ಸೀರಂ ಅಗ್ನಿ ದುರಂತದಿಂದ 1000 ಕೋಟಿ ರು.ಗಿಂತ ಹೆಚ್ಚು ಹಾನಿ: ಪೂನವಾಲಾ

By Suvarna NewsFirst Published Jan 24, 2021, 12:47 PM IST
Highlights

ಕೊರೋನಾ ಲಸಿಕೆ ಉತ್ಪಾದಕ ಘಟಕದಲ್ಲಿ ಗುರುವಾರ ಸಂಭವಿಸಿದ ಭಾರೀ ಅಗ್ನಿ ಅವಘಡ| ಸೀರಂ ಅಗ್ನಿ ದುರಂತದಿಂದ 1000 ಕೋಟಿ ರು.ಗಿಂತ  ಹೆಚ್ಚು ಹಾನಿ: ಪೂನವಾಲಾ

ಪುಣೆ(ಜ.24): ಕೊರೋನಾ ಲಸಿಕೆ ಉತ್ಪಾದಕ ಘಟಕದಲ್ಲಿ ಗುರುವಾರ ಸಂಭವಿಸಿದ ಭಾರೀ ಅಗ್ನಿ ಅವಘಡದಿಂದ 1000 ಕೋಟಿ ರು.ಗಿಂತ ಹೆಚ್ಚಿನ ಮೌಲ್ಯದ ನಷ್ಟವಾಗಿದೆ ಎಂದು ಸೀರಂ ಇನ್‌ಸ್ಟಿಟ್ಯೂಟ್‌ ಹೇಳಿಕೊಂಡಿದೆ.

ಅಲ್ಲದೆ ಈ ಘಟನೆಯು ಕೇವಲ ಅಪಘಾತಕವೇ ಅಥವಾ ಉದ್ದೇಶಪೂರ್ವಕವೇ ಎಂಬುದು ತನಿಖೆಯಿಂದ ಬಯಲಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಈ ಬಗ್ಗೆ ಶುಕ್ರವಾರ ಮಾತನಾಡಿದ ಸೀರಂ ಸಂಸ್ಥೆಯ ಸಿಇಒ ಅದಾರ್‌ ಪೂನವಾಲಾ ಅವರು, ‘ಲಸಿಕೆ ಘಟಕದಲ್ಲಿದ್ದ ಹಲವು ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದ್ದು, ಪರಿಣಾಮ 1000 ಕೋಟಿ ರು.ಗಿಂತ ಹೆಚ್ಚಿನ ಹಾನಿಯಾಗಿದೆ. ಆದರೆ ಕೋವಿಶೀಲ್ಡ್‌ ಲಸಿಕೆ ಉತ್ಪಾದಕ ಘಟಕಕ್ಕೆ ಯಾವುದೇ ಹಾನಿಯಾಗಿಲ್ಲ’ ಎಂದು ಪುನರುಚ್ಚಿಸಿದ್ದಾರೆ.

click me!