4ದಿನಕ್ಕೆ ಕೆಲಸ ಕಡಿತ ಸೇರಿದಂತೆ ಜುಲೈ 1 ರಿಂದ ದೇಶದಲ್ಲಿ ಹಲವು ಮಹತ್ವದ ಬದಲಾವಣೆ

Published : Jul 01, 2022, 10:58 AM ISTUpdated : Jul 01, 2022, 11:02 AM IST
 4ದಿನಕ್ಕೆ  ಕೆಲಸ ಕಡಿತ ಸೇರಿದಂತೆ ಜುಲೈ 1 ರಿಂದ ದೇಶದಲ್ಲಿ ಹಲವು ಮಹತ್ವದ ಬದಲಾವಣೆ

ಸಾರಾಂಶ

ಇಂದಿನಿಂದ ದೇಶದ ಹಲವು ವಿಚಾರಗಳಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಕೇಂದ್ರ ಸರ್ಕಾರದ ಹಲವು ನೀತಿಗಳು ಬದಲಾವಣೆಯಾಗಲಿವೆ. ಯಾವುದೆಲ್ಲ ಎಂಬ ವಿವರ ಇಲ್ಲಿದೆ

ನವದೆಹಲಿ (ಜು.1): ತೆರಿಗೆ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳು, ಷೇರು ಮಾರುಕಟ್ಟೆಗೆ ಸಂಬಂಧಿಸಿದ ನೀತಿ ಹಾಗೂ ಕಾರ್ಮಿಕ ಸುಧಾರಣೆಗಳೂ ಸೇರಿದಂತೆ ಜು.1ರಿಂದ ದೇಶದಲ್ಲಿ ಕೇಂದ್ರ ಸರ್ಕಾರದ ಹಲವು ನೀತಿಗಳು ಬದಲಾವಣೆಯಾಗಲಿವೆ.

ಕ್ರಿಪ್ಟೋಕರೆನ್ಸಿಗೆ 1% ಟಿಡಿಎಸ್‌: ಜು.1ರಿಂದ ಕ್ರಿಪ್ಟೋಕರೆನ್ಸಿಗೆ ಪಾವತಿಸುವ 10,000 ರು.ಗಿಂತ ಮೇಲ್ಪಟ್ಟಹಣಕ್ಕೆ ಶೇ.1ರಷ್ಟುಟಿಡಿಎಸ್‌ ಕಡಿತ ಮಾಡಲಾಗುತ್ತದೆ. ಈಗಾಗಲೇ ಇರುವ ಶೇ.30ರಷ್ಟುತೆರಿಗೆಯ ಹೊರತಾಗಿ ಶೇ.1ರಷ್ಟುಟಿಡಿಎಸ್‌ ವಿಧಿಸಲಾಗುತ್ತದೆ.

ಪಾನ್‌-ಆಧಾರ್‌ ಜೋಡಣೆಗೆ 1000 ರು. : ಪಾನ್‌ ಸಂಖ್ಯೆ ಹಾಗೂ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಲು ಮಾ.31, 2023ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಆದರೆ, ಜು.1ರ ನಂತರ ಜೋಡಣೆ ಮಾಡುವವರಿಗೆ ಈ ಹಿಂದಿನ 500 ರು. ಶುಲ್ಕದ ಬದಲು 1000 ರು. ಶುಲ್ಕ ವಿಧಿಸಲಾಗುತ್ತದೆ.

Credit Card Rules Change:ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ; ನಾಳೆಯಿಂದ ಈ ನಿಯಮಗಳಲ್ಲಿ ಬದಲಾವಣೆ

ವೈದ್ಯರಿಗೆ ನೀಡುವ ಉಚಿತ ಸ್ಯಾಂಪಲ್‌ಗೂ ತೆರಿಗೆ: ಆದಾಯ ತೆರಿಗೆ ಕಾಯ್ದೆಯ ಹೊಸ ನಿಯಮ 194ಆರ್‌ ಅಡಿ ವೈದ್ಯರು ಫಾರ್ಮಾ ಕಂಪನಿಗಳಿಂದ ವರ್ಷಕ್ಕೆ 20,000 ರು. ಮೌಲ್ಯಕ್ಕಿಂತ ಹೆಚ್ಚಿನ ಉಚಿತ ಸ್ಯಾಂಪಲ್‌ ಔಷಧಗಳನ್ನು ಪಡೆದರೆ ಆಸ್ಪತ್ರೆಯು ವೈದ್ಯರಿಂದ ಶೇ.10ರಷ್ಟುಟಿಡಿಎಸ್‌ ಕಡಿತಗೊಳಿಸಿ ತೆರಿಗೆ ಇಲಾಖೆಗೆ ಪಾವತಿಸಬೇಕು.

ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗೆ ತೆರಿಗೆ: ಸಾಮಾಜಿಕ ಜಾಲತಾಣಗಳಲ್ಲಿ ಇನ್‌ಫ್ಲುಯೆನ್ಸರ್‌ಗಳಾಗಿ ಕೆಲಸ ಮಾಡಿ ಹಣ ಗಳಿಸುವವರು ವರ್ಷಕ್ಕೆ 20,000 ರು.ಗಿಂತ ಹೆಚ್ಚು ಹಣ ಗಳಿಸಿದರೆ ಅವರ ಆದಾಯಕ್ಕೆ ಶೇ.10ರಷ್ಟುಟಿಡಿಎಸ್‌ ಕಡಿತ ಮಾಡಲಾಗುತ್ತದೆ.

ಬ್ಯಾಂಕ್‌ ಖಾತೆಗೆ ಡಿಮ್ಯಾಟ್‌ ಖಾತೆ ಜೋಡಣೆ ಕಡ್ಡಾಯ: ಭಾರತೀಯ ಷೇರು ಹಾಗೂ ವಿನಿಮಯ ಮಂಡಳಿಯ (ಸೆಬಿ) ಹೊಸ ನಿಯಮದ ಪ್ರಕಾರ ಎಲ್ಲಾ ಷೇರು ಬ್ರೋಕರ್‌ಗಳು ತಮ್ಮ ಡಿಮ್ಯಾಟ್‌ ಖಾತೆಯನ್ನು ಬ್ಯಾಂಕ್‌ ಖಾತೆಯೊಂದಿಗೆ ಜೋಡಿಸುವುದು ಕಡ್ಡಾಯವಾಗಿದೆ.

ಕೆಲಸದ ದಿನಗಳು 4ಕ್ಕೆ ಕಡಿತ: ಜು.1ರಿಂದ ದೇಶದಲ್ಲಿ ಹೊಸ ಕಾರ್ಮಿಕ ನೀತಿ ಜಾರಿಗೆ ಬರಲಿದೆ. ಅದರಡಿ, ನೌಕರರ ಕೆಲಸದ ದಿನಗಳನ್ನು ಕಂಪನಿಗಳು ಕಡಿಮೆ ಮಾಡಬಹುದು. ಸಂಸ್ಥೆಗಳು/ಕಂಪನಿಗಳು ಈಗಿರುವ ವಾರಕ್ಕೆ 5 ದಿನಗಳ ಕೆಲಸವನ್ನು 4 ದಿನಕ್ಕೆ ಇಳಿಸಿ, ಪ್ರತಿದಿನದ ಕೆಲಸದ ಅವಧಿಯನ್ನು ಅದಕ್ಕೆ ತಕ್ಕಂತೆ ಏರಿಕೆ ಮಾಡಬಹುದು. ಒಟ್ಟಿನಲ್ಲಿ ನೌಕರರು ವಾರಕ್ಕೆ ಕನಿಷ್ಠ 48 ತಾಸು ಕೆಲಸ ಮಾಡಬೇಕು.

5 ವರ್ಷ ನಷ್ಟಭರಿಸಿ ಇಲ್ಲವೇ ಹಂಚಿಕೆ ನೀತಿ ಬದಲಾಯಿಸಿ!

ಪಿಎಫ್‌ ಪಾಲು ಹೆಚ್ಚಳ: ಹೊಸ ಕಾರ್ಮಿಕ ನೀತಿಯಡಿ ಜು.1ರಿಂದ ನೌಕರರ ಮೂಲ ವೇತನವು ಅವರ ಒಟ್ಟು ವೇತನದ ಕನಿಷ್ಠ ಶೇ.50ರಷ್ಟುಇರಲೇಬೇಕು. ಅದರರ್ಥ, ನೌಕರರು ಹಾಗೂ ಕಂಪನಿಗಳು ಪಾವತಿಸುವ ಭವಿಷ್ಯನಿಧಿ (ಪಿಎಫ್‌) ಪಾಲು ಹೆಚ್ಚಾಗಲಿದೆ.

ಗಳಿಕೆ ರಜೆ ನೀತಿ ಬದಲು: ಜು.1ರಿಂದ ಹೊಸ ಕಾರ್ಮಿಕ ನೀತಿಯನ್ವಯ ನೌಕರರು ಹಿಂದಿನ ವರ್ಷಗಳ ರಜೆಯನ್ನು ಸೇರಿಸಿಕೊಳ್ಳುತ್ತ ಒಟ್ಟು 300 ರಜೆಗಳನ್ನು ಗಳಿಕೆ ರಜೆಯನ್ನಾಗಿ ಪರಿವರ್ತಿಸಿಕೊಳ್ಳಬಹುದು.

ದೇಶಾದ್ಯಂತ ತೆಳು ಪ್ಲಾಸ್ಟಿಕ್‌ ನಿಷೇಧ: ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಜು.1ರಿಂದ ದೇಶಾದ್ಯಂತ ಒಮ್ಮೆ ಬಳಸಿ ಎಸೆಯುವ ತೆಳುವಾದ ಪ್ಲಾಸ್ಟಿಕ್‌ನ ಬಳಕೆ, ಉತ್ಪಾದನೆ, ಆಮದು ಹಾಗೂ ಮಾರಾಟ ನಿಷೇಧವಾಗಲಿದೆ. ಏಕಬಳಕೆಯ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳು, ಇಯರ್‌ ಬಡ್‌ಗಳು, ಬಲೂನ್‌ಗೆ ಬಳಸುವ ಪ್ಲಾಸ್ಟಿಕ್‌ ಕಡ್ಡಿ, ಪ್ಲಾಸ್ಟಿಕ್‌ ಧ್ವಜ, ಚಾಕೊಲೇಟ್‌ಗೆ ಬಳಸುವ ಪ್ಲಾಸ್ಟಿಕ್‌ ಕಡ್ಡಿ, ಐಸ್‌ಕ್ರೀಂ ಕಡ್ಡಿ, ಥರ್ಮೋಕೋಲ್‌, ಪ್ಲಾಸ್ಟಿಕ್‌ ಪ್ಲೇಟ್‌, ಪ್ಲಾಸ್ಟಿಕ್‌ ಕಪ್‌, ಪ್ಲಾಸ್ಟಿಕ್‌ ಫೋರ್ಕ್, ಪ್ಲಾಸ್ಟಿಕ್‌ ಚಮಚ, ಪ್ಲಾಸ್ಟಿಕ್‌ ಚಾಕು, ಪ್ಲಾಸ್ಟಿಕ್‌ ಸ್ಟ್ರಾ, ಪ್ಲಾಸ್ಟಿಕ್‌ ಟ್ರೇ, ಸ್ವೀಟ್‌ ಬಾಕ್ಸ್‌ಗಳಿಗೆ ಸುತ್ತುವ ಪ್ಲಾಸ್ಟಿಕ್‌ ಹಾಳೆ, ಪ್ಲಾಸ್ಟಿಕ್‌ ಆಮಂತ್ರಣ ಪತ್ರ, ಪ್ಲಾಸ್ಟಿಕ್‌ ಸಿಗರೆಟ್‌ ಪ್ಯಾಕ್‌ಗಳು, 100ಕ್ಕಿಂತ ಕಡಿಮೆ ಮೈಕ್ರಾನ್‌ನ ಪ್ಲಾಸ್ಟಿಕ್‌ ಅಥವಾ ಪಿವಿಸಿ ಬ್ಯಾನರ್‌ಗಳು ನಿಷೇಧವಾಗಲಿವೆ. ನಿಯಮ ಉಲ್ಲಂಘನೆಗೆ 5 ವರ್ಷದವರೆಗೆ ಜೈಲುಶಿಕ್ಷೆ ಅಥವಾ 1 ಲಕ್ಷ ರು.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..