
ನವದೆಹಲಿ (ಫೆ. 01) ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು (Ministry of Information and Broadcasting) ಭದ್ರತಾ ಕಾರಣಗಳಿಗಾಗಿ ಮಲಯಾಳಂ ಜನಪ್ರಿಯ ಸುದ್ದಿ ವಾಹಿನಿ ‘ಮೀಡಿಯಾ ಒನ್ ಟೀವಿ’ (media one)ಪ್ರಸಾರವನ್ನು ಸೋಮವಾರ ಮತ್ತೊಮ್ಮೆ ಸ್ಥಗಿತಗೊಳಿಸಲು ಆದೇಶಿಸಿದೆ. ಆದರೆ ಕೇರಳ (Kerala High Court) ಹೈಕೋರ್ಟ್ ಈ ಆದೇಶದ ಅನುಷ್ಠಾನಕ್ಕೆ 2 ದಿನಗಳ ಕಾಲ ತಡೆ ಘೋಷಿಸಿದೆ.
ಚಾನೆಲ್ ಸಂಪಾದಕ ಪ್ರಮೋದ್ ರಾಮನ್ ‘ಸಚಿವಾಲಯ ಭದ್ರತಾ ಕಾರಣಗಳಿಗಾಗಿ ಚಾನೆಲ್ ಪ್ರಸಾರ ಸ್ಥಗಿತಗೊಳಿಸಲು ತಿಳಿಸಿದೆ. ಆದರೆ ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ’ ಎಂದಿದ್ದಾರೆ. ಅಲ್ಲದೇ ಚಾನೆಲ್ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗದ ಕಾರಣ ಈ ಆದೇಶವನ್ನು ಹಿಂಪಡೆಯಬೇಕೆಂದು ಕೂಡಲೇ ಹೈಕೋರ್ಟಿಗೆ ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಸ್ಪಂದಿಸಿ ಬುಧವಾರದವರೆಗೆ ತಡೆ ಘೋಷಿಸಿದೆ. ಕೇಂದ್ರ ಸರ್ಕಾರ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.
Report on Pegasus : ನ್ಯೂಯಾರ್ಕ್ ಟೈಮ್ಸ್ ಅಲ್ಲ ಅದು, ಸುಪಾರಿ ಮೀಡಿಯಾ!
ಜಮಾತ್-ಎ-ಇಸ್ಲಾಮಿ ಒಡೆತನದ ‘ಮೀಡಿಯಾ ಒನ್ ಟೀವಿ’ ಪ್ರಸಾರ ಮಾಡಿದ ದೆಹಲಿ ಗಲಭೆಯ ವರದಿಯು ಪಕ್ಷಪಾತಿಯಾಗಿದ್ದು, ಕೇವಲ ಸಮಾಜದ ಒಂದು ಸಮುದಾಯದ ಪರವಾಗಿತ್ತು ಎಂಬ ಕಾರಣಕ್ಕಾಗಿ ಸಚಿವಾಲಯ ಚಾನೆಲ್ ಪ್ರಸಾರವನ್ನು ಕಳೆದ ಮಾಚ್‌ರ್‍ನಲ್ಲಿ 48 ಗಂಟೆಗಳ ಕಾಲ ಸ್ಥಗಿತಗೊಳಿಸಿತ್ತು.
ಬೆಂಗಳೂರು ಹಿಂದಿಕ್ಕಿದ ದೆಹಲಿ ಈಗ ಸ್ಟಾರ್ಟಪ್‌ಗಳ ರಾಜಧಾನಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದೆರಡು ವರ್ಷಗಳಿಂದ ಅತಿಹೆಚ್ಚು ಸ್ಟಾರ್ಟಪ್‌ಗಳು ಆರಂಭವಾಗಿವೆ. ತನ್ಮೂಲಕ ಸಿಲಿಕಾನ್ ಸಿಟಿ ಬೆಂಗಳೂರು ಹೊಂದಿದ್ದ ಸ್ಟಾರ್ಟಪ್‌ಗಳ ರಾಜಧಾನಿ ಪಟ್ಟಇದೀಗ ದೆಹಲಿ ಒಲಿದಿದೆ ಎಂದು ಬಜೆಟ್ ಪೂರ್ವದಲ್ಲಿ ಮಂಡನೆಯಾದ ಆರ್ಥಿಕ ಸಮೀಕ್ಷೆ ಹೇಳಿದೆ.
2019 ಏಪ್ರಿಲ್‌ನಿಂದ 2021ರ ಡಿಸೆಂಬರ್‌ವರೆಗೆ ದೆಹಲಿಯಲ್ಲಿ 5000ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಆರಂಭವಾಗಿದ್ದರೆ, ಬೆಂಗಳೂರಿನಲ್ಲಿ 4514 ಹೊಸ ಸ್ಟಾರ್ಟಪ್‌ಗಳು ಆರಂಭವಾಗಿವೆ. ಇನ್ನು ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿಹೆಚ್ಚು 11,308 ಸ್ಟಾರ್ಟಪ್‌ಗಳಿವೆ. ಜೊಮ್ಯಾಟೋ, ಪಾಲಿಸಿಬಜಾರ್, ಡೆಲ್ಲಿವರಿ ಹಾಗೂ ಒಯೋ ಸೇರಿದಂತೆ ಇನ್ನಿತರ ಸ್ಟಾರ್ಟಪ್‌ಗಳು ಸ್ಟಾಕ್ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವ ಟ್ರೆಂಡ್ ಸಹ ಹೆಚ್ಚಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ
ಕೇಂದ್ರ ಸರ್ಕಾರಿ ನೌಕರರಿಗೆ ಫೆ. 15 ವರೆಗೆ ವರ್ಕ್ ಫ್ರಮ್ ಹೋಂ ವಿಸ್ತರಣೆ: ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ವರ್ಕ್ ಫ್ರಮ್ ಹೋಂನ್ನು ಫೆ. 15 ರವರೆಗೆ ವಿಸ್ತರಿಸಲಾಗಿದೆ. ಕಾರ್ಯದರ್ಶಿಗಿಂತ ಕೆಳಗಿನ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕಚೇರಿಯಲ್ಲಿ ಹಾಜರಾಗುವ ಪ್ರಮಾಣವನ್ನು ಶೇ. 50 ಕ್ಕೆ ಮಿತಿಗೊಳಿಸಲಾಗಿದ್ದು, ಉಳಿದ ಶೇ. 50 ಸಿಬ್ಬಂದಿ ಮನೆಯಿಂದಲೇ ಕಾರ್ಯ ನಿರ್ವಹಿಸಬಹುದು. ಅಂಗವಿಕಲರು, ಗರ್ಭಿಣಿಯರು ಕಚೇರಿಗೆ ಹಾಜರಾಗುವ ಅಗತ್ಯವಿಲ್ಲ. ಬದಲಾಗಿ ಮನೆಯಿಂದಲೇ ಕೆಲಸ ಮಾಡಬೇಕು. ಜನಸಂದಣಿಯನ್ನು ತಪ್ಪಿಸಲು ಕಚೇರಿಯಲ್ಲಿ ಬೆಳಿಗ್ಗೆ 9 ರಿಂದ ಸಾಯಂಕಾಲ 5:30 ಗಂಟೆ ಅಥವಾ ಬೆಳಿಗ್ಗೆ 10 ರಿಂದ ಸಾಯಂಕಾಲ 6:30 ಸಮಯವನ್ನು ಅಳವಡಿಸಿಕೊಳ್ಳಬಹುದು. ಕಾರ್ಯದರ್ಶಿ ಹಾಗೂ ಮೇಲಿನ ಹುದ್ದೆಯವರು ನಿಯಮಿತವಾಗಿ ಕಚೇರಿಗೆ ಹಾಜರಾಗಬೇಕೆಂದು ಸರ್ಕಾರ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ