ಕೇರಳದ 25 ಕೋಟಿ ರೂ. ಓಣಂ ಲಾಟರಿ ಗೆದ್ದ ಮಂಡ್ಯದ ಮೆಕ್ಯಾನಿಕ್ ಅಲ್ತಾಫ್; ಕೈಗೆ ಸಿಗೋ ಹಣವೆಷ್ಟು?

By Sathish Kumar KH  |  First Published Oct 10, 2024, 1:34 PM IST

ಮಂಡ್ಯ ಜಿಲ್ಲೆಯ ಪಾಂಡವಪುರದ ಬೈಕ್ ಮೆಕ್ಯಾನಿಕ್ ಅಲ್ತಾಫ್‌ಗೆ ಕೇರಳದ ಓಣಂ ಹಬ್ಬದ 25 ಕೋಟಿ ರೂ. ಮೌಲ್ಯದ ಲಾಟರಿ ಹೊಡೆದಿದೆ. ಪರಿಚಯಸ್ತರ ಮೂಲಕ ಖರೀದಿಸಿದ್ದ ಟಿಕೆಟ್ ಇವರ ಬದುಕನ್ನೇ ಬದಲಿಸಿದೆ. ಆದರೆ, 25 ಕೋಟಿ ಗೆದ್ದರೂ ಅಲ್ತಾಫ್ ಕೈಗೆ ಸಿಗೋದು ಮಾತ್ರ...


ಮಂಡ್ಯ (ಅ.10): ಯಾರಿಗೆ ಯಾವಾಗ ಯಾವ ರೂಪದಲ್ಲಿ ಅದೃಷ್ಟ ಖುಲಾಯಿಸುತ್ತದೆಯೋ ಗೊತ್ತಿಲ್ಲ. ಎಲ್ಲಿಯ ಕೇರಳ, ಎಲ್ಲಿಯ ಮಂಡ್ಯ.. ಮಂಡ್ಯ ಜಿಲ್ಲೆ ಪಾಂಡವಪುರದ ಬೈಕ್ ಮೆಕ್ಯಾನಿಕ್‌ ಅಲ್ತಾಫ್‌ಗೆ ಕೇರಳದ ಓಣಂ ಹಬ್ಬದ 25 ಕೋಟಿ ರೂ. ಮೌಲ್ಯದ ಲಾಟರಿ ಹೊಡೆದಿದೆ. ಈ ಮೂಲಕ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಮಂಡ್ಯದ ಹೈದ ಇದೀ ರಾತ್ರೋ ರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ.

ಹೌದು, ಮಂಡ್ಯದ ಗಂಡು ಅಲ್ತಾಫ್ ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ. ಲಾಟರಿಯಲ್ಲಿ‌ 25 ಕೋಟಿ ರೂ. ಬಹುಮಾನವನ್ನು ಪಡೆದಿದ್ದಾರೆ. ಇವರು ಕೇರಳ‌ ರಾಜ್ಯ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದ ಅಲ್ತಾಫ್ ಪಾಷಾ ಅವರು ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣ ನಿವಾಸಿ ಆಗಿದ್ದಾರೆ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, ಮೊನ್ನೆ ‌ಪರಿಚಯಸ್ತರ ಮೂಲಕ ಕೇರಳ ರಾಜ್ಯದ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಅಲ್ತಾಫ್ ಪಾಷಾ ಅವರು 25 ಕೋಟಿ ರೂ. ‌ಗೆದ್ದಿದ್ದಾರೆ.

Tap to resize

Latest Videos

undefined

ಇನ್ನು ತಾನು ಖರೀದಿ ಮಾಡಿದ ಲಾಟರಿ ಟಿಕೆಟ್‌ಗೆ ಬಹುಮಾನ ಬಂದಿರೊ‌ ವಿಚಾರ ತಿಳಿಯುತ್ತಿದ್ದಂತೆ ಅಲ್ತಾಫ್ ಕೇರಳಕ್ಕೆ ಹೊರಟಿದ್ದಾರೆ. ಇದೀಗ ಕೇರಳಕ್ಕೆ ‌ಪ್ರಯಾಣ ಮಾಡಿದ್ದು, ಲಾಟರಿ ಹಣ ಪಡೆಯುವ ಪ್ರಕ್ರಿಯೆಯನ್ನು ಪೂರೈಸಿ ಹಣವನ್ನು ಪಡೆದುಕೊಳ್ಳಲಿದ್ದಾರೆ. ಇದೀಗ ರಾಜ್ಯದಲ್ಲಿ ದಸರಾ ಹಬ್ಬದ ಆಚರಣೆಯಲ್ಲಿದ್ದ ಅಲ್ತಾಫ್‌ಗೆ ದೊಡ್ಡ ಉಡುಗೊರೆಯೇ ಸಿಕ್ಕಂತಾಗಿದೆ.

ಇದನ್ನೂ ಓದಿ: ಚಾಯ್‌ವಾಲಾಗೆ ಸಿಕ್ಕಿತು 3.55 ಲಕ್ಷ ರೂ ಜಾಕ್‌‌ಪಾಟ್, ಬದುಕೇ ಅಂತ್ಯಗೊಳಿಸಿದ ನಕಲಿ ಲೋನ್ ಬೆದರಿಕೆ!

ನಿನ್ನೆ ಈ ವರ್ಷದ ತಿರುವೋಣಂ ಬಂಪರ್ ಡ್ರಾ ನಡೆಯಿತು. 71 ಲಕ್ಷ ಟಿಕೆಟ್‌ಗಳು ಮಾರಾಟವಾದ ಓಣಂ ಬಂಪರ್‌ನಲ್ಲಿ 25 ಕೋಟಿ ಮೊದಲ ಬಹುಮಾನ ಗೆದ್ದ ಅದೃಷ್ಟವಂತರು ಯಾರೆಂಬ ಪ್ರಶ್ನೆಗೆ ಮಲಯಾಳಿಗಳು ಉತ್ತರ ಹುಡುಕುತ್ತಿದ್ದರು. ಕೊನೆಗೆ ಕಾದು ನೋಡುತ್ತಿದ್ದವರಿಗೆ ಬ್ರೇಕ್ ನೀಡಿದಂತೆ ಕರ್ನಾಟಕದ ಪಾಂಡ್ಯಪುರ ಮೂಲದ ಅಲ್ತಾಫ್ ಎಂಬುವವರು ಎಂದು ಇಂದು ಏಷ್ಯಾನೆಟ್ ನ್ಯೂಸ್‌ನಲ್ಲಿ ವರದಿಯಾಗಿದೆ. ಕರ್ನಾಟಕದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುವ ಅಲ್ತಾಫ್ ವಯನಾಡಿನಲ್ಲಿರುವ ಸಂಬಂಧಿಕರ ಮನೆಗೆ ಬಂದಾಗ ಟಿಕೆಟ್ ಖರೀದಿಸಿದ್ದರು.

ಕೇರಳ ಲಾಟರಿ ಇತಿಹಾಸದಲ್ಲೇ ಅತಿ ಹೆಚ್ಚು ಬಹುಮಾನ ಮೊತ್ತವನ್ನು ಹೊಂದಿರುವ ಓಣಂ ಬಂಪರ್ ಬಹುಮಾನ ಮೊತ್ತದ ಬಗ್ಗೆ ಜನರಲ್ಲಿ ಹಲವು ಸಂದೇಹಗಳಿವೆ. ಇದೀಗ 25 ಕೋಟಿ ಹೊಡೆದವರಿಗೆ ಅಷ್ಟು ಹಣ ಕೈಗೆ ಸಿಗುತ್ತದೆಯೇ ಎಂಬುದು ಎಲ್ಲರಿಗೂ ಕಾಡಲಿದೆ. ಆದರೆ, ಬಹುಮಾನ ಮೊತ್ತ ಪೂರ್ತಿ ಸಿಗುತ್ತದೆಯೇ ಅಥವಾ ಕಡಿಮೆಯಾಗುತ್ತದೆಯೇ ಎಂಬುದೇ ಪ್ರಶ್ನೆಯೂ ಇರುತ್ತದೆ. ಇಲ್ಲಿ 25 ಕೋಟಿ ಹೊಡೆದವರಿಗೆ ಆ ಮೊತ್ತ ಪೂರ್ತಿ ಕೈಗೆ ಸಿಗುವುದಿಲ್ಲ. ಇದು ಓಣಂ ಬಂಪರ್ ಮೊತ್ತವಲ್ಲ, ದಿನನಿತ್ಯದ ಲಾಟರಿಗಳಾಗಿದ್ದರೂ ಬಹುಮಾನ ಮೊತ್ತ ಪೂರ್ತಿ ಅದೃಷ್ಟವಂತರ ಕೈಗೆ ಸಿಗುವುದಿಲ್ಲ. ತೆರಿಗೆ ಕಡಿತಗೊಳಿಸಿದ ಮೊತ್ತವನ್ನು ವಿಜೇತರಿಗೆ ನೀಡಲಾಗುತ್ತದೆ. ಓಣಂ ಬಂಪರ್ ವಿಷಯದಲ್ಲಿ, 25 ಕೋಟಿಯಲ್ಲಿ 12 ಕೋಟಿ ರೂ.ಗಳು ಮಾತ್ರ ಲಾಟರಿ ಟಿಕೆಟ್ ಹಾರಿದ ಅದೃಷ್ಟವಂತರಿಗೆ ಸಿಗುತ್ತದೆ.

ಇದನ್ನೂ ಓದಿ: ಕೆಲಸ ಕಳೆದುಕೊಂಡ ಎರಡೇ ದಿನದಲ್ಲಿ ಜಾಕ್‌ಪಾಟ್: 2.5 ಕೋಟಿ ರೂ ಲಾಟರಿ ಗೆದ್ದ ಮಹಿಳೆ!

25 ಕೋಟಿ ಹಣದಲ್ಲಿ ಎಷ್ಟು ಹಣ ಸಿಗುತ್ತದೆ?.
ತಿರುವೋಣಂ ಬಂಪರ್ ಬಹುಮಾನ ಮೊತ್ತ: 25 ಕೋಟಿ ರೂ.
ಏಜೆನ್ಸಿ ಕಮಿಷನ್ 10 ಶೇಕಡಾ: 2.5 ಕೋಟಿ ರೂ.
ಬಹುಮಾನ ತೆರಿಗೆ 30 ಶೇಕಡಾ: 6.75 ಕೋಟಿ ರೂ.
ಮೊದಲ ಬಹುಮಾನ ಗೆದ್ದ ವ್ಯಕ್ತಿಯ ಖಾತೆಗೆ: 15.75 ಕೋಟಿ ರೂ.
ತೆರಿಗೆ ಮೊತ್ತದ ಮೇಲಿನ ಸರ್ಚಾರ್ಜ್ 37 ಶೇಕಡಾ: 2.49 ಕೋಟಿ ರೂ.
ಆರೋಗ್ಯ, ಶಿಕ್ಷಣ ಸೆಸ್ 4 ಶೇಕಡಾ: 36.9 ಲಕ್ಷ ರೂ.
ಖಾತೆಗೆ ಬಂದ ಮೊತ್ತದ ಮೇಲಿನ ಒಟ್ಟು ತೆರಿಗೆ: 2.85 ಕೋಟಿ ರೂ.
ಎಲ್ಲಾ ತೆರಿಗೆಗಳನ್ನು ಕಡಿತಗೊಳಿಸಿದ ನಂತರ ಅದೃಷ್ಟವಂತರಿಗೆ ಸಿಗುವ ಮೊತ್ತ: 12,88,26,000 ರೂ.(12.8 ಕೋಟಿ) 

click me!