ಮಕ್ಕಳನ್ನು ಬೆನ್ನ ಮೇಲೆ ಕೂರಿಸಿಕೊಂಡು ಮದುವೆಗೆ ಬಂದ ಕರಡಿ... ವೈರಲ್‌ ವಿಡಿಯೋ

Suvarna News   | Asianet News
Published : Feb 18, 2022, 06:33 PM IST
ಮಕ್ಕಳನ್ನು ಬೆನ್ನ ಮೇಲೆ ಕೂರಿಸಿಕೊಂಡು ಮದುವೆಗೆ ಬಂದ ಕರಡಿ... ವೈರಲ್‌ ವಿಡಿಯೋ

ಸಾರಾಂಶ

ಮದುವೆ ಮನೆಗೆ ಬಂದ ಕರಡಿಗಳು ಮಕ್ಕಳನ್ನು ಬೆನ್ನ ಮೇಲೆ ಕೂರಿಸಿಕೊಂಡು ಬಂದ ತಾಯಿ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್  

ಛತ್ತೀಸ್‌ಗಢ(ಫೆ.18): ಇತ್ತೀಚೆಗೆ ಕರಡಿಗಳು ಸೇರಿದಂತೆ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬರುತ್ತಿರುವುದು ಸಾಮಾನ್ಯವಾಗಿದೆ. ತಾಯಿ ಕರಡಿಯೊಂದು ತನ್ನೆರಡು ಮರಿಗಳನ್ನು ಬೆನ್ನ ಮೇಲೆ ಕೂರಿಸಿಕೊಂಡು ಮದುವೆ ರಿಸೆಪ್ಷನ್‌ ನಡೆಯಲು ವ್ಯವಸ್ಥೆ ಮಾಡಿದ್ದ ಸ್ಟೇಜ್‌ಗೆ ಬಂದು ಸುತ್ತಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಆಹಾರ ಮತ್ತು ಆಶ್ರಯಕ್ಕಾಗಿ ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ಅಲೆದಾಡುವ ವೀಡಿಯೊಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಾಮಾನ್ಯವಾಗಿದೆ. ಛತ್ತೀಸ್‌ಗಢದ (Chhattisgar) ಕಂಕೇರ್ (Kanker) ಜಿಲ್ಲೆಯಲ್ಲಿ ನಡೆದ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಮೂವರು ಆಹ್ವಾನವಿಲ್ಲದವ ವಿಶೇಷ ಅತಿಥಿಗಳು ಆಗಮಿಸಿದ್ದರು. ಮರಿಗಳನ್ನು ಬೆನ್ನ ಮೇಲೆ ಕೂರಿಸಿಕೊಂಡ ತಾಯಿ ಕರಡಿ ಪಾರ್ಟಿ ನಡೆಯುವ ಸ್ಥಳದಲ್ಲಿ ಅಡ್ಡಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಧು ಮತ್ತು ವರ ಕುಳಿತುಕೊಳ್ಳಲು ವೆದಿಕೆಯಲ್ಲಿ ಹಾಕಲಾಗಿದ್ದ ಕುರ್ಚಿಗಳ ಕಡೆ ಕರಡಿ ಹೋಗುವುದನ್ನು ಕಾಣಬಹುದು. ವೇದಿಕೆಗೆ ಏರಿದ ತಾಯಿ ಕರಡಿ ಸುತ್ತಲೂ ಒಮ್ಮೆ ನೋಡಿ ವೇದಿಕೆಯಲ್ಲಿ ಮೂಸಿ ಮೂಸಿ ನೋಡುತ್ತಾಳೆ.  ಅದೃಷ್ಟವಶಾತ್, ಮದುವೆಯ ಆರತಕ್ಷತೆ ಮುಗಿದಿದ್ದರಿಂದ ಮತ್ತು ಕರಡಿಗಳು ಒಳಗೆ ಹೋದಾಗ ಅತಿಥಿಗಳು ಇರಲಿಲ್ಲವಾದ್ದರಿಂದ ಯಾರಿಗೂ ಹಾನಿಯಾಗಿಲ್ಲ.

ಪ್ರಾಣದ ಹಂಗು ತೊರೆದು ಕರಡಿ ಬಾಯಿಯಿಂದ ಶ್ವಾನವನ್ನು ರಕ್ಷಿಸಿದ ವ್ಯಕ್ತಿ

ಸ್ಥಳದಲ್ಲಿದ್ದ ಸಿಬ್ಬಂದಿಯೊಬ್ಬರು ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ವಿಡಿಯೋದ ಹಿನ್ನೆಲೆಯಲ್ಲಿ ವಿಡಿಯೋ ಮಾಡುತ್ತಿರುವವರು ಹಿಂದಿ ಭಾಷೆಯಲ್ಲಿ  ತನ್ನ ಸಹೋದ್ಯೋಗಿಯೊಂದಿಗೆ 'ಅಟ್ಯಾಕ್ ತೋ ನಹೀ ಕರೇಗಾ? (ಕರಡಿ ನಮ್ಮ ಮೇಲೆ ದಾಳಿ ಮಾಡುವುದಿಲ್ಲ ) ಎಂದು ಹೇಳುತ್ತಿರುವು ಕೇಳಿಸುತ್ತಿದೆ. ಸ್ವಲ್ಪ ಸಮಯದ ನಂತರ ಕರಡಿಗಳು ಯಾವುದೇ ಗದ್ದಲವನ್ನು ಮಾಡದೇ ಸ್ಥಳದಿಂದ ನಿರ್ಗಮಿಸಿದವು.

ಅಯ್ಯೋ ಓಡಿ ಓಡಿ... ಬಂತು ಕರಡಿ... ವಿಡಿಯೋ ನೋಡಿ

ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ (Parveen Kaswan) ಅವರು ಕೂಡ ಈ ವೀಡಿಯೊವನ್ನು ಅವರು ಪೋಸ್ಟ್‌ ಮಾಡಿದ್ದು, ಈ ಕರಡಿಗಳು ಮದುವೆಗಾಗಿ ಮಾಡಿದ ವ್ಯವಸ್ಥೆಯಿಂದ ಖುಷಿಯಾಗಿಲ್ಲ ಎಂದು ಬರೆದಿದ್ದಾರೆ. ವೀಡಿಯೊಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದು, ಅನೇಕರು ಖುಷಿಪಟ್ಟಿದ್ದಾರೆ. ಇತರರು ಮಾನವ ಪ್ರಾಣಿ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಹವಾಮಾನ ಬದಲಾವಣೆ ಹಾಗೂ ತಾಪಮಾನದ ಹೆಚ್ಚಳದಿಂದಾಗಿ ಅಲಾಸ್ಕಾದಿಂದ ರಷ್ಯಾಕ್ಕೆ ಹಿಮಕರಡಿಗಳು ಗಣನೀಯ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿದೆ. ಪರಿಣಾಮ 2001 ರಿಂದ 2010 ರ ನಡುವೆ, ಅಲಾಸ್ಕಾದ ಹಿಮಕರಡಿಗಳ ಸಂಖ್ಯೆಯಲ್ಲಿ 40 ಪ್ರತಿಶತದಷ್ಟು ಇಳಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎನ್ನುವುದನ್ನು ತೋರಿಸುವ ಹಲವು ಚಿಹ್ನೆಗಳಲ್ಲಿ ಪ್ರಾಣಿಗಳ ಜನಸಂಖ್ಯೆ ಮತ್ತು ವಾಸಸ್ಥಳದಲ್ಲಿನ ಬದಲಾವಣೆ ಕೂಡ ಒಂದಾಗಿದೆ. ಅಲಾಸ್ಕಾದ ಹಿಮಕರಡಿಗಳ ಜನಸಂಖ್ಯೆಯು ವೇಗವಾಗಿ ಕ್ಷೀಣಿಸುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ. 

2001 ರಿಂದ 2010 ರ ನಡುವೆ, ಅಲಾಸ್ಕಾ(  Alaska) ದ ಹಿಮಕರಡಿ ಜನಸಂಖ್ಯೆಯಲ್ಲಿ 40 ಪ್ರತಿಶತದಷ್ಟು ಇಳಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. ಅಲಾಸ್ಕಾದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಅಲಾಸ್ಕಾದಿಂದ ರಷ್ಯಾ (Russia) ಕ್ಕೆ ಹಿಮಕರಡಿ (polar bear) ಗಳು ವಲಸೆ ಹೋಗುತ್ತಿರುವುದೇ ಇಲ್ಲಿ ಹಿಮ ಕರಡಿಗಳ ಸಂಖ್ಯೆ ಇಳಿಮುಖ ಆಗಲು ಕಾರಣವಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ