ಭಾಗಲ್ಪುರ(ಮಾ.4): ಬಿಹಾರದ(Bihar) ಭಾಗಲ್ಪುರದ(Bhagalpur) ಮನೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ದುರಂತದಲ್ಲಿ ಎಂಟು ಮಂದಿ ಸಾವನ್ನಪ್ಪಿ, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಿಹಾರದ ಬಾಗಲ್ಪುರದಲ್ಲಿ ಈ ಅವಘಡ ಸಂಭವಿಸಿದೆ. ಮೃತಪಟ್ಟವರಲ್ಲಿ ಒಂದು ಮಗು ಕೂಡಾ ಸೇರಿದೆ ಎಂದು ತಿಳಿದು ಬಂದಿದೆ. ತಾತಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಜ್ವಾಲಿಚಕ್‌ನಲ್ಲಿರುವ ಮನೆಯೊಂದರಲ್ಲಿ ಗುರುವಾರ ತಡರಾತ್ರಿ 11.30ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು ಸ್ಫೋಟದ ಪರಿಣಾಮ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ.
ಸ್ಫೋಟದಿಂದಾಗಿ ಮನೆ ಕುಸಿದಿದ್ದು ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈ ಸ್ಫೋಟದ ಶಬ್ದ ಭಾರೀ ತೀವ್ರವಾಗಿದ್ದು ಇಡೀ ನಗರಕ್ಕೆ ಕೇಳಿಸಿದೆ ಎನ್ನಲಾಗುತ್ತಿದೆ. ಸ್ಫೋಟದ ನಂತರ ಸ್ಥಳದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಮನೆಯಲ್ಲಿ ಪಟಾಕಿಗಳ ತಯಾರಿಕೆ ನಡೆಯುತ್ತಿದ್ದು, ಇದೇ ಕಾರಣದಿಂದ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಘಟನೆಗೆ ಇನ್ನೂ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಗಾಯಾಗಳುಗಳನ್ನು ಮತ್ತು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ಎಸ್‌ಎಸ್‌ಪಿ ಮತ್ತು ಡಿಐಜಿ ಕೂಡ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.
Russia Ukraine War: ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ ದಾಳಿ.. ಟಿವಿ ಟವರ್ ಬ್ಲಾಸ್ಟ್!
ಭೂಕಂಪದ ಅನುಭವ: ಸ್ಫೋಟವು ಎಷ್ಟು ಪ್ರಬಲವಾಗಿತ್ತೆಂದರೆ ಇದು ಇಡೀ ನಗರದಲ್ಲಿ ಪ್ರತಿಧ್ವನಿಸಿತ್ತು. ಗುರುವಾರ ಮಧ್ಯರಾತ್ರಿ ಬಹುತೇಕ ಮಂದಿ ನಿದ್ದೆಯಲ್ಲಿದ್ದ ಸಮಯದಲ್ಲಿ ಹಾಗೂ ಕೆಲವರು ಮಲಗಲು ಸಿದ್ಧತೆ ನಡೆಸುತ್ತಿದ್ದ ವೇಳೆ ಭಾಗಲ್‌ಪುರ ನಗರ ಪ್ರದೇಶದಲ್ಲಿ ಏಕಾಏಕಿ ಭಾರಿ ಸ್ಫೋಟ ಸಂಭವಿಸಿದೆ. ಇದ್ದಕ್ಕಿದಂತೆ ಕೇಳಿ ಬಂದ ಭಾರೀ ಸ್ಫೋಟದ ಸದ್ದಿಗೆ ಜನರು ಏನಾಯಿತು ಎಂದು ತಮ್ಮಲೇ ಚರ್ಚಿಸತೊಡಗಿದರು. ಕೆಲವರು ಭೂಕಂಪ ಸಂಭವಿಸಿದೆ ಎಂದು ಭಾವಿಸಿದ್ದರು. ಅಲ್ಲದೇ ಅನೇಕ ಜನರು ಭೂಕಂಪ ಸಂಭವಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಹ ಹೇಳಿಕೊಂಡಿದ್ದಾರೆ. ಆಕಾಶದಲ್ಲಿ ಹೊಗೆ ಇದೆ ಎಂದು ಕೆಲವರು ಬರೆದಿದ್ದಾರೆ ಎಂದು ತಿಳಿದು ಬಂದಿದ್ದು, ಇದಾಗಿ ಸ್ವಲ್ಪ ಸಮಯದ ನಂತರ ನಿಜ ಸ್ಥಿತಿ ಎಲ್ಲರಿಗೆ ತಿಳಿದಿದೆ.
ಯಾದಗಿರಿಯಲ್ಲಿ 1 ಸ್ಫೋಟ, 9 ಸಾವು, ಶುಭ ಸಮಾರಂಭದ ಮನೆಯಲ್ಲಿ ಸೂತಕದ ಛಾಯೆ
ದೂರದವರೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಅವಶೇಷಗಳು: ಈ ಸ್ಫೋಟ ಸಂಭವಿಸಿದ ಕಟ್ಟಡವು ಸಂಪೂರ್ಣವಾಗಿ ನೆಲಸಮವಾಗಿದೆ. ಅಕ್ಕಪಕ್ಕದ ಮೂರು ಮನೆಗಳ ಗೋಡೆಗಳಿಗೂ ಹಾನಿಯಾಗಿದೆ. ಅಕ್ಕಪಕ್ಕದ ಮನೆಯ ಹಲವರು ಗಾಯಗೊಂಡಿದ್ದಾರೆ. ಈ ಸ್ಫೋಟದ ಸದ್ದು ಹಲವಾರು ಕಿಲೋಮೀಟರ್ ವರೆಗೆ ಕೇಳಿಸಿತು. ಬಿದ್ದ ಮನೆಯ ಅವಶೇಷಗಳು ಸ್ಥಳದಿಂದ ಬಹಳ ದೂರದಲ್ಲಿ ಹರಡಿಕೊಂಡಿದ್ದು, ಸ್ಫೋಟದ ಭೀಕರತೆಗೆ ಸಾಕ್ಷಿಯಾಗಿತ್ತು. ಘಟನೆಯ ನಂತರ ಪೊಲೀಸ್ ತಂಡ ತರಾತುರಿಯಲ್ಲಿ ಸ್ಥಳಕ್ಕೆ ತಲುಪಿತು. ಜಿಲ್ಲಾ ಡಿಎಂ, ಎಸ್‌ಎಸ್‌ಪಿ ಮತ್ತು ಡಿಐಜಿ ಕೂಡ ಸ್ಥಳಕ್ಕೆ ಆಗಮಿಸಿದರು. ಸದ್ಯ 8 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಮೃತರಲ್ಲಿ ಒಂದು ಮಗು ಕೂಡ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಎಸ್‌ಎಸ್‌ಪಿ ಬಾಬು ರಾಮ್(Babu Ram) ಹಾಗೂ ಹಲವು ಉನ್ನತ ಅಧಿಕಾರಿಗಳು ಆಗಮಿಸಿದ್ದರು. ಅಲ್ಲದೇ ಜೆಸಿಬಿ ಸಹಾಯದಿಂದ ಅವಶೇಷಗಳನ್ನು ತೆಗೆದು ಅವಶೇಷಗಳಡಿಯಲ್ಲಿ ಹುದುಗಿದ್ದ ಮೃತದೇಹಗಳನ್ನು ಹೊರತೆಗೆಯಲು ಪ್ರಾರಂಭಿಸಿದರು. ಆದರೆ, ಈ ಸ್ಫೋಟದಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ. ಸ್ಥಳಕ್ಕಾಗಮಿಸಿದ ಭಾಗಲ್ಪುರ ಡಿಎಂ ಸುಬ್ರತಾ ಸೇನ್ (subrata Sen) ಅವರು ಸದ್ಯಕ್ಕೆ ಈ ವಿಷಯದ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳದೆ ತಪ್ಪಿಸಿಕೊಂಡರು. ಅವರು 2 ಸಾವು ಮತ್ತು 7 ಜನ ಗಾಯಗೊಂಡಿದ್ದಾರೆ ಹಾಗೂ ಈ ಸಂಖ್ಯೆ ಹೆಚ್ಚಾಗಲಿದೆ ಎಂದರು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದಾಗ್ಯೂ ಅನಧಿಕೃತವಾಗಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ