Pune-Bengaluru Highway: ಪುಣೆಯಲ್ಲಿ ಭಾರಿ ಅಪಘಾತ, ಟ್ಯಾಂಕರ್‌ ಬಡಿದು 48 ವಾಹನಗಳು ಜಖಂ!

By Santosh Naik  |  First Published Nov 20, 2022, 10:49 PM IST

ಪುಣೆಯಲ್ಲಿನ ಪುಣೆ-ಬೆಂಗಳೂರು ಹೈವೇಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಏಕಕಾಲದಲ್ಲಿ ಒಟ್ಟು 48 ವಾಹಗಳು ಜಖಂ ಆಗಿದೆ. ಟ್ಯಾಂಕರ್‌ವೊಂದು ಬಡಿದ ಕಾರಣಕ್ಕಾಗಿ 48 ವಾಹನಗಳು ಜಖಂಗೊಂಡಿದೆ ಎಂದು ವರದಿಯಾಗಿದೆ.


ಪುಣೆ (ನ,20): ಪುಣೆ ಬೆಂಗಳೂರು ಹೆದ್ದಾರಿಯ ನವಲೆ ಸೇತುವೆಯ ಬಳಿ ಭಾನುವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಟ್ಯಾಂಕರ್‌ ಬಡಿದು ಏಕಕಾಲದಲ್ಲಿ 48 ವಾಹನಗಳು ಜಖಂಗೊಂಡಿದೆ. ಪುಣೆಯ ಅಗ್ನಿಶಾಮಕ ದಳ ಹಾಗೂ ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (PMRDA) ಸ್ಥಳಕ್ಕೆ ತಲುಪಿದೆ ಎಂದು ಪುಣೆ ಅಗ್ನಿಶಾಮಕ ದಳ ತಿಳಿಸಿದೆ. ಟ್ಯಾಂಕರ್‌ನ ಬ್ರೇಕ್‌ ಫೇಲ್‌ ಆಗಿದ್ದ ಖಾರಣ ನವಲೆ ಸೇತುವೆಯ ಮೇಲಿದ್ದ 48 ವಾಹನಗಳು ಜಖಂಗೊಂಡಿದೆ ಎಂದು ಹೇಳಲಾಗಿದ್ದು, ಕೆಲವರಿಗೆ ಗಂಭೀರ ಪ್ರಮಾಣದ ಪೆಟ್ಟುಗಳಾಗಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸಿಂಹಗಡ ರಸ್ತೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರ.ೆ ಕೆಲ ನಾಗರಿಕರು ಪೊಲೀಸರ ನೆರವಿನಿಂದ ಸ್ಥಳಕ್ಕೆ ಧಾವಿಸಿ ಅಪಘಾತಕ್ಕೀಡಾದ ವಾಹನಗಳನ್ನು ಪಕ್ಕಕ್ಕೆ ಸರಿಸಿ ಸಂಚಾರ ಆರಂಭಿಸುವ ಪ್ರಯತ್ನ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ನವಲೆ ಪುಲಾವರ ನಾಜಿಚ್ಚಾಯ ಪ್ರದೇಶದಲ್ಲಿ ಭಾರೀ ಅಪಘಾತ ಸಂಭವಿಸಿದೆ. ಅಥವಾ ಘಟನೆಯ ಬಗ್ಗೆ ಮಾಹಿತಿ ಪಡೆದು ಲಾಗಲಿಚ್ ಸಿಂದಗಡ್ ಪೊಲೀಸರು ಸ್ಥಳಕ್ಕಾಗಮಿಸಿದ್ದರು. ಅಪಘಾತದಲ್ಲಿ ಒಟ್ಟು 48 ವಾಹನಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಇದೆ. ಅಪಘಾತ ಅಥವಾ ಅಪಘಾತದಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

At least 48 vehicles have been damaged in a major accident on Navale Bridge, Bengaluru-Pune Highway. pic.twitter.com/2M5XcDrQKC

— Annu Kaushik (@AnnuKaushik253)

ರಾತ್ರಿ 8.30ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ 50 ರಿಂದ 60 ಮಂದಿ ಗಾಯಾಳುವಾಗಿರುವ ನಿರೀಕ್ಷೆ ಇದೆ. ಕೇವಲ 400 ರಿಂದ 500 ಮೀಟರ್‌ ಅಂತರದಲ್ಲಿ 47 ವಾಹನಗಳಿಗೆ ಟ್ರೇಲರ್‌ ಟ್ಯಾಂಕರ್‌ ಗುದ್ದಿದೆ ಎಂದು ಹೇಳಲಾಗುತ್ತಿದೆ. ಕತ್ರಾಜ್‌ ಸುರಂಗದಿಂದ ಆರಂಭವಾಗುವ ಇಳಿಜಾರು ಹಾದಿ, ಕಳೆದ ಕೆಲವು ವರ್ಷಗಳಿಂದ ಅಪಘಾತ ಪ್ರದೇಶವಾಗಿ ಗುರುತಿಸಿಕೊಂಡಿದೆ. ಈ ಪ್ರದೇಶದಲ್ಲಿ ಈವರೆಗೂ ಸಾಕಷ್ಟು ಇಂಥ ಘಟನೆಗಳು ಸಂಭವಿಸಿದೆ. ಇಳಿಜಾರು ಹಾದಿಯಲ್ಲಿ ಟ್ಯಾಂಕರ್‌ನ ಬ್ರೇಕ್‌ಫೇಲ್‌ ಆದ ಕಾರಣಕ್ಕೆ ಬಹುತೇಕ ಕಾರುಗಳಿಗೆ ಗುದ್ದಿದೆ. 

Tap to resize

Latest Videos

click me!