ತರಕಾರಿ ಮಾರಾಟಗಾರನ ಸ್ಮಾರ್ಟ್ ವರ್ಕ್‌ ಆಯ್ತು ವೈರಲ್

Published : May 18, 2022, 01:07 PM IST
ತರಕಾರಿ ಮಾರಾಟಗಾರನ ಸ್ಮಾರ್ಟ್ ವರ್ಕ್‌ ಆಯ್ತು ವೈರಲ್

ಸಾರಾಂಶ

ಮಿಂಚಿನ ವೇಗದಲ್ಲಿ ಎಲೆಕೋಸು ಕತ್ತರಿಸುವ ವ್ಯಕ್ತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕೆಲವರಲ್ಲಿರುವ ವಿಶೇಷ ಕಲೆಗಳನ್ನು ನೋಡಿದ್ರೆ ನಮಗೆ ಇವರೇನು ಮನಷ್ಯರೋ ಅನ್ಸೋದು ಸಾಮಾನ್ಯ. ಸೋಶಿಯಲ್ ಮೀಡಿಯಾಗಳಲ್ಲಿ ನೀವು ಜನರ ಹಲವು ಸ್ಮಾರ್ಟ್‌ ವರ್ಕ್‌ಗಳ ವಿಡಿಯೋಗಳನ್ನು ವಿಶೇಷ ಪ್ರತಿಭೆಗಳನ್ನು ಈಗಾಗಲೇ ನೋಡಿರಬಹುದು.ಈಗ ಅಂತಹದೇ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತಿದೆ.

ವಿಡಿಯೋದಲ್ಲಿ ಕಾಣಿಸುವಂತೆ ಇದು ತರಕಾರಿ ಮಾರುಕಟ್ಟೆಯ ದೃಶ್ಯವಾಗಿದೆ. ಬಹುಶಃ ಇವರು ತರಕಾರಿ ವ್ಯಾಪಾರಸ್ಥರೋ ರೈತರೋ ಅಥವಾ ದಳ್ಳಾಳಿಗಳೋ ಗೊತ್ತಿಲ್ಲ. ಆದರೆ ಕ್ಯಾಬೇಜ್ ಹೂ ಕೋಸನ್ನು ಚೀಲವೊಂದಕ್ಕೆ ತುಂಬಿಸುವ ಮೊದಲು ಅದರ ಕಡೆಯನ್ನು ಕತ್ತರಿಸುವ ವೇಗ ನೋಡಿದರೆ ಬೆರಗಾಗೋದಂತು ಗ್ಯಾರಂಟಿ. ಓರ್ವ ಎಲೆಕೋಸನ್ನು ತುಂಬಿಸುವ ಚೀಲವನ್ನು ಹಿಡಿದುಕೊಂಡಿದ್ದರೆ ಮತ್ತೊಬ್ಬ ಮಧ್ಯೆ ಎಲೆಕೋಸಿನ ಕಡೆ ಕತ್ತರಿಸಿ ಚೀಲಕ್ಕೆ ತುಂಬಿಸಲು ಪಕ್ಕದಲ್ಲೇ  ನಿಂತಿರುತ್ತಾನೆ. ಇನ್ನೊಬ್ಬ ಕೆಳಗಿನಿಂದ ಎಲೆಕೋಸನ್ನು ಎತ್ತಿ ಮೇಲೆ ಕೊಡುತ್ತಿದ್ದಾನೆ. ಕೆಳಗಿದ್ದವ ಒಂದೊಂದೇ ಎಲೆಕೋಸನ್ನು ನಿಂತವನ ಕೈಗೆ ಬಿಸಾಕುತ್ತಿದ್ದರೆ ಆತ ಅಷ್ಟೇ ವೇಗದಲ್ಲಿ ಅದರ ಕಡೆಯನ್ನು ಕತ್ತರಿಸಿ ಚೀಲಕ್ಕೆ ಹಾಕುತ್ತಾನೆ. ಎಲ್ಲಿಯೂ ಇವರ ಕೆಲಸ ಕ್ಷಣವೂ ನಿಲ್ಲುವುದಿಲ್ಲ. ಒಂದೂ ಎಲೆಕೋಸು ಕೈ ತಪ್ಪಿ ಕೆಳಗೆ ಬೀಳೋದಿಲ್ಲ. 

Beware of Tapeworm : ಕ್ಯಾಬೇಜ್ ನಲ್ಲಿದೆ ಮೆದುಳಿಗೆ ಹಾನಿ ಮಾಡೋ ಮಾರಕ ಹುಳ

ಈ ವಿಡಿಯೋವನ್ನು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ನೆಟ್ಟಿಗರು ಆತನ ವೇಗ ಹಾಗೂ ಏಕಾಗ್ರತೆಯಿಂದ ಮಾಡುತ್ತಿರುವ ಮಿಂಚಿನ ವೇಗದ ಕೆಲಸ ನೋಡಿ ಫಿದಾ ಆಗಿದ್ದಾರೆ. ಈ ವಿಡಿಯೋವನ್ನು ಗ್ರೀನ್ ಬೆಲ್ಟ್ ಮತ್ತು ರೋಡ್ ಇನ್ಸ್ಟಿಟ್ಯೂಟ್‌ನ (Green Belt and Road Institute) ಅಧ್ಯಕ್ಷ ಎರಿಕ್ ಸೋಲ್ಹೈಮ್(Erik Solheim) ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಣಕ್ಕೆ ಭಾರತಕ್ಕೆ ರೋಬೋಟಿಕ್ ಆಟೊಮೇಷನ್ ತಂತ್ರಜ್ಞಾನದ ಅಗತ್ಯ ಇಲ್ಲ ಎಂದು ಅವರು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

 

ಭಾರತದಲ್ಲಿ ಹೀಗೆ ವಿಶಿಷ್ಟ ಪ್ರತಿಭೆಗಳನ್ನು ಹೊಂದಿರುವ ಎಲೆ ಮರೆಯ ಕಾಯಿಗಳು ಸಾಕಷ್ಟಿವೆ. ಕೆಲ ದಿನಗಳ ಹಿಂದೆ ಟ್ರಕ್‌ ಡ್ರೈವರ್‌ ಒಬ್ಬರು ಹಾಡು ಹಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮೊಹಮ್ಮದ್ ರಫಿ ಅವರು ಹಾಡಿದ ಹಾಡೊಂದನ್ನು ಟ್ರಕ್‌ ಚಾಲಕರೊಬ್ಬರು ಸೊಗಸಾಗಿ ಹಾಡಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಚಾಲಕನ ಕಂಠಸಿರಿಗೆ ಜನ ಬೆರಗಾಗಿದ್ದಾರೆ. ಈ ವೀಡಿಯೊವನ್ನು ವಿವೇಕ್ ವರ್ಮಾ (Vivek Verma) ಎಂಬುವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ. ವಿವೇಕ್ ಸ್ವತಃ ಗಾಯಕರಾಗಿದ್ದಾರೆ. ಕಮಲೇಶ್ ಅಂಕಲ್‌ ಅವರು ತಮ್ಮ ಇಡೀ ಜೀವನದಲ್ಲಿ ಟ್ರಕ್ ಓಡಿಸಿರಬಹುದು. ಆದರೆ ಅವರು ಹೃದಯದಿಂದ ಮತ್ತು ಆತ್ಮದಿಂದ ಹಾರ್ಡ್ ಕೋರ್ ಸಂಗೀತಗಾರ ಎಂದು ವಿವೇಕ್‌ ವರ್ಮಾ ಬರೆದಿದ್ದಾರೆ.

ಹಲವು ಬಾರಿ ವಿವೇಕ್ ವರ್ಮಾ ಅವರು ಒತ್ತಾಯ ಮಾಡಿದ ಮೇಲೆ ಅಂಕಲ್‌ ಕಮಲೇಶ್‌ ಈ ಹಾಡನ್ನು ಹಾಡಿದರು ಎಂದು ಅವರು ಕಾಮೆಂಟ್‌ನಲ್ಲಿ ನಂತರ ಬರೆದಿದ್ದಾರೆ. ಅವರ  ಹಾಡುಗಾರಿಕೆ ನಮಗೆಲ್ಲರಿಗೂ ಇಷ್ಟವಾಗಿದೆ ಮತ್ತು ಅದಕ್ಕಾಗಿಯೇ  ಈ ವೀಡಿಯೊವನ್ನು ನಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಮತ್ತು ಅವಕಾಶ ಸಿಕ್ಕರೆ ಶೀಘ್ರದಲ್ಲೇ ಅವರೊಂದಿಗೆ ಹಾಡನ್ನು ರೆಕಾರ್ಡ್ ಮಾಡುವುದಾಗಿಯೂ ವಿವೇಕ್ ವರ್ಮಾ ಬರೆದಿದ್ದಾರೆ. ಮೊಹಮ್ಮದ್ ರಫಿ (mohammed rafi) ಅವರ ಪ್ರಸಿದ್ಧ ಗೀತೆ 'ಮುಝೆ ಇಷ್ಕ್ ಹೈ ತುಜಿ ಸೇ' ಹಾಡನ್ನು ಚಾಲಕ ಕಮಲೇಶ್ (Kamalesh)ಹೇಗೆ ಹಾಡುತ್ತಿದ್ದಾರೆ ಎಂಬುದನ್ನು ನೀವು ವೀಡಿಯೊದಲ್ಲಿ ನೋಡಬಹುದು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್
ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು