
ಮದುವೆ ಮನೆಯಲ್ಲಿ ಊಟ ಮಾಡ್ತಿದ್ದಾಗ ರಸಗುಲ್ಲಾ ಗಂಟಲಿನಲ್ಲಿ ಸಿಲುಕಿ ಉಸಿರುಕಟ್ಟಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಜಾರ್ಖಂಡ್‌ನ ಜೆಮ್ಶೆಡ್‌ಪುರದಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರು ಊಟ ಮಾಡುತ್ತಿದ್ದ ವೇಳೆ ಗಂಟಲಿನಲ್ಲಿ ರಸಗುಲ್ಲಾ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು 41 ವರ್ಷದ ಲಲಿತ್ ಸಿಂಗ್ ಎಂದು ಗುರುತಿಸಲಾಗಿದೆ. ಲಲಿತ್ ಸಿಂಗ್ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ಮಲಿಯಂತ ಗ್ರಾಮಕ್ಕೆ ಹೋಗಿದ್ದಾಗ ಶನಿವಾರ ಈ ಘಟನೆ ನಡೆದಿದೆ.
ವೈದ್ಯರ ಪ್ರಕಾರ, ಸಿಹಿತಿನಿಸು ರಸಗುಲ್ಲಾ ಅವರ ಗಂಟಲಿನಲ್ಲಿ ಸಿಲುಕಿ ಉಸಿರಾಟದ ನಾಳವನ್ನು ಬಂದ್ ಮಾಡಿದ್ದರಿಂದ, ಅವರ ದೇಹಕ್ಕೆ ಆಮ್ಲಜನಕದ ಪೂರೈಕೆ ಕಡಿತಗೊಂಡು ಅವರು ಸಾವನ್ನಪ್ಪಿದ್ದಾರೆ. ರಸಗುಲ್ಲಾ ಅವರ ಉಸಿರಾಟದ ನಾಳವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ ಪರಿಣಾಮವಾಗಿ, ಸಿಂಗ್ ಕೆಲವೇ ನಿಮಿಷಗಳಲ್ಲಿ ನಿಧನರಾದರು. ಭೋಜನದ ಸಮಯದಲ್ಲಿ ಸಿಂಗ್ ಕುಸಿದು ಬಿದ್ದರು, ನಂತರ ಸ್ಥಳದಲ್ಲಿದ್ದ ಜನರು ಅವರನ್ನು ಎಂಜಿಎಂ ಆಸ್ಪತ್ರೆಗೆ ಕರೆದೊಯ್ದರು ಆದರೆ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಲಲಿತ್ ಸಿಂಗ್ ಅವರ ದೇಹವನ್ನು ನೀಡಲಾಯ್ತು.
ಇದನ್ನೂ ಓದಿ: ನಾನು ಕೂಡ ನಿನ್ನ ಅಮ್ಮನ ಹಾಲು ಕುಡಿದೇ ಬೆಳೆದಿದ್ದು: ಹಠ ಮಾಡಿದ ಎಮ್ಮೆ ಕರುವಿಗೆ ಬಾಲಕಿಯ ಸವಾಲು: ವೀಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ