ಕನ್ನಡದ ಕವಯತ್ರಿ ಸಂಚಿ ಹೊನ್ನಮ್ಮರನ್ನು ನೆನೆದ ಮೋದಿ

By Kannadaprabha News  |  First Published Oct 29, 2019, 8:48 AM IST

ಮನ್ ಕಿ ಬಾತ್ ನಲ್ಲಿ ಕರ್ನಾಟಕದ ಕವಯತ್ರಿ ಸಂಚಿ ಹೊನ್ನಮ್ಮರನ್ನು ನೆನೆದ ಪ್ರಧಾನಿ ಮೋದಿ | 'ಭಾರತ್ ಕಿ ಲಕ್ಷ್ಮೀ' ಬಗ್ಗೆ ಮಾತನಾಡುವಾಗ ಹೊನ್ನಮ್ಮರನ್ನು ಸ್ಮರಿಸಿದ ಪ್ರಧಾನಿ 


ನವದೆಹಲಿ (ಅ. 29): ಗಂಡು- ಹೆಣ್ಣು ಎಂದು ಭೇದ ಸರಿಯಲ್ಲ ಎಂದು 17ನೇ ಶತಮಾನದಲ್ಲೇ ಹೇಳಿದ್ದ ಕರ್ನಾಟಕದ ಕವಯತ್ರಿ ಸಂಚಿ ಹೊನ್ನಮ್ಮ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಆತ್ಮೀಯ ದೇಶವಾಸಿಗಳೇ, 17ನೇ ಶತಮಾನದಲ್ಲಿದ್ದ ಪ್ರಸಿದ್ಧ ಕವಯತ್ರಿ ಸಂಚಿ ಹೊನ್ನಮ್ಮ ಅವರು ಕನ್ನಡದಲ್ಲಿ ಕವನವೊಂದನ್ನು ಬರೆದಿದ್ದಾರೆ. ಅದು ನಾವು ಉಲ್ಲೇಖಿಸುವ ಪ್ರತಿಯೊಬ್ಬ ಭಾರತೀಯ ಲಕ್ಷ್ಮೇಯರ ಆಲೋಚನೆ, ಪದಗಳನ್ನು ಒಳಗೊಂಡಿದೆ. 17ನೇ ಶತಮಾನದಲ್ಲೇ ಈ ಆಲೋಚನೆಗೆ ಬುನಾದಿ ಹಾಕಲಾಗಿತ್ತು ಎಂದು ಅವರು ಭಾನುವಾರದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Latest Videos

undefined

ಈ ದೀಪಾವಳಿ ಚಿನ್ನವಲ್ಲ ಕಬ್ಬಿಣ ಕೊಳ್ಳಿ ಎಂದ ವಿದ್ಯಾ ಬಾಲನ್, ಕಾರಣ ಏನ್ ಗೊತ್ತಾ?

ಹೊನ್ನಮ್ಮ ಅವರ ಕವನದ ಸಾರಾಂಶವನ್ನು ವಿವರಿಸಿರುವ ಮೋದಿ ಅವರು, ತನ್ನ ಮಗಳು ಪಾರ್ವತಿಯಿಂದಾಗಿ ಹಿಮವಂತ ಹೆಸರು ಗಳಿಸಿದ. ತನ್ನ ಪುತ್ರಿ ಲಕ್ಷ್ಮಿಯಿಂದಾಗಿ ಋುಷಿ ಭೃಗು ಕೀರ್ತಿ ಸಂಪಾದಿಸಿದರು. ಮಗಳು ಸೀತೆಯಿಂದಾಗಿ ಜನಕ ದೊರೆ ಖ್ಯಾತಿ ಗಳಿಸಿದನು. ನಮ್ಮ ಹೆಣ್ಣು ಮಕ್ಕಳೇ ನಮಗೆ ಹೆಮ್ಮೆ ಎಂದು ಮೋದಿ ಬಣ್ಣಿಸಿದ್ದಾರೆ.

ಮೋದಿ ಪ್ರಸ್ತಾಪಿಸಿದ ಸಂಚಿ ಹೊನ್ನಮ್ಮ ಅವರ ಕವನ ಇಂತಿದೆ:

ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನು

ಪೆಣ್ಣಿಂದ ಭೃಗು ಪೆರ್ಚಿದನು

ಪೆಣ್ಣಿಂದ ಜನಕರಾಯನು ಜಸವಡೆದನು

ಪೆಣ್ಣ ನಿಂದಿಸಲೇಕೆ ಪೆರರು

 

click me!