಿ(ಫೆ.04): ಸಿಎಎ ವಿರೋಧಿ ಶಾಹೀನ್ ಬಾಗ್ ಪ್ರತಿಭಟನೆಯನ್ನು ಟೀಕಿಸಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಪಾಕಿಸ್ತಾನ ಪರ ಘೋಷಣೆ ಕೂಗುವ ರಾಷ್ಟ್ರ ವಿರೋಧಿ ಚಳವಳಿ ಎಂದು ಕಿಡಿಕಾರಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ತಿವಾರಿ, ಸಿಎಎ ವಿರೋಧಿ ಹೋರಾಟಗಾರರು ಪಾಕ್ ಪರ ಸಹಾನುಭೂತಿ ಉಳ್ಳವರು ಎಂಬುದನ್ನು ಪ್ರಧಾನಿ ಮೋದಿ ಮುಂದೆಯೇ ತಾವು ಹೇಳಬಯುಸುವುದಾಗಿ ಸ್ಪಷ್ಟಪಡಿಸಿದರು .

ಶಹೀನ್‌ಬಾಗ್‌ ಹೋರಾಟ ಕಾಂಗ್ರೆಸ್‌, ಆಪ್‌ ಕುತಂತ್ರ: ಮೋದಿ

ವಿರೋಧಿಗಳು ದೆಹಲಿಯನ್ನು ಅಸಹಿಷ್ಣು ಶಾಹೀನ್ ಬಾಗ್ ಆಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ದೆಹಲಿಯನ್ನು ಶಾಂತಿ ಬಾಗ್(ಶಾಂತಿಯ ಹೂದೋಟ)ನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಯಾವುದು ಗೆಲ್ಲಲಿದೆ ಎಂಬುದು ಚುನಾವಣಾ ಫಲಿತಾಂಶ ದ ಬಳಿಕ ಗೊತ್ತಾಗಲಿದೆ ಎಂದು ತಿವಾರಿ ಹೇಳಿದ್ದಾರೆ.

ನಮ್ಮ ಪ್ರಧಾನಿ ಇಡೀ ವಿಶ್ವದಲ್ಲೇ ಭಾರತದ ಗೌರವವನ್ನು ವೃದ್ಧಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ವಿಪಕ್ಷಗಳು ನಮ್ಮ ನೆಲದಲ್ಲೇ ಭಾರತದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ ಎಂದು ತಿವಾರಿ ಹರಿಹಾಯ್ದರು.

ಸಿಎಎ ವಿರೋಧಿಗಳು ಪಾಕ್ ಪರ ಹೋರಾಟಗಾರರಾಗಿದ್ದು, ಇದನ್ನು ಪ್ರಧಾನಿ ಮೋದಿ ಅವರ ಮುಂದೆಯೇ ಹೇಳಲು ಬಯುಸುವುದಾಗಿ ತಿವಾರಿ ಹೇಳಿದರು. ದೆಹಲಿಯನ್ನು ಶಾಂತಿಯ ಬಾಗ್’ನ್ನಾಗಿ ಪರಿವರ್ತಿಸಲು ಮೋದಿ ಅವರ ಆಶೀರ್ವಾದ ನಮಗೆ ಬೇಕು ಎಂದು ಅವರು ನುಡಿದರು.

ಇದಕ್ಕೂ ಮೊದಲು ಮಾತನಾಡಿದ ಪ್ರಧಾನಿ ಮೋದಿ, ಸಂವಿಧಾನ ಹಾಗೂ ರಾಷ್ಟ್ರಧ್ವಜದ ನೆರಳಲ್ಲಿ ರಾಷ್ಟ್ರ ವಿರೋಧಿ ಕೃತ್ಯ ಎಸಗಲಾಗುತ್ತಿದೆ ಎಂದು ಸಿಎಎ ವಿರೋಧಿ ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇವಸ್ಥಾನದ ಕಾರ್ತಿಕ ದೀಪದ ಪರವಾಗಿ ತೀರ್ಪು ನೀಡಿದ ಜಡ್ಜ್‌, ಸೇಡು ತೀರಿಸಿಕೊಳ್ಳಲು ಮುಂದಾದ ತಮಿಳುನಾಡು ಸರ್ಕಾರ!
15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ