
ಕೋಲ್ಕತಾ (ಮೇ.04) ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ತೀವ್ರ ಹಿನ್ನಡೆ ಎದುರಿಸಿದೆ. ಬಿಜೆಪಿ ಇದೇ ಮೊದಲ ಬಾರಿಗೆ ಬಂಗಾಳದಲ್ಲಿ ಕಮಲ ಅರಳಿಸಲು ಸಜ್ಜಾಗಿದೆ. ಬಂಗಾಳ ಗೆಲ್ಲುತ್ತೇವೆ ಎಂದು ಕಳೆದ 10 ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಿದ್ದ ಬಿಜೆಪಿ ಕೊನೆಗೂ ಸರ್ಕಾರ ರಚಿಸುವತ್ತ ಸಾಗಿದೆ. ಪ್ರತಿ ಬಾರಿ ಬಂಗಾಳ ಚುನಾವಣೆ ತೀವ್ರ ಹಿಂಸಾಚಾರದಿಂದ ಕೂಡಿರುತ್ತದೆ. ಆದರೆ ಈ ಬಾರಿ ಬಂಗಾಳದಲ್ಲಿ ಬದಲಾವಣೆ ಗಾಳಿ ಬೀಸಿದೆ. ಇತ್ತ ಬಿಜೆಪಿ ಮುನ್ನಡೆ ಪಡೆಯುತ್ತಿದ್ದಂತೆ ಮಮತಾ ಬ್ಯಾನರ್ಜಿ ಟ್ರೋಲ್ ಆಗಿದ್ದಾರೆ. ಬಿಜೆಬಿ ಬೆಂಬಲಿಗರು ಮೀಮ್ಸ್ ಮೂಲಕ ಮಮತಾ ಬ್ಯಾನರ್ಜಿ ಕಾಲೆಳೆದಿದ್ದಾರೆ.
ಚುನಾವಣಾ ಆಯೋಗದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಬಿಜೆಪಿ 188 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಟಿಎಂಸಿ 92 ಸ್ಥಾನಗಳಲ್ಲಿ ಹಿನ್ನಡೆಯಲ್ಲಿದೆ. ರಾಜ್ಯದಾದ್ಯಂತ ಮತ ಎಣಿಕೆ ಮುಂದುವರಿದಿದೆ. ಅಂತಿಮ ಫಲಿತಾಂಶ ಇನ್ನೂ ಬರದಿದ್ದರೂ, ಕೋಲ್ಕತ್ತಾದಲ್ಲಿರುವ ಬಿಜೆಪಿ ಕಚೇರಿ ಮುಂದೆ ಬೆಂಬಲಿಗರು ಆಗಲೇ ಸಂಭ್ರಮಾಚರಣೆ ಶುರು ಮಾಡಿದ್ದಾರೆ.
ಈ ಹಾಸ್ಯಭರಿತ ಮೀಮ್ಸ್‌ಗಳ ಜೊತೆಗೆ ರಾಜಕೀಯ ಚರ್ಚೆಗಳು ಮತ್ತು ವಾದ-ವಿವಾದಗಳು ಜೋರಾಗಿವೆ. ಕೆಲವರು ಈ ಟ್ರೆಂಡ್‌ಗಳನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಆರಂಭಿಕ ಮುನ್ನಡೆಯನ್ನು ನೋಡಿ ಅತಿಯಾಗಿ ಸಂಭ್ರಮಿಸಬೇಡಿ ಎಂದು ಎಚ್ಚರಿಸುತ್ತಿದ್ದಾರೆ.
ಬದಲಾಗುತ್ತಿರುವ ಟ್ರೆಂಡ್‌ಗಳಿಗೆ ಪ್ರತಿಕ್ರಿಯೆಯಾಗಿ, ನೆಟ್ಟಿಗರು ಎಡಿಟ್ ಮಾಡಿದ GIFಗಳು, ಮೀಮ್ಸ್ ಮತ್ತು ವೈರಲ್ ಪೋಸ್ಟ್‌ಗಳಿಂದ ಟೈಮ್‌ಲೈನ್‌ಗಳನ್ನು ತುಂಬಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿರುವ ಕೆಲವು ಮೀಮ್‌ಗಳನ್ನು ಇಲ್ಲಿ ನೋಡಬಹುದು.
ಮಮತಾ ಬ್ಯಾನರ್ಜಿ ಹಂಬ ಹಂಬ ರಂಬ ರಂಬ ಕಂಬ ಕಂಬ ಭಾಷಣದ ತುಣುಕು ಹಾಕಿ ಮತ್ತೆ ಟ್ರೋಲ್ ಮಾಡುತ್ತಿದ್ದಾರೆ. ಇದೇ ವೇಳೆ ಸದ್ಯಕ್ಕೆ ನೋಡುತ್ತಿರುವ ನಂಬರ್ ಸುಳ್ಳು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಸೂರ್ಯ ಮುಳುಗಲಿ ನೋಡುತ್ತಿರಿ ಎಂದು ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ