
ಮಂಗಳೂರು(ಜ.15) ಆಸ್ಪತ್ರೆ ಮೃತ ಎಂದು ದೃಢಪಡಿಸಿದ ಬಳಿಕ ಜೀವಂತವಾಗಿರುವ ಹಲವು ಘಟನೆಗಳು ನಡೆದಿದೆ. ಇದೀಗ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಪಾರ್ಶ್ವವಾಯು ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ವ್ಯಕ್ತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ಸಹಾಯದ ಮೂಲಕ ಚಿಕಿತ್ಸೆ ಮುಂದುವರಿದಿತ್ತು. ಆದರೆ ವ್ಯಕ್ತಿಯಲ್ಲಿ ಯಾವುದೇ ಚೇತರಿಕೆ ಬಂದಿಲ್ಲ. ಹೀಗಾಗಿ ವೆಂಟಿಲೇಟರ್ ನರೆವು ಹಿಂಪಡೆಯಲಾಗಿತ್ತು. ಕೆಲ ಹೊತ್ತಿನ ಬಳಿಕ ವ್ಯಕ್ತಿ ಮೃತಪಟ್ಟಿರುವುದಾಗಿ ಆಸ್ಪತ್ರೆ ಖಚಿತಪಡಿಸಿದೆ. ಆದರೆ ಇದೇ ವ್ಯಕ್ತಿ ಕೇರಳದ ಕಣ್ಣೂರು ಆಸ್ಪತ್ರೆ ಶವಗಾರದಲ್ಲಿ ಜೀವಂತ ಪತ್ತೆಯಾದ ಘಟನೆ ನಡೆದಿದೆ.
ಮಂಗಳೂರಿನಲ್ಲಿ ಮೃತ ಕಣ್ಣೂರಿನಲ್ಲಿ ಜೀವಂತ
ಕೇರಳದ ಕಣ್ಣೂರು ಮೂಲದ 67 ವರ್ಷದ ವಿ ಪವಿತ್ರನ್ ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದರು. ಇದರ ನಡುವೆ ಪಾರ್ಶ್ವವಾಯುಗೆ ತುತ್ತಾದರು. ಆರೋಗ್ಯ ತೀವ್ರವಾಗಿ ಕ್ಷೀಣಿಸಿದ ಕಾರಣ ಪವಿತ್ರನ್ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಪವಿತ್ರನ್ ಆರೋಗ್ಯ ತೀವ್ರ ಹದಗೆಟ್ಟಿತು. ಹೀಗಾಗಿ ಆಸ್ಪತ್ರೆ ವೈದ್ಯರು ತಪಾಸಣೆ ನಡೆಸಿ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು.
ತೀವ್ರ ಹಲ್ಲೆಯಿಂದ ಸತ್ತಿದ್ದಾನೆಂದು ಮಣ್ಣಿನಡಿ ಹೂತು ಹಾಕಿದ ವ್ಯಕ್ತಿಯನ್ನು ಬದುಕಿಸಿದ ಬೀದಿ ನಾಯಿ!
ಒಂದು ದಿನ ಚಿಕಿತ್ಸೆ ಮುಂದುವರಿಸಿದರೂ ಪವಿತ್ರನ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡಿಲ್ಲ. ವೆಂಟಿಲೇಟರ್ ಮೂಲಕ ಚಿಕಿತ್ಸೆ ಆರಂಭಿಸಲಾಗಿದೆ. ಒಂದು ಇಡೀ ದಿನ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗಿದೆ. ಆದರೆ ಪವಿತ್ರನ್ ಆರೋಗ್ಯ ಕ್ಷೀಣಿಸುತ್ತಾ ಹೋಗಿದೆ. ವೆಂಟಿಲೇಟರ್ ಚಿಕಿತ್ಸೆ ಬಳಿಕ ಪವಿತ್ರನ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಪವಿತ್ರನ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಹೀಗಾಗಿ ವೆಂಟಿಲೇಟರ್ ನೆರವು ನಿಲ್ಲಿಸುವ ಕುರಿತು ಕುಟುಂಬಸ್ಥರ ಜೊತೆ ಚರ್ಚಿಸಿದ್ದಾರೆ.
ಪವಿತ್ರನ್ ನೀಡಿದ್ದ ವೆಂಟಿಲೇಟರ್ ನೆರವು ಹಿಂಪಡೆಯಲಾಗಿತ್ತು. ಬಳಿಕ ಪವಿತ್ರನ್ ಚಿಕಿತ್ಸೆ ಮುಂದುವರಿದಿತ್ತು. ಆದರೆ ಆರೋಗ್ಯ ತೀವ್ರವಾಗಿ ಹದಗೆಟ್ಟು ಪವಿತ್ರನ್ ಉಸಿರು ಚೆಲ್ಲಿದ್ದರು. ತಪಾಸಣೆ ನಡೆಸಿದ ವೈದ್ಯರು ಪವಿತ್ರನ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಸಂಜೆ 6.30ರ ವೇಳೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ಮರಳಿ ಕಣ್ಣೂರಿಗೆ ತರಲು ಕಟುಂಬಸ್ಥರು ನಿರ್ಧರಿಸಿದ್ದಾರೆ. ಇದರಂತೆ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಸಾಗಿಸಿದ್ದಾರೆ. ಆದರೆ ಕಣ್ಣೂರು ತಲುಪ ವೇಳೆ ರಾತ್ರಿ 11.30 ಆಗಿದೆ. ಕಳೆದ ಕೆಲ ದಿನಗಳಿಂದ ಬಹು ಅಂಗಾಗಳು ವೈಫಲ್ಯಗೊಂಡಿತ್ತು. ಹೀಗಾಗಿ ಮತದೇಹವನ್ನು ಕಣ್ಣೂರಿನ ಎಕೆಜಿ ಆಸ್ಪತ್ರೆಯ ಶವಗಾರದಲ್ಲಿಟ್ಟು, ಬೆಳಗ್ಗೆ ಮನೆಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಇದರಂತೆ ಎಕೆಜಿ ಆಸ್ಪತ್ರೆ ಸಂಪರ್ಕಿಸಿ ವ್ಯವಸ್ಥೆ ಮಾಡಿದ್ದಾರೆ. ಪವಿತ್ರನ್ ಮೃತದೇಹವನ್ನು ಆ್ಯಂಬುಲೆನ್ಸ್‌ನಿಂದ ಶವಗಾರಕ್ಕೆ ಸ್ಥಳಾಂತರ ಮಾಡಲು ಕುಟುಂಬಸ್ಥರು ಮುಂದಾದಾಗ ಪವಿತ್ರನ್ ಕೈಗಳು ಚಲಿಸಿದಂತೆ ಭಾಸವಾಗಿದೆ. ಎದೆಬಡಿತ ಚೆಕ್ ಮಾಡಿದ್ದಾರೆ. ಹೆಚ್ಚಿನ ಸುಳಿವಿಲ್ಲ. ಎಕೆಜಿ ಆಸ್ಪತ್ರೆ ವೈದ್ಯರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ತಪಾಸನೆ ನಡೆಸಿದ್ದಾರೆ. ಈ ವೇಳೆ ಎದೆಬಡಿತ ಇರುವುದು ಪತ್ತೆಯಾಗಿದೆ. ತಕ್ಷಣವೇ ಐಸಿಯುಗೆ ಸ್ಥಳಾಂತರ ಮಾಡಿ ಚಿಕಿತ್ಸೆ ಆರಂಭಿಸಲಾಗಿದೆ. ಸದ್ಯ ಪವಿತ್ರನ್ ಆರೋಗ್ಯ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಸದ್ಯ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇತ್ತ ಮಂಗಳೂರಿನ ಖಾಸಗಿ ಆಸ್ಪತ್ರೆ ವಿರುದ್ದ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಲು ಪವಿತ್ರನ್ ಕುಟುಂಬಸ್ಥರ ಮುಂದಾಗಿದ್ದಾರೆ. ಆಸ್ಪತ್ರೆ ನಿರ್ಲಕ್ಷ್ಯದ ಕುರಿತು ಪ್ರಶ್ನೆಗಳು ಎದ್ದಿದೆ. ಸದ್ಯ ಪವಿತ್ರನ್ ಆರೋಗ್ಯ ಚೇತರಿಸಿದ ಬೆನ್ನಲ್ಲೇ ದೂರು ದಾಖಲಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಸರ್ಕಾರಿ ದಾಖಲೆಗಳಲ್ಲಿ ಮೃತ, ಬದುಕಿದ್ದೇನೆಂದು ಸಾಬೀತುಪಡಿಸಲು ಈತ ಮಾಡಿದ ಕೆಲಸಕ್ಕೆ ಪೊಲೀಸರೇ ಶಾಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ