
ದೆಹಲಿ(ಜು.21): ಜೂನ್ 16 ರಿಂದ ಚಿನ್ನದ ಆಭರಣಗಳ ಕಡ್ಡಾಯ ಹಾಲ್ಮಾರ್ಕಿಂಗ್ ಅನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು. ಆದರೆ ಈಗ ಅದನ್ನು ಹಿಂಪಡೆಯಲಾಗಿದೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ.
ಹಾಲ್ಮಾರ್ಕಿಂಗ್ ನಿಯಮ ಹಿಂಪಡೆಯಲಾಗಿದೆ ಎಂದು ಸುತ್ತೋಲೆ ಸೇರಿಸಿದ್ದು ಸುಳ್ಳು ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ. ಈಗಾಗಲೇ ಈ ಕುರಿತು ಇದ್ದಂತಹ ಗೊಂದಲಕ್ಕೆ ತೆರೆ ಬಿದ್ದಿದೆ.
ಗೋಲ್ಡ್ ಜ್ಯುವೆಲ್ಲರಿಯ ಕಡ್ಡಾಯ ಹಾಲ್ಮಾರ್ಕಿಂಗ್ ಬಗ್ಗೆ ಜಿಒಐ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳು ನಕಲಿ ಎಂದು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಮಣಪ್ಪುರಂ ಆಫೀಸ್ ದರೋಡೆ: 19 ಕೆಜಿ ಚಿನ್ನ, 5 ಲಕ್ಷ ದೋಚಿ ಪರಾರಿ
ಚಿನ್ನದ ಹಾಲ್‌ಮಾರ್ಕಿಂಗ್‌ನ ಹಂತ -1 ಅನುಷ್ಠಾನಕ್ಕಾಗಿ ಕೇಂದ್ರವು ಈಗಾಗಲೇ 28 ರಾಜ್ಯಗಳಿಂದ 256 ಜಿಲ್ಲೆಗಳನ್ನು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಗುರುತಿಸಿದೆ.
ಗೋಲ್ಡ್ ಹಾಲ್ಮಾರ್ಕಿಂಗ್ ಎಂದರೇನು?
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಪ್ರಕಾರ, ಅಮೂಲ್ಯವಾದ ಲೋಹದ ವಸ್ತುಗಳಲ್ಲಿ ಅವುಗಳ ಪ್ರಮಾಣಾನುಗುಣವಾದ ವಿಷಯದ ನಿಖರವಾದ ನಿರ್ಣಯ ಮತ್ತು ಅಧಿಕೃತ ರೆಕಾರ್ಡಿಂಗ್ ನಮೂದಿಸಬೇಕು. ಇದು ಹಾಲ್ಮಾರ್ಕಿಂಗ್ ಆಗಿದೆ.
ಅನಿಯಮಿತ ಚಿನ್ನ ಅಥವಾ ಬೆಳ್ಳಿಯ ಗುಣಮಟ್ಟದ ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವುದು ಹಾಲ್ಮಾರ್ಕಿಂಗ್ ಹಿಂದಿನ ಉದ್ದೇಶವಾಗಿದೆ ಎಂದು ಬಿಐಎಸ್ ಹೇಳಿದೆ. ಜಾಗತಿಕವಾಗಿ ಭಾರತವು ಚಿನ್ನದ ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮುವುದನ್ನು ಇದು ಖಾತ್ರಿಗೊಳಿಸುತ್ತದೆ.
ಬ್ಯಾಂಕ್‌ನಲ್ಲಿ ಚಿನ್ನವಿಟ್ಟು ಬಡ್ಡಿ ಗಳಿಸಿ, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ
ಚಿನ್ನದ ಹಾಲ್ಮಾರ್ಕಿಂಗ್ ಈ ಹಿಂದೆ ಸ್ವಯಂಪ್ರೇರಿತವಾಗಿತ್ತು. ಆದರೆ 2019 ರಲ್ಲಿ, ಇದು ಜನವರಿ 15, 2021 ರಿಂದ ಕಡ್ಡಾಯವಾಗಲಿದೆ ಎಂದು ಹೇಳಿದೆ. ಕೊರೊನಾವೈರಸ್ ಕಾಯಿಲೆ (ಕೋವಿಡ್ -19) ಸಾಂಕ್ರಾಮಿಕ ರೋಗದಿಂದಾಗಿ ಆಭರಣಕಾರರು ಸ್ವಲ್ಪ ಸಮಯವಕಾಶ ಕೆಳಿದ್ದರಿಂದ ಈ ಗಡುವನ್ನು ಜುಲೈ 15 ರವರೆಗೆ ಎರಡು ಬಾರಿ ವಿಸ್ತರಿಸಲಾಗಿತ್ತು.
ಈ ವರ್ಷದ ಆಗಸ್ಟ್ ವರೆಗೆ ಹಾಲ್ಮಾರ್ಕಿಂಗ್ ಅನ್ನು ಅನುಸರಿಸದಿದ್ದಕ್ಕಾಗಿ ಯಾವುದೇ ದಂಡ ವಿಧಿಸಲಾಗುವುದಿಲ್ಲ
ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಕಡ್ಡಾಯ ಹಾಲ್ಮಾರ್ಕಿಂಗ್ ಅನ್ನು ಅನುಸರಿಸದ ಆಭರಣ ವ್ಯಾಪಾರಿಗಳಿಗೆ ಆಗಸ್ಟ್ ವರೆಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದು ಕೇಂದ್ರವು ಜೂನ್‌ನಲ್ಲಿ ಘೋಷಿಸಿದೆ.
ಆದರೆ ಕಾನೂನಿನ ಪ್ರಕಾರ ಗ್ರಾಹಕರ ದೂರುಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರವು ತಿಳಿಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಬಿಸ್ಕೇರ್ ಎಪಿಪಿ ಅಥವಾ ಗ್ರಾಹಕ ಪೋರ್ಟಲ್‌ನಲ್ಲಿ ದೂರುಗಳನ್ನು ಸಲ್ಲಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ