
ಆಯೋಧ್ಯೆ(ಡಿ.28) ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಜನವರಿ 22ರಂದು ಭವ್ಯ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ನಡೆಯಲಿದೆ. ಇದಕ್ಕೂ ಮುನ್ನ ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಆಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. ಇದೀಗ ಆಯೋಧ್ಯೆ ವಿಮಾನ ನಿಲ್ದಾಣಕ್ಕೆ ಹಲವು ಹೆಸರುಗಳು ಸೂಚಿಸಲಾಗಿತ್ತು. ಈ ಪೈಕಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅನ್ನೋ ಹೆಸರೇ ಪ್ರಚಲಿತದಲ್ಲಿತ್ತು. ಆದರೆ ಮೂಲಗಳ ಪ್ರಕಾರ, ಆಯೋಧ್ಯೆ ಏರ್‌ಪೋರ್ಟ್‌ಗೆ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಯೋಧ್ಯೆ ಧಾಮ ಅನ್ನೋ ಹೆಸರನ್ನು ಅಂತಿಮ ಮಾಡಲಾಗಿದೆ.
ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿಯ ಹೆಸರನ್ನೇ ಇದೀಗ ಆಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತಿಮಗೊಳಿಸಲಾಗಿದೆ. ಇತ್ತ ರೈಲು ನಿಲ್ದಾಣಕ್ಕೆ ಆಯೋಧ್ಯಾ ಧಾಮ ಎಂದು ಹೆಸರಿಡಲಾಗಿದೆ. ಈ ಕುರಿತು ಡಿಸೆಂಬರ್ 30 ರಂದ ನಡೆಯಲಿರುವ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ರಾಮ ಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ; ಆಯೋಧ್ಯೆಯಲ್ಲಿ ಮದ್ಯ,ಮಾಂಸ ಮಾರಾಟ ನಿಷೇಧ!
ಆಯೋಧ್ಯೆಯಲ್ಲಿ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಿಸಲಾಗಿದೆ. ಇದೇ ವೇಳೆ ವಾಲ್ಮೀಕಿ ಪುತ್ಥಳಿ ನಿರ್ಮಾಣವಾಗಬೇಕು ಎಂದು ಜೈಭೀಮ್ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಆಗ್ರಹಿಸಿತ್ತು. ಇದೀಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರಿಡಲು ನಿರ್ಧರಿಸಿದ್ದಾರೆ ಅನ್ನೋ ಮಾಹಿತಿಗಳು ಹೊರಬರುತ್ತಿದೆ.
ರಾಮನ ಜನ್ಮಸ್ಥಳ ಅಯೋಧ್ಯೆ ಮತ್ತು ಸೀತೆಯ ಜನ್ಮಸ್ಥಳ ಸೀತಾಮಢಿಯನ್ನು ಸಂಪರ್ಕಿಸುವ ರಾಷ್ಟ್ರದ ಮೊದಲ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಡಿ.30ರಂದು ಚಾಲನೆ ನೀಡಲಿದ್ದಾರೆ.ಈ ರೈಲು ತನ್ನ ಮೊದಲ ಪ್ರಯಾಣದಲ್ಲಿ ಅಯೋಧ್ಯೆಯಿಂದ ಸೀತಾಮಢಿಯ ಮೂಲಕ ದರ್ಭಾಂಗಕ್ಕೆ ತೆರಳಲಿದೆ. ಮರುದಿನದಿಂದ ಆ ರೈಲು ದೆಹಲಿಯಿಂದ ಅಯೋಧ್ಯೆ-ಸೀತಾಮಢಿಯ ಮೂಲಕ ದರ್ಭಾಂಗಕ್ಕೆ ಸಂಚಾರ ನಡೆಸುತ್ತದೆ.
ರಾಮ ಮಂದಿರದಿಂದ ಡಿಜಿಟಲ್ ರೂಪಾಂತರಗೊಂಡ ಆಯೋಧ್ಯೆ, QR ಕೋಡ್ ಪಾವತಿ ದುಪ್ಪಟ್ಟು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ