100 ಕೋಟಿ ಮಂದಿ ಆಲಿಸಿದ ಏಕೈಕ ಕಾರ್ಯಕ್ರಮ ಮನ್ ಕಿ ಬಾತ್, ಸಮೀಕ್ಷಾ ವರದಿಯಲ್ಲಿ ಬಹಿರಂಗ!

Published : Apr 24, 2023, 08:47 PM IST
100 ಕೋಟಿ ಮಂದಿ ಆಲಿಸಿದ ಏಕೈಕ ಕಾರ್ಯಕ್ರಮ ಮನ್ ಕಿ ಬಾತ್, ಸಮೀಕ್ಷಾ ವರದಿಯಲ್ಲಿ ಬಹಿರಂಗ!

ಸಾರಾಂಶ

ಪ್ರಧಾನಿ ಮೋದಿಯ ಮನ್ ಕಿ ಬಾತ್ ಕಾರ್ಯಕ್ರಮ 100ನೇ ಕಂತು ತಿಂಗಳ ಅಂತ್ಯದಲ್ಲಿ ಪ್ರಸಾರವಾಗಲಿದೆ. ಇದರ ನಡುವೆ ಐಐಎಂ ಸಮೀಕ್ಷಾ ವರದಿ ಮನ್ ಕಿ ಬಾತ್ ಕುರಿತು ಹಲವು ಅಚ್ಚರಿ ಅಂಕಿ ಅಂಶ ಪ್ರಕಟಿಸಿದೆ. ಭಾರತದಲ್ಲಿ ಶೇಕಡಾ 96 ರಷ್ಟು ಮಂದಿಗೆ ಮನ್ ಕಿ ಬಾತ್ ಕಾರ್ಯಕ್ರಮದ ಕುರಿತು ಅರವಿದೆ. ಈ ವರದಿಯಲ್ಲಿನ ಕುತೂಹಲ ವಿಚಾರ ಇಲ್ಲಿದೆ  

ನವದೆಹಲಿ(ಏ.24): ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮನ್ ಕಿ ಬಾತ್‌ಗೆ 100ರ ಸಂಭ್ರಮ. ಈಗಾಗಲೇ 99 ಕಂತುಗಳು ಪ್ರಸಾರವಾಗಿದೆ. 100ನೇ ಸಂಭ್ರಮದ ಕಂತು ಈ ತಿಂಗಳ ಅಂತ್ಯದಲ್ಲಿ ಪ್ರಸಾರವಾಗಲಿದೆ. ಇದರ ಬೆನ್ನಲ್ಲೇ ಮನ್ ಕಿ ಬಾತ್ ಕುರಿತು ಪ್ರಸಾರ ಭಾರತಿ ಹಾಗೂ ಇಂಡಿಯನ್ ಇನ್ಸಿಟಿಟ್ಯೂಟ್ ಮ್ಯಾನೇಜ್ಮೆಂಟ್(IIM) ಸಮೀಕ್ಷೆ ನಡೆಸಿದೆ. ಈ ಸಮೀಕ್ಷಾ ವರದಿ ಬಹಿರಂಗವಾಗಿದೆ. ಐಐಎಂ ವರದಿ ಪ್ರಕಾರ, ಮನ್ ಕಿ ಬಾತ್ ಕಾರ್ಯಕ್ರವನ್ನು 100 ಕೋಟಿ ಮಂದಿ ಆಲಿಸಿದ್ದಾರೆ.ಪ್ರತಿ ಕಂತು ಪ್ರಸಾರವಾದಾಗ 23 ಕೋಟಿ ಮಂದಿ ಆಲಿಸುತ್ತಾರೆ.ಇಷ್ಟೇ ಅಲ್ಲ ಹಲವು ರೋಚಕ ಅಂಕಿ ಅಂಶಗಳನ್ನು ಈ ಸಮೀಕ್ಷೆ ಬಹಿರಂಗಪಡಿಸಿದೆ.

ಮನ್ ಕಿ ಬಾತ್ ಕಾರ್ಯಕ್ರಮದ ಕುರಿತು ಭಾರತದ ಶೇಕಡಾ 96 ರಷ್ಟು ಮಂದಿಗೆ ಅರಿವಿದೆ. ಶೇಕಡಾ 73ರಷ್ಟು ಮಂದಿ ಭಾರತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮನ್ ಕಿ ಬಾತ್ ಆಲಿಸುವ ಜನರಲ್ಲಿ ಶೇಕಡಾ 59 ರಷ್ಟು ಮಂದಿಗೆ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗಿದೆ ಎಂದಿದ್ದಾರೆ. ಇನ್ನು ಶೇಕಡಾ 58 ರಷ್ಟು ಮಂದಿ ಮನ್ ಕಿ ಬಾತ್ ಕಾರ್ಯಕ್ರಮ ಆಲಿಸುವ ಮೂಲಕ ನಮ್ಮ ಬುದುಕು ಬದಲಾಗಿದೆ ಎಂದಿದ್ದಾರೆ.

 

ಕೇಂದ್ರ ಸರ್ಕಾರದಿಂದ 100 ರೂಪಾಯಿ ನಾಣ್ಯ, ಇಲ್ಲಿದೆ ವಿಶೇಷತೆ,ಬಿಡುಗಡೆ ದಿನಾಂಕ!

ಶೇಕಡಾ 63 ರಷ್ಟು ಮಂದಿ ಸರ್ಕಾರದ ಕುರಿತು ಪಾಸಿಟೀವ್ ವ್ಯಕ್ತಪಡಿಸಿದ್ದಾರೆ. ಇನ್ನು ಮನ್ ಕಿ ಬಾತ್ ಆಲಿಸಿದ ಬಳಿಕ ಶೇಕಡಾ 60 ರಷ್ಟ ದೇಶ ಕಟ್ಟುವ ಮಹತ್ ಕಾರ್ಯದಲ್ಲಿ ಕೈಜೋಡಿಸುವುದಾಗಿ ಹೇಳಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರವನ್ನು ಶೇಕಡಾ 44.7 ರಷ್ಟು ಜನ ಟಿವಿಯಲ್ಲಿ ನೋಡಲು ಬಯಸುತ್ತಾರೆ. ಶೇಕಡಾ 37.6 ರಷ್ಟು ಮಂದಿ ಮೊಬೈಲ್ ಮೂಲಕ ಮನ್ ಕಿ ಬಾತ್ ಆಲಿಸಲು ಬಯಸುತ್ತಾರೆ. 19 ರಿಂದ 34 ವಯಸ್ಸಿನ ಜನರಲ್ಲಿ ಶೇಕಡಾ 62 ರಷ್ಟು ಮಂದಿ ಟಿವಿಯಲ್ಲಿ ಮನ್ ಕಿ ಬಾತ್ ನೋಡಲು ಬಯಸುತ್ತಾರೆ.

ಪ್ರಧಾನಿ ಮೋದಿ ಧ್ವನಿಯಲ್ಲಿ ಪ್ರಸಾರವಾಗು ಮನ್ ಕಿ ಬಾತ್ ಆಲಿಸಲು ಬಹುತೇಕರು ಇಷ್ಟಪಡುತ್ತಾರೆ. ಹೀಗಾಗಿ ಹಿಂದಿಯಲ್ಲಿ ಪ್ರಸಾರವಾಗುವ ಮನ್ ಕಿ ಬಾತ್ ಆಲಿಸುವರ ಸಂಖ್ಯೆ ಶೇಕಡಾ 65. ಇನ್ನು ಇಂಗ್ಲೀಷ್‌ನಲ್ಲಿ ಪ್ರಸಾರವಾಗುವ ಮನ್ ಕಿ ಬಾತ್ ಆಲಿಸುವವರ ಸಂಖ್ಯೆ ಶೇಕಡಾ 18.  ಭಾರತದಲ್ಲಿ ಮನ್ ಕಿ ಬಾತ್ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಕಾರ್ಯಕ್ರಮ ಅನ್ನೋದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

Mann Ki Baat ಮೋದಿ ಕಾರ್ಯಕ್ರಮದಲ್ಲಿ ಗರಿಷ್ಠ ಬಾರಿ ಕರ್ನಾಟಕದ ಸಂಸ್ಕೃತಿ, ಸಾಧನೆ ಉಲ್ಲೇಖ!

ಸಮೀಕ್ಷೆ ಕುರಿತು ಮಾತನಾಡಿರುವ ಐಐಎಂ ನಿರ್ದೇಶಕ ಧೀರಜ್ ಪಿ ಶರ್ಮಾ, 10003 ಮಾದರಿ ವ್ಯಕ್ತಿಗಳ ಅಭಿಪ್ರಾಯ ಆಲಿಸಿ ಸಮೀಕ್ಷೆ ನಡೆಸಲಾಗಿದೆ. ಶೇಕಡಾ 60 ರಷ್ಟು ಪುರುಷರು ಹಾಗೂ ಶೇಕಡಾ 40 ರಷ್ಟ ಮಹಿಳೆಯರು. ಶೇಕಡಾ 64 ರಷ್ಟು ಮಂದಿ ಉದ್ಯೋಗಿಗಳು, ಶೇಕಡಾ 23 ರಷ್ಟು ಮಂದಿ ವಿದ್ಯಾರ್ಥಿಗಳ ಅಭಿಪ್ರಾಯವನ್ನು ದಾಖಲಿಸಲಾಗಿದೆ ಎಂದಿದ್ದಾರೆ. ದೇಶದ ಎಲ್ಲಾ ಭಾಗದ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ದೇಶದ ಮೂಲೆ ಮೂಲೆಯ್ಲಲಿರುವ ಹಳ್ಳಿಗಳ ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.  

ಪ್ರಧಾನಿ ನರೇಂದ್ರ ಮೋದಿಯವರ ‘ಮನ್‌ ಕೀ ಬಾತ್‌’ ರೇಡಿಯೊ ಕಾರ್ಯಕ್ರಮ ಏ.30 ರಂದು 100 ಸಂಚಿಕೆಗಳನ್ನು ಪೂರೈಸಲಿದ್ದು ಈ ಹಿನ್ನೆಲೆ ಅಂದು ನೂತನ 100 ರುಪಾಯಿಯ ನಾಣ್ಯವನ್ನು ಸರ್ಕಾರ ಬಿಡುಗಡೆಗೊಳಿಸಲಿದೆ. 100 ನೇ ಮನ್‌ ಕೀ ಬಾತ್‌ ಸಂಚಿಕೆಯನ್ನು ಸ್ಮರಣೀಯಗೊಳಿಸುವ ಭಾಗವಾಗಿ ನಾಣ್ಯ ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೇ ಅಂದಿನ ಸಂಚಿಕೆಯನ್ನು 1 ಲಕ್ಷಕ್ಕೂ ಹೆಚ್ಚು ಬೂತ್‌ಗಳಲ್ಲಿ ಪ್ರಸಾರ ಮಾಡಲು ಸರ್ಕಾರ ಯೋಜಿಸಿದೆ. ನಾಣ್ಯವು 44 ಎಂಎಂ ಗ್ರಾಂ ತೂಕ ತೂಗಲಿದೆ. ಈ ಪೈಕಿ 50% ರಷ್ಟುಬೆಳ್ಳಿ, 40% ರಷ್ಟುತಾಮ್ರ, 0.5% ರಷ್ಟುನಿಕ್ಕಲ್‌ ಹಾಗೂ 0.5% ರಷ್ಟುಸತುವನ್ನು ಬಳಸಿ ಒಟ್ಟು ನಾಲ್ಕು ಲೋಹಗಳಿಂದ ನಾಣ್ಯ ತಯಾರಿಸಲಾಗುತ್ತದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು