ಬಿಜೆಪಿಗೆ ರಾಜೀನಾಮೆ ಕೊಟ್ಟ ಯುವ ನಾಯಕ ಮನೀಶ್ ಕಶ್ಯಪ್; ಕಾರಣ ಹೀಗಿದೆ...!

Published : Jun 08, 2025, 02:41 PM IST
Manish Kashyap

ಸಾರಾಂಶ

ಬಿಜೆಪಿ ನಾಯಕ ಮನೀಶ್ ಕಶ್ಯಪ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದೊಳಗಿನ ಅಸಮರ್ಪಕ ನಡವಳಿಕೆ ಮತ್ತು ಯುವಜನರ ಸಮಸ್ಯೆಗಳನ್ನು ನಿರ್ಲಕ್ಷಿಸುವುದೇ ರಾಜೀನಾಮೆಗೆ ಕಾರಣ ಎಂದು ತಿಳಿಸಿದ್ದಾರೆ. ಬಿಹಾರದ ಜನರಿಗಾಗಿ ಹೋರಾಡುವುದಾಗಿ ಹೇಳಿದ್ದಾರೆ.

ಬಿಹಾರ (ಜೂ.08) : ಬಿಹಾರದ ಜನಪ್ರಿಯ ಯೂಟ್ಯೂಬರ್ ಮತ್ತು ರಾಜಕೀಯದಲ್ಲಿ ಚುರುಕಾಗಿ ತೊಡಗಿದ್ದ ಬಿಜೆಪಿ ನಾಯಕ ಮನೀಶ್ ಕಾಶ್ಯಪ್ ಅವರು ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಅವರು ಪಕ್ಷದ ನಿಷ್ಠೆಯಿಂದ ದೂರ ಸಾಗಿದ್ದಾರೆ.

ಬಿಹಾರದ ಯೂಟ್ಯೂಬರ್ ಮತ್ತು ಬಿಜೆಪಿ ನಾಯಕ ಮನೀಶ್ ಕಶ್ಯಪ್ ಇಂದು (ಭಾನುವಾರ, ಜೂನ್ 08) ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮನೀಶ್ ಕಶ್ಯಪ್ ತಮ್ಮ ಫೇಸ್‌ಬುಕ್ ಪುಟದಲ್ಲಿ ನೇರ ಪ್ರಸಾರಕ್ಕೆ ಬಂದು ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮನೀಶ್ ಕಶ್ಯಪ್ ಅವರು, 'ನಾನು ಮನೀಶ್ ಕಶ್ಯಪ್ ಇನ್ನು ಮುಂದೆ ಬಿಜೆಪಿಯಲ್ಲಿಲ್ಲ. ನಾನು ಇನ್ನು ಮುಂದೆ ಬಿಜೆಪಿಯ ಸದಸ್ಯನಲ್ಲ ಎಂದು ಘೋಷಿಸುತ್ತೇನೆ. ನಾನು ಇನ್ನು ಮುಂದೆ ಭಾರತೀಯ ಜನತಾ ಪಕ್ಷದ ಸದಸ್ಯನಲ್ಲ ಎಂದು ಹೇಳಿದರು. ನಾನು ನನ್ನ ಪ್ರದೇಶವಾದ ಚನ್ಪಾಟಿಯಾಗೆ ಹೋಗಿದ್ದೆ, ಅಲ್ಲಿ ಅನೇಕ ಜನರನ್ನು ಭೇಟಿಯಾದೆ. ಅಲ್ಲಿನ ಬಹುತೇಕ ಪ್ರದೇಶಗಳನ್ನು ಸುತ್ತಾಡಿದೆ. ಇದಾದ ನಂತರ ಈಗ ನಾನು ಬಿಹಾರ ಜನರು ಹಾಗೂ ಬಿಹಾರದ ಕಾರ್ಮಿಕರಿಗಾಗಿ ಹೋರಾಡಬೇಕು ಮತ್ತು ಬಿಹಾರಿಗಳ ವಲಸೆಯನ್ನು ನಿಲ್ಲಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ಸೇರಿ ತಪ್ಪಾಯ್ತು:

ಮನೀಶ್ ಕಶ್ಯಪ್ ತಾನು ಬಿಜೆಪಿ ಸೇರಿರುವುದೇ ತಪ್ಪಾಯ್ತು, ತನ್ನನ್ನು ಕ್ಷಮಿಸಿಬಿಡಿ ಎಂದು ಜನರಲ್ಲಿ ಕ್ಷಮೆಯಾಚಿಸಿದರು. ಪಕ್ಷದಲ್ಲಿದ್ದಾಗ ಈ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಧ್ಯವಾಗಲಿಲ್ಲ ಎಂದು ನನಗೆ ಅನಿಸಿತು. ನನ್ನ ನಿರ್ಧಾರದಿಂದ ಕೆಲವರು ಸಂತೋಷಪಡುತ್ತಾರೆ ಮತ್ತು ಕೆಲವರು ದುಃಖಿತರಾಗುತ್ತಾರೆ. ಈ ನಿರ್ಧಾರ ತೆಗೆದುಕೊಳ್ಳುವಂತೆ ಕೆಲವದರಿಂದ ನನ್ನನ್ನು ಒತ್ತಾಯಿಸಲಾಯಿತು ಎಂದು ಹೇಳಿದರು. ಇದು ನಿಮಗೆಲ್ಲರಿಗೂ ತಿಳಿದಿದೆ. ನಾನು ಪ್ರಧಾನಿ ಮೋದಿಯನ್ನು ಟೀಕಿಸುವುದಿಲ್ಲ, ಮೋದಿಯವರು ಯಾವಾಗಲೂ ಯಶಸ್ವಿ ಪ್ರಧಾನಿಯಾಗಿರುತ್ತಾರೆ. ಪಕ್ಷದಲ್ಲಿ ಇಲ್ಲದಿದ್ದರೂ, ನಾನು ಅವರ ವಿರುದ್ಧ ಕಾರಣವಿಲ್ಲದೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪರಿಸಿದರು.

ರಾಜೀನಾಮೆಗೆ ಕಾರಣವೇನು?

ಮನೀಶ್ ಕಾಶ್ಯಪ್ ಅವರು ತಮ್ಮ ರಾಜೀನಾಮೆಯಲ್ಲಿ ಬಿಜೆಪಿ ಪಕ್ಷದ ಒಳಗಿರುವ ಅಸಮರ್ಪಕ ನಡವಳಿಕೆ, ಯುವ ಸಮುದಾಯದ ತುರ್ತು ಸಮಸ್ಯೆಗಳನ್ನು ನಿರ್ಲಕ್ಷಿಸುವ ಪ್ರವೃತ್ತಿ, ಮತ್ತು ಸಾಮಾಜಿಕ ಮಾಧ್ಯಮವನ್ನು ಹೆಮ್ಮೆಪಡುವಂತೆ ಬಳಸಲು ಅವಕಾಶವಿಲ್ಲ ಎಂಬ ಪರಿಸ್ಥಿತಿಗಳನ್ನು ಉಲ್ಲೇಖಿಸಿದ್ದಾರೆ. ರಾಜ್ಯದಲ್ಲಿ ಹಣದುಬ್ಬರ, ಭ್ರಷ್ಟಾಚಾರ, ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲದಿರುವುದೇ ತಮ್ಮ ಬಿಜೆಪಿ ಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಣಯ ಕೈಗೊಳ್ಳುವ ಹಿನ್ನೆಲೆಯಾಗಿದೆ ಎಂದು ತಿಳಿಸಿದ್ದಾರೆ.

ನಾನು ಧ್ವನಿ ಎತ್ತುತ್ತೇನೆ:

ಬಿಜೆಪಿಯಿಂದ ಬೇರ್ಪಟ್ಟು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ ಮನೀಶ್ ಕಶ್ಯಪ್, ನಾನು ಎಲ್ಲಿಂದ ಸ್ಪರ್ಧಿಸಬೇಕು, ಯಾವ ಪಕ್ಷದಿಂದ ಸ್ಪರ್ಧಿಸಬೇಕು ಅಥವಾ ಏಕಾಂಗಿಯಾಗಿ ಸ್ಪರ್ಧಿಸಬೇಕೇ ಎಂದು ನೀವೇ ಹೇಳಿ ಎಂದು ಹೇಳಿದರು. ಆರೋಗ್ಯ ಇಲಾಖೆಯ ವಿರುದ್ಧ ನಾನು ಧ್ವನಿ ಎತ್ತುತ್ತೇನೆ. ಬಿಹಾರದ ಜನರ ಜೀವ ಉಳಿಸಲು ನಾನು ಇಲ್ಲಿ ನಿಂತಿದ್ದೇನೆ. ಇನ್ನುಮುಂದೆ ನಾನು ಯಾವತ್ತೂ ನನ್ನ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಯಾವ ರಾಜಕೀಯ ಪಕ್ಷಕ್ಕೂ ಬದ್ಧವಲ್ಲ. ನನಗೆ ಬೆಂಬಲ ನೀಡಿದ ಎಲ್ಲರಿಗೂ ನಾನು ಕೃತಜ್ಞ. ಮುಂದಿನ ಹೋರಾಟವೂ ಜನಪಕ್ಷೀಯವಾಗಿರಲಿದೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌