ಮಹಾರಾಷ್ಟ್ರದಲ್ಲಿ ಜ.26ರಿಂದ ‘ಜೈಲ್‌ ಟೂರಿಸಂ’ ಆರಂಭ!

By Suvarna NewsFirst Published Jan 24, 2021, 2:34 PM IST
Highlights

ರಾಜ್ಯದ ಐತಿಹಾಸಿಕ ಕಾರಾಗೃಹಗಳಿಗೆ ಭೇಟಿ ನೀಡಲು, ವೀಕ್ಷಿಸಲು ಅನುಕೂಲ ಕಲ್ಪಿಸುವ ಯೋಜನೆ| ಮಹಾರಾಷ್ಟ್ರದಲ್ಲಿ ಜ.26ರಿಂದ ‘ಜೈಲ್‌ ಟೂರಿಸಂ’ ಆರಂಭ!

ಮುಂಬೈ(ಜ.24): ರಾಜ್ಯದ ಐತಿಹಾಸಿಕ ಕಾರಾಗೃಹಗಳಿಗೆ ಭೇಟಿ ನೀಡಲು, ವೀಕ್ಷಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ಜ.26ರಿಂದ ಪುಣೆಯ ಯೆರವಾಡ ಜೈಲಿನಲ್ಲಿ ‘ಜೈಲು ಪ್ರವಾಸೋದ್ಯಮ’ವನ್ನು ಆರಂಭಿಸಲಿದೆ.

ಬ್ರಿಟಿಷ್‌ ಆಡಳಿತ ಸಂದರ್ಭದಲ್ಲಿ ಮಹಾತ್ಮ ಗಾಂಧಿ, ಲೋಕಮಾನ್ಯ ತಿಲಕ್‌, ಮೋತಿಲಾಲ್‌ ನೆಹರು, ಜವಾಹರ್‌ಲಾಲ್‌ ನೆಹರು, ಸರ್ದಾರ್‌ ವಲ್ಲಬಭಾಯಿ ಪಟೇಲ್‌, ಸರೋಜಿನಿ ನಾಯ್ಡು ಸೇರಿದಂತೆ ಹಲವರು ಯೆರವಾಡ ಜೈಲಿನಲ್ಲಿ ಬಂಧಿತರಾಗಿದ್ದರು.

ಇದೇ ವೇಳೆ ಜೈಲು ವೀಕ್ಷಿಸಸುವ ಪ್ರವಾಸಿಗಳಿಗೆ ಪ್ರವೇಶ ದರ 5ರಿಂದ 50 ರು. ವರೆಗೂ ಇರಲಿದೆ. ಗಣರಾಜ್ಯೋತ್ಸವ ದಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ.

click me!