ಒಂದು ನಿಮಿಷದಲ್ಲಿ 109 ಫಿಂಗರ್‌ ಟಿಪ್‌ ಫುಶ್ ಅಪ್ಸ್... ಗಿನ್ನೆಸ್‌ ದಾಖಲೆ ಮುರಿದ ಮಣಿಪುರಿ ಹುಡ್ಗ

Suvarna News   | Asianet News
Published : Jan 25, 2022, 01:11 PM IST
ಒಂದು ನಿಮಿಷದಲ್ಲಿ  109 ಫಿಂಗರ್‌ ಟಿಪ್‌ ಫುಶ್ ಅಪ್ಸ್... ಗಿನ್ನೆಸ್‌ ದಾಖಲೆ ಮುರಿದ ಮಣಿಪುರಿ ಹುಡ್ಗ

ಸಾರಾಂಶ

ಒಂದು ನಿಮಿಷದಲ್ಲಿ  109 ಫಿಂಗರ್‌ ಟಿಪ್‌ ಫುಶ್ ಅಪ್ಸ್ ಮಣಿಪುರದ  24ರ ಹರೆಯದ ಹುಡುಗನ ಸಾಧನೆ ಗಿನ್ನೆಸ್ ದಾಖಲೆ ಮುರಿದ  ಮಣಿಪುರದ ತರುಣ  

ಇಂಫಾಲ(ಜ. 25):  ಮಣಿಪುರದ 24ರ ಹರೆಯದ ಹುಡುಗನೋರ್ವ ಒಂದು ನಿಮಿಷದಲ್ಲಿ 109 ಫಿಂಗರ್‌ ಫುಶ್ ಅಪ್ಸ್ ಮಾಡುವ ಮೂಲಕ ತನ್ನದೇ ಹಳೆಯ ದಾಖಲೆಯನ್ನು ಮುರಿದಿದ್ದಾನೆ. ತೌನೊಜಮ್ ನಿರಂಜೋಯ್ ಸಿಂಗ್ ( Thounaojam Niranjoy Singh) ಎಂಬಾತನೇ ಈ ಸಾಧನೆ ಮಾಡಿದ ಹುಡುಗ ಕೇವಲ ಒಂದು ನಿಮಿಷದಲ್ಲಿ ಆತ ಅತಿ ಹೆಚ್ಚು ಪುಶ್-ಅಪ್ (ಫಿಂಗರ್ಸ್ ಟಿಪ್ಸ್  ಫುಶ್ ಅಪ್ಸ್) ಮಾಡಿ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ. (Finger Tip Push-ups - ಇಡೀ ಅಂಗೈಯನ್ನು ಆಧಾರವಾಗಿಟ್ಟು ಮಾಡುವ ಬದಲು ಕೇವಲ ಬೆರಳುಗಳ ತುದಿಯನ್ನಷ್ಟೇ ದೇಹಕ್ಕೆ ಆಧಾರವಾಗಿರಿಸಿ ಮಾಡುವ ಫುಶ್‌ಅಪ್ಸ್‌)

ಈ ಹಿಂದೆಯೂ  ನಿರಂಜೋಯ್ ಸಿಂಗ್ ಎರಡು ಬಾರಿ ಗಿನ್ನಿಸ್ ದಾಖಲೆ ಬರೆದಿದ್ದ. ಆದರೆ ಆ ಹಳೆಯ ದಾಖಲೆಯನ್ನು ಒಂದೇ ನಿಮಿಷದಲ್ಲಿ 109 ಪುಷ್-ಅಪ್‌ಗಳನ್ನು ಮಾಡುವ ಮೂಲಕ  ಮುರಿದಿದ್ದಾರೆ. ಈ ಹಿಂದೆ ಅವರು ಒಂದೇ ನಿಮಿಷದಲ್ಲಿ 105 ಪುಶ್-ಅಪ್‌ ಮಾಡಿದ್ದರು.  ನಿರಂಜೋಯ್ ಸಿಂಗ್  ಅವರ ಈ ಸಾಹಸವನ್ನು ದಾಖಲಿಸುವ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಯತ್ನವನ್ನು  ಮಣಿಪುರ (Manipur)ದ ಅಜ್ಟೆಕ್ಸ್ ಸ್ಪೋರ್ಟ್ಸ್ ಸಂಸ್ಥೆಯೂ ಇಂಫಾಲ್‌ನ (Imphal) ಅಜ್ಟೆಕ್ಸ್ ಫೈಟ್ ಸ್ಟುಡಿಯೋದಲ್ಲಿ ಆಯೋಜಿಸಿತ್ತು. 

 

ಈ ಸಾಧನೆ ಮಾಡಿದ ಮಣಿಪುರಿ ಯುವಕನನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರೆಣ್ ರಿಜಿಜು ( Kiren Rijiju )ಅವರು ಅಭಿನಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಿರೆಣ್‌ ರಿಜಿಜು, ಮಣಿಪುರಿ ಯುವಕನ ಈ ನಂಬಲಾಗದ ಶಕ್ತಿ ನೋಡಲು ಅದ್ಭುತವಾಗಿದೆ. ಒಂದೇ ನಿಮಿಷದಲ್ಲಿ ಅತಿ ಹೆಚ್ಚು ಪುಷ್-ಅಪ್‌ ಮಾಡಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅನ್ನು ಮುರಿದ ಮಣಿಪುರಿ ಯುವಕ ಟಿ. ನಿರಂಜೊಯ್ ಸಿಂಗ್ ಅವರ ಸಾಧನೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಆಗುತ್ತಿದೆ ಎಂದು ಕಿರೆಣ್‌ ರಿಜಿಜು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

Viral News: ಸಹೋದರನನ್ನು ಹೊತ್ತುಕೊಂಡು 53 ಸೆಕೆಂಡ್‌ಗಳಲ್ಲಿ 100 ಮೆಟ್ಟಿಲು ಹತ್ತಿದ ಸಾಹಸಿ!

ಇಂಫಾಲಾದ ಸ್ಥಳೀಯ ಪತ್ರಿಕೆ ಈಸ್ಟ್ ಮೊಜೊ ವರದಿಯ ಪ್ರಕಾರ, 2009 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಗ್ರಹಾಂ ಮಾಲಿ ಒಂದು ನಿಮಿಷದಲ್ಲಿ ಅತೀ ಹೆಚ್ಚು ಪುಶ್-ಅಪ್‌ (ಫಿಂಗರ್ ಟಿಪ್ಸ್) ಮಾಡಿದ ದಾಖಲೆಯನ್ನು ಹೊಂದಿದ್ದರು. ಆದರೆ 13 ವರ್ಷಗಳ ನಂತರ ಭಾರತೀಯನೋರ್ವ ಈ ದಾಖಲೆಯನ್ನು ಮುರಿದಿದ್ದಾನೆ. ಇದೊಂದು ಐತಿಹಾಸಿಕ ದಾಖಲೆಯಾಗಿದೆ  ಅಜ್ಟೆಕ್ಸ್ ಸ್ಪೋರ್ಟ್ಸ್ ಮಣಿಪುರದ ಸಂಸ್ಥಾಪಕ ಡಾ ತಂಗ್ಜಮ್ ಪರ್ಮಾನಂದ ಅವರ ಹೇಳಿಕೆಯನ್ನು ಉಲ್ಲೇಖಿಸಿ ಈಸ್ಟ್ ಮೊಜೊ ವರದಿ ಮಾಡಿದೆ.

7.41 ಮೀಟರ್‌ ಎತ್ತರದ ಸೈಕಲ್‌ ನಿರ್ಮಿಸಿ ರೈಡಿಂಗ್‌... ವಿಡಿಯೋ ನೋಡಿ 

ಇತ್ತೀಚೆಗೆ  ಆಡಮ್ ಝ್ಡಾನೋವಿಚ್ (Adam Zdanowicz) ಎಂಬ ವ್ಯಕ್ತಿ  7.41 ಮೀ. ಉದ್ದ ಅಂದರೆ ಅದರೆ 24 ಅಡಿ 3.73 ಇಂಚು ಎತ್ತರದ ಸೈಕಲ್ಲೊಂದನ್ನು  ನಿರ್ಮಿಸಿ ಅದನ್ನು ರೈಡ್ ಮಾಡುವ ಮೂಲಕ ಗಿನ್ನೆಸ್  ಬುಕ್‌ ಆಪ್‌ ರೆಕಾರ್ಡ್‌ಗೆ ಸೇರುವಲ್ಲಿ ಯಶಸ್ವಿಯಾಗಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು