ಅಧಿಕಾರಿಗಳ ನಿರ್ಲಕ್ಷ್ಯಮಹಿಳಾ ಮೀಸಲು ಕ್ಷೇತ್ರದಲ್ಲಿ ಪುರುಷ ಅಭ್ಯರ್ಥಿಗೆ ವಿಜಯ!

By Kannadaprabha News  |  First Published Feb 10, 2020, 10:13 AM IST

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಹಿಳಾ ಮೀಸಲು ಕ್ಷೇತ್ರದಲ್ಲಿ ಪುರುಷ ಅಭ್ಯರ್ಥಿಗೆ ವಿಜಯ!| 2019ರ ಡಿ.30ರಂದು ಕೃಷ್ಣನಾರಾಯಣಪುರಂ ಗ್ರಾಮ ಪಂಚಾಯತ್‌ಗೆ ನಡೆದಿದ್ದ ಚುನಾವಣೆ 


ಕರೂರ್[ಫೆಲ.10]: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಹಿಳೆಯರಿಗೆ ಮೀಸಲಿದ್ದ ಗ್ರಾಮ ಪಂಚಾಯತ್‌ ಕ್ಷೇತ್ರದಲ್ಲಿ ಪುರುಷ ಅಭ್ಯರ್ಥಿ ಗೆದ್ದ ಅಚ್ಚರಿಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

2019ರ ಡಿ.30ರಂದು ಕೃಷ್ಣನಾರಾಯಣಪುರಂ ಗ್ರಾಮ ಪಂಚಾಯತ್‌ಗೆ ಚುನಾವಣೆ ನಡೆದಿತ್ತು. ಅಲ್ಲಿಂದ ಎ.ಕೃಷ್ಣಮೂರ್ತಿ ಎಂಬುವವರು ವಿಜಯಶಾಲಿಯಾಗಿದ್ದರು. ಬಳಿಕ ಜ.11ರಂದು ನಡೆದ ಚುನಾವಣೆಯಲ್ಲಿ ಕೃಷ್ಣಮೂರ್ತಿ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಆದರೆ ಈ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ವೇಳೆ ಕೃಷ್ಣನಾರಾಯಣಪುರಂ ಕ್ಷೇತ್ರ ಮಹಿಳೆಯರಿಗೆ ಮೀಸಲಿಟ್ಟಿದ್ದು ಎಂಬುದು ಅಧಿಕಾರಿಗಳ ಅರಿವಿಗೆ ಬಂದಿದೆ.

Tap to resize

Latest Videos

ಎಡವಟ್ಟು ಬೆಳಕಿಗೆ ಬಂದ ಮೇಲೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಹೇಳಿದೆ.

click me!