ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ ಮತ್ತು ಬಿಎಸ್‌ಎಫ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಂಗಾಳದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಕೇಂದ್ರ ಉತ್ತೇಜಿಸುತ್ತಿದೆ ಮತ್ತು ಬಾಂಗ್ಲಾದೇಶದ ಭಯೋತ್ಪಾದಕರನ್ನು ಬಂಗಾಳಕ್ಕೆ ಪ್ರವೇಶಿಸಲು ಬಿಎಸ್‌ಎಫ್ ಅನುಮತಿ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ನವದೆಹಲಿ (ಜ.2): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಸಿಎಂ ಮಮತಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವಿರುದ್ಧವೂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದು, ಬಾಂಗ್ಲಾದೇಶದ ಭಯೋತ್ಪಾದಕರನ್ನು ಬಂಗಾಳಕ್ಕೆ ಪ್ರವೇಶಿಸಲು ಬಿಎಸ್‌ಎಫ್ ಅನುಮತಿ ನೀಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.ಬಂಗಾಳದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಕೇಂದ್ರವು ಉತ್ತೇಜಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಬಂಗಾಳದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಮತ್ತು ಬಿಎಸ್‌ಎಫ್‌ನ ಮೇಲೆ ಮಮತಾ ನೇರ ಆರೋಪ ಮಾಡಿದ್ದಾರೆ. ಈ ಚಟುವಟಿಕೆಗಳಿಗೆ ಕೇಂದ್ರದ ನೀಲನಕ್ಷೆಯೂ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. ಇಂದು (ಜನವರಿ 2) ನಡೆದ ಆಡಳಿತಾತ್ಮಕ ಸಭೆಯಲ್ಲಿ ಮಮತಾ ಬ್ಯಾನರ್ಜಿ ಈ ಎಲ್ಲಾ ಆರೋಪ ಮಾಡಿದ್ದಾರೆ.
ಗಡಿ ಭದ್ರತೆ ನಮ್ಮ ಕೈಯಲ್ಲಿಲ್ಲ: ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, 'ಬಿಎಸ್‌ಎಫ್ ವಿವಿಧ ಪ್ರದೇಶಗಳಿಂದ ಬಂಗಾಳದೊಳಗೆ ಭಯೋತ್ಪಾದಕರು ನುಸುಳುಲು ಅನುಮತಿ ನೀಡಿದೆ. ಬಿಎಸ್‌ಎಫ್ ಕೂಡ ಮಹಿಳೆಯರಿಗೆ ಚಿತ್ರಹಿಂಸೆ ನೀಡುತ್ತಿದೆ. ಗಡಿ ನಮ್ಮ ಕೈಯಲ್ಲಿಲ್ಲದ ಕಾರಣ ಬಿಎಸ್‌ಎಫ್ ಯಾವ ಸ್ಥಳಗಳಿಂದ ಜನರನ್ನು ಪ್ರವೇಶಿಸಲು ಅವಕಾಶ ನೀಡಿದೆ ಎಂಬುದರ ಕುರಿತು ತನಿಖೆ ನಡೆಸುವಂತೆ ನಾನು ಡಿಜಿಪಿಗೆ ಸೂಚಿಸಿದ್ದೇನೆ. ಟಿಎಂಸಿ ಒಳನುಸುಳುವಿಕೆಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಯಾರಾದರೂ ಆರೋಪಿಸಿದರೆ, ಗಡಿ ಭದ್ರತೆ ಬಿಎಸ್‌ಎಫ್ ಅಡಿಯಲ್ಲಿದೆ ಮತ್ತು ಬಿಎಸ್‌ಎಫ್ ಇದೆಲ್ಲವನ್ನೂ ಮಾಡುತ್ತಿದೆ ಎಂದು ನಾನು ಹೇಳುತ್ತೇನೆ, ಆದ್ದರಿಂದ ನಮ್ಮನ್ನು ದೂರಬೇಡಿ ಮತ್ತು ಒಳನುಸುಳುವಿಕೆಗೆ ಟಿಎಂಸಿಯನ್ನು ದೂಷಿಸಬೇಡಿ ಎಂದು ತಿಳಿಸಿದ್ದಾರೆ.
ಭಾರತದ ಅತ್ಯಂತ ಬಡ ಸಿಎಂ ಮಮತಾ ಬ್ಯಾನರ್ಜಿ? ಹಾಗಿದ್ರೆ ಶ್ರೀಮಂತ ಸಿಎಂ ಯಾರು?
ಟಿಎಂಸಿ ಬಿಎಸ್‌ಎಫ್ ಅನ್ನು ರಕ್ಷಿಸುತ್ತಿಲ್ಲ. ಆದರೆ ಪೊಲೀಸರ ಬಳಿ ಎಲ್ಲ ಮಾಹಿತಿ ಇದೆ. ಕೇಂದ್ರದಲ್ಲಿ ಎಲ್ಲ ಮಾಹಿತಿ ಇದೆ. ರಾಜೀವ್ ಕುಮಾರ್ ಅವರು ನನಗೆ ಕೆಲವು ಮಾಹಿತಿ ನೀಡಿದ್ದು, ಸ್ಥಳೀಯ ಮಾಹಿತಿಯೂ ಸಿಕ್ಕಿದೆ. ಈ ಬಗ್ಗೆ ಪತ್ರ ಬರೆಯುತ್ತೇನೆ. ನಾನು ಇಲ್ಲಿ ಮತ್ತು ಬಾಂಗ್ಲಾದೇಶದಲ್ಲಿ ಶಾಂತಿಯನ್ನು ಬಯಸುತ್ತೇನೆ. ನಮ್ಮ ನಡುವೆ ಯಾವುದೇ ದ್ವೇಷವಿಲ್ಲ. ನನ್ನ ರಾಜ್ಯದಲ್ಲಿ ಯಾರಾದರೂ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿರುವುದನ್ನು ನೋಡಿದರೆ ನಾನು ಪ್ರತಿಭಟಿಸುತ್ತೇನೆ' ಎಂದು ಹೇಳಿದ್ದಾರೆ.
ಒಂದೇ ಒಂದು ‘ಮಹಾ’ ಸೋಲಿಗೆ ಭದ್ರಕೂಟ ಛಿದ್ರಕೂಟ! ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಮಿತ್ರರ ಬಂಡಾಯ!
| West Bengal Chief Minister Mamata Banerjee said, "... We want peace to prevail there as well as here... This (infiltration) is a very internal work of BSF, and the central government also has a blueprint for this, if there was no blueprint of the central government then… pic.twitter.com/VmN1JGHxvH
— ANI (@ANI)