ಮಮತಾ ಬ್ಯಾನರ್ಜಿ ಆಪ್ತ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ, ಆಕ್ರೋಶದಿಂದ ಮೊಟ್ಟೆ ಎಸೆದ ಜನ

Published : May 30, 2026, 06:23 PM IST
Abhishek Banerjee attacked during a visit to Sonarpur with eggs and stones thrown at his convoy

ಸಾರಾಂಶ

ಮಮತಾ ಬ್ಯಾನರ್ಜಿ ಆಪ್ತ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆಯಾಗಿದೆ. ಹಲವರು ಮೊಟ್ಟೆ, ಕಲ್ಲು ಎಸೆತಿದ್ದಾರೆ. ಕೆಲವರು ಕಾಲಿನಿಂದ ಒದ್ದೆರೆ, ಮತ್ತೆ ಕೆಲವರು ಕಪಾಳಮೋಕ್ಷ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಕೋಲ್ಕತಾ (ಮೇ.30) ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತ ಆರಂಭಗೊಂಡಿದೆ. ಆರಂಭದಲ್ಲೇ ಕ್ರಾಂತಿಕಾರಿ ನಿರ್ಧಾರಗಳು ದೇಶದ ಗಮನಸೆಳೆದಿದೆ. ಇತ್ತ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ, ಮಾಜಿ ಸಚಿವರಿಗೆ ಹಳೇ ಹಗರಣಗಳ ತನಿಖೆ ಬಿಸಿ ಎದುರಾಗಿದೆ. ಇದರ ನಡುವೆ ಟಿಎಂಸಿ ಸಂಸದ, ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಮೇಲೆ ತೀವ್ರ ಹಲ್ಲೆಯಾಗಿದೆ. ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರ ಪೀಡಿತ ಕುಟುಂಬಗಳನ್ನು ಭೇಟಿಯಾಗಲು ತೆರಳಿದ್ದ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ಮಾಡಲಾಗಿದೆ.

ಕಲ್ಲು, ಶೂ, ಮೊಟ್ಟೆ ಎಸೆದ ಪ್ರತಿಭಟನಾಕಾರರು

ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಬೆಂಗಾವಲು ವಾಹನದ ಮೇಲೆ ಪ್ರತಿಭಟನಾಕಾರರು ಮುಗಿಬಿದ್ದಿದ್ದಾರೆ. ಸ್ಥಳೀಯ ಮಹಿಳೆಯರು ಅವರನ್ನು 'ಕಳ್ಳ' ಎಂದು ಕೂಗಿ ತಳ್ಳಾಡಿದ್ದಾರೆ. ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿಗಳು ಮತ್ತು ಆಕ್ರೋಶಿತ ಪ್ರತಿಭಟನಾಕಾರರು ಅವರ ಮೇಲೆ ಮುಗಿಬಿದ್ದಿದ್ದಾರೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಅನಾಮಧೇಯ ವ್ಯಕ್ತಿಗಳ ಗುಂಪೊಂದು ಟಿಎಂಸಿ ಸಂಸದರ ಕಡೆಗೆ ಕಲ್ಲುಗಳು, ಶೂಗಳು ಮತ್ತು ಮೊಟ್ಟೆಗಳನ್ನು ಎಸೆಯಲು ಪ್ರಾರಂಭಿಸಿತು. ಅಷ್ಟೇ ಅಲ್ಲದೆ, ಕೆಲವರು ಅವರ ಮೇಲೆ ಕೈ ಮಾಡಿ ಹೊಡೆಯಲು ಮತ್ತು ಒದೆಯಲು ಸಹ ಯತ್ನಿಸಿದರು ಎಂದು ತಿಳಿದುಬಂದಿದೆ.

ನೆರೆದಿದ್ದ ಸ್ಥಳೀಯ ಮಹಿಳೆಯರ ಗುಂಪೊಂದು ಅಭಿಷೇಕ್ ಬ್ಯಾನರ್ಜಿ ಅವರನ್ನು ನೇರವಾಗಿ ಮುತ್ತಿಗೆ ಹಾಕಿ, ಅವರ ಮುಖಕ್ಕೆ ತಗುಲುವಂತೆ ತಳ್ಳಾಟ ನಡೆಸಿ, "ಕಳ್ಳ, ಕಳ್ಳ" (Chor Chor) ಎಂದು ಜೋರಾಗಿ ಘೋಷಣೆಗಳನ್ನು ಕೂಗಿತು. ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ನಡೆದ ಸರಣಿ ರಾಜಕೀಯ ಹಿಂಸಾಚಾರಗಳಿಗೆ ಕಠಿಣ ಉತ್ತರವನ್ನು ನೀಡಬೇಕು ಎಂದು ಮಹಿಳೆಯರು ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡರು. ಹಿಂಸಾಚಾರದಲ್ಲಿ ಮೃತಪಟ್ಟಿದ್ದ ಟಿಎಂಸಿ ಕಾರ್ಯಕರ್ತರೊಬ್ಬರ ಕುಟುಂಬಕ್ಕೆ ಸಾಂತ್ವನ ಹೇಳಲು ಸಂಸದರು ಅಲ್ಲಿಗೆ ಬಂದಿದ್ದಾಗ ಈ ಘಟನೆ ಭುಗಿಲೆದ್ದಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಗಳು ತಕ್ಷಣವೇ ಸಕ್ರಿಯರಾಗಿ, ಅಭಿಷೇಕ್ ಬ್ಯಾನರ್ಜಿ ಅವರಿಗೆ ಹೆಲ್ಮೆಟ್ ಧರಿಸಿ, ಮಾನವ ಸರಪಳಿ ನಿರ್ಮಿಸಿ ಆಕ್ರೋಶಿತ ಜನಸಂದಣಿಯ ನಡುವಿನಿಂದ ಸುರಕ್ಷಿತವಾಗಿ ವಾಹನಕ್ಕೆ ಕರೆದೊಯ್ದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹುಬ್ಬಳ್ಳಿ, ದಾವಣಗೆರೆ ಸೇರಿ 10 ದಿನ ಈ ಎಲ್ಲಾ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ: ಡಿಟೇಲ್ಸ್​ ಇಲ್ಲಿದೆ
ಜೀವದ ಹಂಗು ತೊರೆದು ಬಾಲ್ಕನಿಯಿಂದ ಪಕ್ಕದ್ಮನೆ ಬೆಡ್​ರೂಮ್​ ವಿಡಿಯೋ ಮಾಡಿದ ಅಜ್ಜ: ಅಲ್ಲಿ ಕಂಡದ್ದೇನು