ವ್ಯಾಕ್ಸಿನ್ ಮಾರಾಟ ವಿವಾದ, ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ವಾಪಸ್‌!

By Suvarna News  |  First Published Jun 5, 2021, 11:42 AM IST

* ದೇಶೀಯ ಕೋವಿಡ್‌ ಲಸಿ​ಕೆ​ಯಾದ ಕೋವ್ಯಾ​ಕ್ಸಿನ್‌ ಅನ್ನು ಜನ​ರಿಗೆ ಉಚಿ​ತ​ವಾಗಿ ವಿತ​ರಿ​ಸುವ ಬದ​ಲು ಮಾರಾಟ

* ವ್ಯಾಕ್ಸಿನ್ ಮಾರಾಟ ವಿವಾದ, ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ವಾಪಸ್‌!

* ವಿರೋಧಕ್ಕೆ ಮಣಿದ ಪಂಜಾಬ್‌ ಸರ್ಕಾರ


ನವ​ದೆ​ಹ​ಲಿ(ಜೂ.05): ದೇಶೀಯ ಕೋವಿಡ್‌ ಲಸಿ​ಕೆ​ಯಾದ ಕೋವ್ಯಾ​ಕ್ಸಿನ್‌ ಅನ್ನು ಜನ​ರಿಗೆ ಉಚಿ​ತ​ವಾಗಿ ವಿತ​ರಿ​ಸುವ ಬದ​ಲಿಗೆ ಖಾಸಗಿ ಆಸ್ಪ​ತ್ರೆ​ಗ​ಳಿಗೆ ಮಾರಾಟ ಮಾಡಿದ್ದ ಪಂಜಾಬ್‌ ಸರ್ಕಾ​ರ, ವಿಪಕ್ಷಗಳು ಹಾಗೂ ಜನತೆಯ ವಿರೋಧಕ್ಕೆ ಮಣಿದಿದೆ. ಲಸಿ​ಕೆ​ಗ​ಳನ್ನು ಖಾಸಗಿ ಆಸ್ಪ​ತ್ರೆ​ಗ​ಳಿಗೆ ಮಾರಾಟ ಮಾಡುವ್ನ ವಿವಾ​ದಾ​ತ್ಮಕ ನಿರ್ಧಾ​ರ​ವನ್ನು ಪಂಜಾಬ್‌ ಮುಖ್ಯ​ಮಂತ್ರಿ ಅಮ​ರೀಂದರ್‌ ಸಿಂಗ್‌ ಹಿಂಪಡೆದಿದ್ದಾರೆ.

‘ಖಾಸಗಿ ಆಸ್ಪತ್ರೆಗಳು, ಸರ್ಕಾರದಿಂದ ಪಡೆದಿರುವ ಲಸಿಕೆಗಳನ್ನು ಕೂಡಲೇ ಮರಳಿಸಬೇಕು. ಜೊತೆಗೆ ಹಂಚಿಕೆ ಮಾಡಿ ಉಳಿ​ದಿ​ರುವ ಲಸಿ​ಕೆ​ಗಳನ್ನು ಈ ಕೂಡಲೇ ಸರ್ಕಾ​ರದ ಸುಪ​ರ್ದಿಗೆ ಒಪ್ಪಿಸಬೇಕು. ಅಲ್ಲದೆ ಈಗಾ​ಗಲೇ ಸರ್ಕಾ​ರ​ದಿಂದ ಪಡೆದು ಹಂಚಿಕೆ ಮಾಡ​ಲಾದ ಡೋಸ್‌​ಗ​ಳನ್ನು ತಾವು ಲಸಿಕೆ ಉತ್ಪಾ​ದಕ ಕಂಪ​ನಿ​ಗ​ಳಿಂದ ಪಡೆದ ತಕ್ಷ​ಣವೇ ಸರ್ಕಾ​ರಕ್ಕೆ ಹಿಂದಿ​ರು​ಗಿ​ಸ​ಬೇಕು’ ಎಂದು ಈ ಆದೇ​ಶ​ದಲ್ಲಿ ತಿಳಿ​ಸ​ಲಾ​ಗಿದೆ.

Tap to resize

Latest Videos

ಇದಕ್ಕೆ ಪ್ರಿತಿಯಾಗಿ, ಲಸಿ​ಕೆ​ಗಾಗಿ ಖಾಸಗಿ ಆಸ್ಪತ್ರೆ​ಗಳು ಸರ್ಕಾ​ರದ ಬ್ಯಾಂಕ್‌ ಖಾತೆ​ಯಲ್ಲಿ ಠೇವಣಿ ಮಾಡಿದ ಹಣ​ವನ್ನು ಶೀಘ್ರವೇ ಮರು​ಪಾ​ವ​ತಿ​ಸ​ಲಾ​ಗು​ತ್ತದೆ ಎಂದಿದೆ.

ಇದಕ್ಕೂ ಮುನ್ನ ಮಾತ​ನಾ​ಡಿದ ವಿಪಕ್ಷ ಅಕಾ​ಲಿ​ದ​ಳದ ಮುಖ್ಯಸ್ಥ ಸುಖ್‌​ಬೀರ್‌ ಸಿಂಗ್‌ ಬಾದಲ್‌, ಕೋವ್ಯಾ​ಕ್ಸಿನ್‌ ಅನ್ನು 400 ರು.ಗೆ ಖರೀ​ದಿ​ಸು​ತ್ತಿ​ರುವ ಸರ್ಕಾ​ರವು ಅದನ್ನು ಖಾಸಗಿ ಆಸ್ಪ​ತ್ರೆ​ಗ​ಳಿಗೆ 1060 ರು.ನಂತೆ ಮಾರಾಟ ಮಾಡು​ತ್ತಿದೆ. ಹೀಗೆ ಪಡೆದ ಲಸಿ​ಕೆ​ಯನ್ನು ಖಾಸಗಿ ಆಸ್ಪ​ತ್ರೆ​ಗಳು ಒಂದು ಡೋಸ್‌ಗೆ 1560 ರು.ಗೆ ಮಾರಾಟ ಮಾಡು​ತ್ತಿವೆ ಎಂದು ದೂರಿ​ದ್ದರು.

click me!