ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ಗೆ ಝಡ್‌ ಭದ್ರತೆ!

By Suvarna News  |  First Published Feb 18, 2020, 3:13 PM IST

ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ಗೆ ಝಡ್‌ ಮಾದರಿ ಭದ್ರತೆ!| ಝಡ್‌ ಮಾದರಿ ಭದ್ರತೆ ದೇಶದಲ್ಲೇ ಅತ್ಯುನ್ನತ ಭದ್ರತಾ ಸ್ತರಗಳ ಪೈಕಿ ಒಂದು


ಕೋಲ್ಕತಾ[ಫೆ.18]: ಖ್ಯಾತ ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ಗೆ ಝಡ್‌ ಮಾದರಿ ಭದ್ರತೆ ನೀಡಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

ಪ್ರಶಾಂತ್‌ ಪಶ್ಚಿಮ ಬಂಗಾಳದಲ್ಲಿ ಸಂಚರಿಸುವ ವೇಳೆ ಅವರಿಗೆ ಈ ಭದ್ರತೆ ಒದಗಿಸಲಾಗುವುದು. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈ ಕುರಿತು ನಿರ್ಧಾರ ಕೈಗೊಂಡಿದ್ದಾರೆ. ಝಡ್‌ ಮಾದರಿ ಭದ್ರತೆ ದೇಶದಲ್ಲೇ ಅತ್ಯುನ್ನತ ಭದ್ರತಾ ಸ್ತರಗಳ ಪೈಕಿ ಒಂದಾಗಿದೆ.

Tap to resize

Latest Videos

2014ರ ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿ ಅವರಿಗೆ ರಣತಂತ್ರ ಹೆಣೆದುಕೊಟ್ಟಿದ್ದ ಪ್ರಶಾಂಶ್‌ ಕಿತೋರ್‌ ಬಳಿಕ ಬಿಜೆಪಿ ವಲಯದಿಂದ ದೂರವಾಗಿದ್ದರು. ಕಳೆದ ಲೋಕಸಭಾ ಚುನಾವಣೆ ವೇಳೆ ಮಮತಾ ಬ್ಯಾನರ್ಜಿ ಅವರ ಟಿಎಂಸಿಗೆ ಚುನಾವಣಾ ರಣತಂತ್ರ ರೂಪಿಸಿಕೊಟ್ಟಿದ್ದು, ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲೂ ಮಮತಾ ಪರವಾಗಿ ಕೆಲಸ ಮಾಡುತ್ತಿದ್ದಾರೆ.

click me!