ಗಂಡ್ಮಕ್ಕಳಿಗೂ ಕಾಟ, ರೈಲಿನಲ್ಲಿ ಮಲಗಿದ್ದವನಿಗೆ ಮುತ್ತಿಕ್ಕಿ ರೊಮ್ಯಾನ್ಸ್‌ಗಿಳಿದ ವ್ಯಕ್ತಿ

Published : Mar 05, 2025, 07:22 PM ISTUpdated : Mar 06, 2025, 10:02 AM IST
ಗಂಡ್ಮಕ್ಕಳಿಗೂ ಕಾಟ, ರೈಲಿನಲ್ಲಿ ಮಲಗಿದ್ದವನಿಗೆ ಮುತ್ತಿಕ್ಕಿ ರೊಮ್ಯಾನ್ಸ್‌ಗಿಳಿದ ವ್ಯಕ್ತಿ

ಸಾರಾಂಶ

ರೈಲಿನಲ್ಲಿ ಮಲಗಿದ್ದ ವ್ಯಕ್ತಿಯ ಬಳಿಕ ಭೂಪ, ಮೆಲ್ಲನೆ ಮುತ್ತಿಕ್ಕಿ ರೊಮ್ಯಾನ್ಸ್‌ಗೆ ಇಳಿದಿದ್ದಾನೆ. ವಿಚಿತ್ರ ಅನುಭವದಿಂದ ಎಚ್ಚೆತ್ತ ವ್ಯಕ್ತಿ ವಿಡಿಯೋ ಮಾಡಿ ಮುತ್ತಿಕ್ಕಿದ ವ್ಯಕ್ತಿ ಕಾಲರ್ ಹಿಡಿದು ಕ್ಷಮೆ ರಂಪಾಟ ನಡೆಸಿದ ಘಟನೆ ಸೆರೆಯಾಗಿದೆ.  

ನವದೆಹಲಿ(ಮಾ.05) ರೈಲು ಪ್ರಯಾಣದಲ್ಲಿ ನಿದ್ದೆಗೆ ಜಾರುವುದು ಸಾಮಾನ್ಯ. ರೈಲುಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ನಡೆದ ದೌರ್ಜನ್ಯಗಳ ಕುರಿತು ವರದಿಯಾಗಿದೆ. ಆದರೆ ಈ ಬಾರಿ ವ್ಯಕ್ತಿಯೊಬ್ಬನ ಮೇಲೆ ಕಾಮುಕನ ಕಣ್ಣು ಬಿದ್ದ ಘಟನೆ ವರದಿಯಾಗಿದೆ. ಗಢದ್ ನಿದ್ದೆಯಲ್ಲಿದ್ದ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ಮುತ್ತಿಕ್ಕಿದ ಆರೋಪ ಕೇಳಿಬಂದಿದೆ. ಮಲಗಿದ್ದ ವ್ಯಕ್ತಿ ಮೇಲೆ ಮುತ್ತಿಕ್ಕಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ರಂಪಾಟವೇ ನಡೆದು ಹೋಗಿದೆ. ಮುತ್ತಿಕ್ಕಿದವನ ಪತ್ನಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರೂ ರಂಪಾಟ ಕಡಿಮೆಯಾಗಿಲ್ಲ. ಈ ಕುರಿತು ದೃಶ್ಯ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ವಿಡಿಯೋದಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದೆ. ಆರೋಪ ಮಾಡಿದ ವ್ಯಕ್ತಿಯೇ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದ ಪ್ರಕಾರ, ಲೋವರ್ ಬರ್ತ್‌ನಲ್ಲಿ ಕುಳಿತಿದ್ದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಸೀಟುಗಳು ಭರ್ತಿಯಾಗಿದೆ. ಎಲ್ಲೆಲ್ಲಿ ಜಾಗ ಇದೆಯೋ ಅಲ್ಲೆಲ್ಲಾ ಕುಳಿತಿದ್ದಾರೆ. ಎಲ್ಲಾ ಖಾಲಿ ಜಾಗಗಳು ತುಂಬಿ ತುಳುಕುತ್ತಿದೆ. ಇದರ ನಡುವೆ ಗಂಭೀರ ಆರೋಪವೂ ಕೇಳಿಬಂದಿದೆ.

ಪ್ರಯಾಣಿಕರಿಗೆ ಗುಡ್ ನ್ಯೂಸ್, ಮೊದಲ ಹೈಡ್ರೋಜನ್ ರೈಲು ಈ ತಿಂಗಳಲ್ಲೇ ಸಂಚಾರ, ಯಾವ ಮಾರ್ಗ?

ಪತಿ ಹಾಗೂ ಪತ್ನಿ ಇಬ್ಬರು ಲೋವರ್ ಬರ್ತ್‌ನಲ್ಲಿ ಕುಳಿತಿದ್ದರು. ಇದರ ಪಕ್ಕದಲ್ಲೇ ಮತ್ತೊಬ್ಬ ವ್ಯಕ್ತಿ ಮಲಗಿದ್ದ. ಮಲಗಿದ್ದ ವ್ಯಕ್ತಿಯ ಬಳಿಕ ಈ ದಂಪತಿ ಬೇರೆಡೆ ಹೋಗಿ ಮಲುಗುವಂತೆ ಸೂಚಿಸಿದ್ದಾರೆ. ಆದರೆ ಬೇರೆ ಜಾಗವೇ ಇಲ್ಲದ ಕಾರಣ ವ್ಯಕ್ತಿ ಮಲಗಿದ್ದಾನೆ ಎಂದು ವಿಡಿಯೋ ಸಂಭಾಷಣೆಯಲ್ಲಿ ಹೇಳಲಾಗಿದೆ. ಮಲಗಿದ್ದ ವ್ಯಕ್ತಿ ಏಕಾಏಕಿ ಎದ್ದಿದ್ದಾನೆ. ಕಾರಣ ಕುಳಿತಿದ್ದ ವ್ಯಕ್ತಿ ಈತನಿಗೆ ಮುತ್ತಿಕ್ಕಿ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ್ದಾನೆ. ಈತ ವಿಡಿಯೋ ಮಾಡಿ ಇಂದು ತನ್ನ ಮೇಲೆ ನಡೆದ ಈ ಕೃತ್ಯಕ್ಕೆ ಪಾಠ ಕಲಿಸುತ್ತೇನೆ ಎಂದಿದ್ದಾನೆ.

ಮಲಗಿದ್ದ ವ್ಯಕ್ತಿ ಎದ್ದು ರಂಪಾಟ ಶುರುಮಾಡಿದ್ದಾನೆ. ತನಗೆ ಕುಳಿತಿದ್ದ ವ್ಯಕ್ತಿ ಮುತ್ತಿಕ್ಕಿದ್ದಾನೆ, ಅಸಭ್ಯವಾಗಿ ವರ್ತಿಸಿದ್ದಾನೆ. ತನಗೆ ನ್ಯಾಯಬೇಕು ಎಂದು ಕೂಗಾಡಲು ಶುರುಮಾಡಿದ್ದಾನೆ. ಆದರೆ ಈತನ ಮಾತಿಗೆ ರೈಲಿನಲ್ಲಿದ್ದ ಇತತರಿಂದ ಯಾವುದೇ ಸ್ಪಂದನೆ ವ್ಯಕ್ತವಾಗಲಿಲ್ಲ. ಪತ್ನಿ ಜೊತೆಗಿರುವಾಗ ಮತ್ತೊಬ್ಬನಿಗೆ ಮುತ್ತಿಕ್ಕುವ ಅಗತ್ಯವೇನಿದೆ ಎಂದು ಹಲವರು ಮಾತನಾಡಿಕೊಂಡಿದ್ದಾರೆ. ಆದರೆ ಪಟ್ಟು ಬಿಡದ ಈತ, ಏರು ಧ್ವನಿಯಲ್ಲಿ ಮಾತನಾಡಲು ಆರಂಭಿಸಿದ್ದಾನೆ. ನನಗೆ ಆಗಿರುವ ಘಟನೆಇನ್ಯಾರಿಗೋ ಮಹಿಳೆಯರಿಗೆ ಆಗಿದ್ದರೆ ಕತೆ ಏನು? ಎಂದು ರಂಪಾಟ ನಡೆಸಿದ್ದಾರೆ. 

 

 

ಆರೋಪ ತಳ್ಳಿ ಹಾಕಿದರೂ ರಂಪಾಟ ಮುಗಿದಿಲ್ಲ. ಇದರ ನಡುವೆ ಆರೋಪ ಹೊರಿಸಿದ ವ್ಯಕ್ತಿಯ ಪತ್ನಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಮುತ್ತಿಕ್ಕುವ ಅವಶ್ಯಕತೆ ತನ್ನ ಗಂಡನಿಗಿಲ್ಲ. ಗಂಡ ಆ ರೀತಿಯ ವ್ಯಕ್ತಿಯಲ್ಲ. ನಿಮಗೆ ಮೊದಲೆ ಬೇರೆ ಸ್ಥಳದಲ್ಲಿ ಮಲಗುವಂತೆ ಸೂಚಿಸಿದ್ದರೂ ನೀವು ನಿರಾಕರಿಸಿದ್ದೀರಿ ಎಂದು ಮಹಿಳೆ ಪ್ರತಿಕ್ರಿಯಿಸಿದ್ದಾರೆ. ಸುಖಾಸುಮ್ಮನೆ ಆರೋಪ ಮಾಡಬೇಡಿ. ಜಗಳ ಹೊಡೆದಾಟ ಬೇಡ, ಇಲ್ಲಿಗೆ ಬಿಟ್ಟುಬಿಡಿ ಎಂದು ಮಹಿಳೆ ಮನವಿ ಮಾಡಿಕೊಂಡಿದ್ದಾಳೆ. ಆದರೆ ಕಾಲರ್ ಹಿಡಿದು ಎಳೆದು ತಂದ ವ್ಯಕ್ತಿ ಹಲ್ಲೆಗೆ ಮುಂದಾದ ಘಟನೆ ರೈಲು ಪ್ರಯಾಣದಲ್ಲಿ ನಡೆದಿದೆ.

ಪ್ರಯಾಣಿಕರಿಗೆ ಗುಡ್ ನ್ಯೂಸ್, ಮಂಗಳೂರು-ಗೋವಾ ಸ್ಪೆಷಲ್ ರೈಲು ಟಿಕೆಟ್ ದರ ಕೇವಲ 85 ರೂ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!