ಕೋಲ್ಕತಾ: ಒಂದೆಡೆ ರಾಜಕಾರಣಿಗಳ ಆಸ್ತಿ ಏರುತ್ತಿದ್ದರೆ, 'ದೇಶದ ಅತಿ ಬಡ ಮುಖ್ಯಮಂತ್ರಿ' ಎನ್ನಿಸಿ ಕೊಂಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಆಸ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ 1.35 ಲಕ್ಷ ರು. ಇಳಿಕೆಯಾಗಿದೆ. ವಿಧಾನಸಭೆ ಚುನಾವಣೆಯ ಹಿನ್ನೆಲೆ ಭವಾನಿಪುರದಲ್ಲಿ ಅವರು ಬುಧವಾರ ಸಲ್ಲಿಸಿರುವ ಅಫಿಡವಿಟ್‌ನಿಂದ ಇದು ತಿಳಿದು ಬಂದಿದೆ. ಕಳೆದ ಬಾರಿಯ ಆಫಿಡವಿಟ್‌ನಲ್ಲಿ 16.72 ಲಕ್ಷ ರು. ಇದ್ದ ಸಂಪತ್ತು ಈಗ 15.37 ಲಕ್ಷ ರು.ಗೆ ತಗ್ಗಿದೆ.
ಸದ್ಯ ಮಮತಾ ಬಳಿ 75,700 ರು. ನಗದು ಇದ್ದು, ಬ್ಯಾಂಕ್ ಖಾತೆಯಲ್ಲಿ 12.7 ಲಕ್ಷ ರು. ಇದೆ. ಜತೆಗೆ ಮೂಲದಲ್ಲೇ ಕಡಿತವಾಗುವ ತೆರಿಗೆ (ಟಿಡಿಎಸ್) 40,600 ರು. ಆಗಿದೆ. ತಮ್ಮ ಬಳಿ 1.45 ಲಕ್ಷ ರು. ಮೌಲ್ಯದ ಆಭರಣಗಳಿರುವುದಾಗಿ ಘೋಷಿಸಿಕೊಂಡಿರುವ ಅವರು, ಯಾವುದೇ ಷೇರು, ಬಾಂಡ್, ವಿಮೆಗಳಲ್ಲಿ ಹೂಡಿಕೆ ಮಾಡಿಲ್ಲ. ಅಂತೆಯೇ, ಸ್ವಂತ ವಾಹನವನ್ನೂ ಹೊಂದಿಲ್ಲ. 2024-25ರಲ್ಲಿ ತಮ್ಮ ಒಟ್ಟು ಆದಾಯ 23.21 ಲಕ್ಷ ರು. ಎಂದು ಮಮತಾ ತಿಳಿಸಿದ್ದಾರೆ. ಜತೆಗೆ ಮಮತಾ ಅವರ ಮೇಲೆ ಯಾವುದೇ ಕ್ರಿಮಿನಲ್ ಅಪರಾಧಗಳು ದಾಖಲಾಗಿಲ್ಲ.
ಇದನ್ನೂ ಓದಿ: ಲಿಂಗ ತಾರತಮ್ಯವಲ್ಲ, ಇದು ಶತಮಾನಗಳ ನಂಬಿಕೆ: ಶಬರಿಮಲೆ ಮಹಿಳಾ ಪ್ರವೇಶ ನಿಷೇಧಕ್ಕೆ ಕೇಂದ್ರ ಸರ್ಕಾರದ ಬೆಂಬಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ