Mann Ki Baat: ಬೆಂಗಳೂರಲ್ಲಿ ‘ಅರಣ್ಯ’ ಬೆಳೆಸಿದವಗೆ ಮೋದಿ ಶಹಬ್ಬಾಸ್‌

By Kannadaprabha NewsFirst Published Oct 31, 2022, 2:15 AM IST
Highlights

ಬೆಂಗಳೂರಿನ ಪರಿಸರಪ್ರೇಮಿ, ಸಹಕಾರನಗರದ ಸುರೇಶ್‌ ಕುಮಾರ್‌ ಅವರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣದಲ್ಲಿ ಶ್ಲಾಘಿಸಿದ್ದಾರೆ. ಇವರಿಂದ ಭಾರತದ ಜನರು ಕಲಿಯುವುದು ಸಾಕಷ್ಟಿದೆ ಎಂದು ಕೊಂಡಾಡಿದ್ದಾರೆ. 

ನವದೆಹಲಿ (ಅ.31): ಬೆಂಗಳೂರಿನ ಪರಿಸರಪ್ರೇಮಿ, ಸಹಕಾರನಗರದ ಸುರೇಶ್‌ ಕುಮಾರ್‌ ಅವರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣದಲ್ಲಿ ಶ್ಲಾಘಿಸಿದ್ದಾರೆ. ಇವರಿಂದ ಭಾರತದ ಜನರು ಕಲಿಯುವುದು ಸಾಕಷ್ಟಿದೆ ಎಂದು ಕೊಂಡಾಡಿದ್ದಾರೆ. ತಮ್ಮ ಭಾಷಣದ ಮಧ್ಯದಲ್ಲಿ ಸುರೇಶ್‌ ಕುಮಾರ್‌ ಅವರ ಕೊಡುಗೆಯನ್ನು ಪ್ರಸ್ತಾಪಿಸಿದ ಮೋದಿ, ‘ಸುರೇಶ್‌ ಕುಮಾರ್‌ ಅವರು ಬೆಂಗಳೂರಿನ ಸಹಕಾರ ನಗರ ನಿವಾಸಿ. 

ಪರಿಸರ ರಕ್ಷಣೆಗೆ ಅವರ ಕೊಡುಗೆ ಸಾಕಷ್ಟಿದ್ದು, ಬೆಂಗಳೂರಿನ ಹಸಿರು ಹೊದಿಕೆ ಹೆಚ್ಚುವುದರಲ್ಲಿ ಸುರೇಶ್‌ ಅವರ ಪಾಲೂ ಅಧಿಕ. 20 ವರ್ಷದ ಹಿಂದೆ ತಮ್ಮ ಮನೆಯ ಸುತ್ತಲಿನ ಅರಣ್ಯಕ್ಕೆ ಮರುಜೀವ ನೀಡಲು ಅವರು ನಿರ್ಧರಿಸಿದ್ದರು. ಅವರು ಬೆಳೆಸಿದ ಮರಗಳು ಈಗ 40 ಅಡಿ ಎತ್ತರ ಬೆಳೆದು ನಿಂತಿವೆ. ಈ ಅರಣ್ಯದ ಸೌಂದರ್ಯವನ್ನು ಬೆಂಗಳೂರಿನ ಜನ ಆಸ್ವಾದಿಸುತ್ತಿದ್ದಾರೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದಲ್ಲದೆ, ‘ಪರಿಸರಕ್ಕೆ ಕೊಡುಗೆ ಮಾತ್ರವಲ್ಲ. ಸುರೇಶ್‌ ಕುಮಾರ್‌ ಅವರು ಸಹಕಾರ ನಗರದಲ್ಲಿ ಬಸ್‌ ತಂಗುದಾಣವೊಂದನ್ನು ಕಟ್ಟಿಸಿದ್ದಾರೆ. 

Mann Ki Baat: ಬೆಂಗಳೂರಿನ ಯೂಥ್‌ ಫಾರ್‌ ಪರಿವರ್ತನ್‌ ಸಂಸ್ಥೆಗೆ ಮೋದಿ ಭೇಷ್‌

ಅದರ ಮೇಲೆ ತಾಮ್ರದ ಫಲಕ ಅಳವಡಿಸಿ, ಫಲಕಗಳ ಮೇಲೆ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉತ್ತೇಜಿಸುವ ಬರಹ ಬರೆದಿದ್ದಾರೆ. ಏಕಕಾಲಕ್ಕೆ ಅವರು ಸಂಸ್ಕೃತಿ ಹಾಗೂ ಪರಿಸರಕ್ಕೆ ನೀಡಿದ ಕೊಡುಗೆ ಸ್ಮರಣೀಯವಾದದ್ದು. ಅವರು ಇಡೀ ದೇಶಕ್ಕೆ ಪಾಠ ಕಲಿಸಿದ್ದಾರೆ. ದೇಶದ ಯುವಕರು ಅವರಿಂದ ಸ್ಫೂರ್ತಿ ಪಡೆಯಬೇಕು’ ಎಂದು ಮೋದಿ ಕರೆ ನೀಡಿದರು. ಕಳೆದ ಮನ್‌ ಕೀ ಬಾತ್‌ನಲ್ಲಿ ಬೆಂಗಳೂರಿನಲ್ಲಿ ಗೋಡೆ, ಮಲೀನ ಸ್ಥಳಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ‘ಯೂಥ್‌ ಫಾರ್‌ ಪರಿವರ್ತನ್‌’ ಸಂಸ್ಥೆ ಬಗ್ಗೆ ಮೋದಿ ಪ್ರಸ್ತಾಪಿಸಿದ್ದರು.

ನ್ ಕಿ ಬಾತ್‌ನ ಮೊದಲ ಸಂಚಿಕೆ 2014 ರಲ್ಲಿ ಪ್ರಸಾರವಾಯಿತು. ಅಂದಿನಿಂದ ಈ ಕಾರ್ಯಕ್ರಮ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದ 93ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನಮೀಬಿಯಾದಿಂದ ಭಾರತಕ್ಕೆ ತಂದ ಚಿರತೆಗಳ ಬಗ್ಗೆ ಮಾತನಾಡಿದರು. ಈ ಚಿರತೆಗಳನ್ನು ಮಧ್ಯಪ್ರದೇಶದ ಕುನೊ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡಲಾಗಿದೆ. ಇದರೊಂದಿಗೆ ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಹೆಸರಿಡುವುದಾಗಿಯೂ ಪ್ರಕಟಿಸಿದ್ದರು. ಪ್ರಧಾನಿ ಮೋದಿಯವರ ಮನ್ ಕಿ ಬಾತ್‌ ಮೂಲಕ ಭಾರತೀಯ ಜನತಾ ಪಕ್ಷವು ಹಿಮಾಚಲ ಪ್ರದೇಶದ ಎಲ್ಲಾ 68 ವಿಧಾನಸಭಾ ಕ್ಷೇತ್ರಗಳನ್ನು ತಲುಪಲಿದೆ. 

Mann Ki Baat: Cheetah ಮರಳಿದ್ದಕ್ಕೆ ದೇಶದ 130 ಕೋಟಿ ಜನ ಖುಷಿಯಾಗಿದ್ದಾರೆ ಎಂದ ಪ್ರಧಾನಿ ಮೋದಿ

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಹಿಮಾಚಲದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿಯವರ 'ಮನ್ ಕಿ ಬಾತ್' ಅನ್ನು ಆಲಿಸಲಿದ್ದಾರೆ. ಜೆಪಿ ನಡ್ಡಾ ಅವರಲ್ಲದೆ, 5 ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಜಿತೇಂದ್ರ ಸಿಂಗ್, ಕಿರಣ್ ರಿಜಿಜು, ಅನುರಾಗ್ ಠಾಕೂರ್, ಭೂಪೇಂದ್ರ ಯಾದವ್ ಮತ್ತು ಮುಖ್ಯಮಂತ್ರಿಗಳಲ್ಲಿ ಜೈ ರಾಮ್ ಠಾಕೂರ್, ಹರಿಯಾಣದ ಮನೋಹರ್ ಲಾಲ್ ಖಟ್ಟರ್ ಮತ್ತು ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ಕೂಡ ಮನ್ ಕಿ ಬಾತ್‌ನಲ್ಲಿ ಭಾಗವಹಿಸಲಿದ್ದಾರೆ. ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ತೇಜಸ್ವಿ ಸೂರ್ಯ, ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವಂತಿ ಶ್ರೀನಿವಾಸನ್, ಸಂಬಿತ್ ಪಾತ್ರಾ, ಒಲಿಂಪಿಯನ್ ಸರ್ದಾರ್ ಸಂದೀಪ್ ಸಿಂಗ್ ಮತ್ತು ಅನೇಕ ನಾಯಕರು ಇರಲಿದ್ದಾರೆ.

click me!