
ಕೋಲ್ಕತ್ತಾ(ಮಾ.10): ಪಂಚರಾಜ್ಯ ಚುನಾವಣೆ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಪಶ್ಚಿಮ ಬಂಗಾಳ ಚುನಾವಣೆ ಭಾರೀ ಸದ್ದು ಮಾಡುತ್ತಿದೆ. ಮೂರನೇ ಬಾರಿ ಅಧಿಕಾರಕ್ಕೇರುತ್ತೇನೆಂದಿರುವ ಮಮತಾ ಬ್ಯಾನರ್ಜಿ, ಜನರ ವಿಶ್ವಾಸ ಗಳಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಅತ್ತ ಬುಧವಾರ ನಡೆದ ಬಿಜೆಪಿ ಸಂಸದೀಯ ನಾಯಕರ ಸಭೆಯಲ್ಲಿ ತಾವೇ ಗೆಲ್ಲುವುದಾಗಿ ಮೋದಿ ವಿಶ್ವಾಸ ವ್ಯಕ್ತೊಪಡಿಸಿದ್ದಾರೆ. ಇನ್ನು ನಂದಿಗ್ರಾಮದಿಂದ ಕಣಕ್ಕಿಳಿದಿರುವ ಮಮತಾ ಬ್ಯಾನರ್ಜಿ ಇಂದು ಬುಧವಾರ ಮಧ್ಯಾಹ್ನ ಎರಡು ಗಂಟೆಗೆ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಇಂಟರೆಸ್ಟಿಂಗ್ ಘಟನೆಯೊಂದು ನಡೆದಿದೆ.
ಈ ಚುನಾವಣೆಯಲ್ಲಿ ಹಿಂದುತ್ವ ವಿಚಾರ ಬಹುದೊಡ್ಡ ವಿಚಾರವಾಗಿ ಮಾರ್ಪಾಡಾಗಿದೆ. ಬಿಜೆಪಿಯ ಈ ದಾಳಕ್ಕೆ ದೀದೀ ಕೂಡಾ ನಡುಗಿದ್ದಾರೆ. ಹೀಗಾಗೇ ಅನ್ಸುತ್ತೆ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಅವರು ಇಲ್ಲಿನ ಶಿವ ಮಂದಿರಕ್ಕೆ ಭೇಟಿ ನೀಡಿ ತೆರಳಿದ್ದಾರೆ. ಇನ್ನು ಮಂಗಳವಾರದಂದು ಅವರು ತಮ್ಮ ನಿವಾಸದಿಂದ ತೆರಳುವ ಮೊದಲೂ ಚಂಡೀ ಪಾಠ ಪಠಿಸಿದ್ದರೆಂಬುವುದು ಉಲ್ಲೇಖನೀಯ.
ಇನ್ನು ಕಳೆದ ತಿಂಗಳ 11 ರಂದು ಕೂಚ್‌ಬಿಹಾರ್‌ನ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ಕೂಡಾ ಜೈ ಶ್ರೀರಾಮ್ ಎನ್ನಲಾರಂಭಿಸುತ್ತಾರೆ ಎಂದಿದ್ದರು. ಇದಕ್ಕನುಗುಣವಾಗಿ ಮಂಗಳವಾರ ಮಮತಾ ಬ್ಯಾನರ್ಜಿ ಮನೆಯಿಂದ ಹೊರಡುವುದಕ್ಕೂ ಮುನ್ನ ಬರೋಬ್ಬರಿ ಮೂರು ನಿಮಿಷ ಸಾರ್ವಜನಿಕವಾಗೇ ಚಂಡೀ ಪಾಠ ಪಠಿಸಿದ್ದರು. ಇನ್ನು ಬುಧವಾರ ನಾಮಪತ್ರ ಸಲ್ಲಿಸಲು ರೋಡ್ ಶೋ ಮೂಲಕ ತೆರಳುವುದಕ್ಕೂ ಮುನ್ನ ಶಿವ ಮಂದಿರಕ್ಕೆ ಭೇಟಿ ನೀಡಿ, ಶಿವನಿಗೆ ಜಲಾಭಿಷೇಕ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ