ಮಹಾರಾಷ್ಟ್ರದಲ್ಲಿ ಒಂದೇ ದಿನ ಬರೋಬ್ಬರಿ 778 ಮಂದಿಗೆ ಸೋಂಕು ತಗುಲಿದೆ. ಇನ್ನು ಗುರುವಾರ ಒಂದೇ ದಿನ 14 ಮಂದಿ ಸಾವಿಗೀಡಾಗಿದ್ದು, ಮಹಾರಾಷ್ಟ್ರದಲ್ಲಿ ಸಾವವಿನ ಸಂಖ್ಯೆ 283ಕ್ಕೆ ಹೆಚ್ಚಳವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಏ.24): ಲಾಕ್‌ಡೌನ್ ಜಾರಿಯಲ್ಲಿದ್ದರೂ ಮಹಾರಾಷ್ಟ್ರದಲ್ಲಿ ಗುರುವಾರ ಒಂದೇ ದಿನ ದಾಖಲೆಯ 778 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಆ ರಾಜ್ಯದಲ್ಲಿ ವೈರಸ್ ಪೀಡಿತರ ಸಂಖ್ಯೆ 6427ಕ್ಕೆ ಏರಿದೆ.
ಗಮನಾರ್ಹ ಎಂದರೆ ಮುಂಬೈವೊಂದರಲ್ಲೇ 4000 ಸೋಂಕಿತರು ಇದ್ದಾರೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 14 ಮಂದಿ ಸಾವಿಗೀಡಾಗಿದ್ದು, ಒಟ್ಟು ಮೃತರ ಸಂಖ್ಯೆ 283ಕ್ಕೆ ಹೆಚ್ಚಳವಾಗಿದೆ. ಕೆಲ ದಿನಗಳ ಹಿಂದೆ 554 ಪ್ರಕರಣ ಪತ್ತೆಯಾಗಿದ್ದೇ ಈವರೆಗಿನ ಒಂದು ದಿನದ ದಾಖಲೆಯಾಗಿತ್ತು.
undefined
ಈ ನಡುವೆ, ದೇಶದಲ್ಲಿ ಗುರುವಾರ ಒಂದೇ ದಿನ 1658 ಮಂದಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ. ಇದರೊಂದಾಗಿ ಒಟ್ಟು ಸೋಂಕಿತರ ಸಂಖ್ಯೆ 22,951ಕ್ಕೇರಿಕೆಯಾಗಿದೆ. ಇದೇ ವೇಳೆ 38 ಮಂದಿ ಸಾವಿಗೀಡಾಗಿದ್ದು, ತನ್ಮೂಲಕ ಕೊರೋನಾಗೆ ಈವರೆಗೆ ಬಲಿಯಾದವರ ಸಂಖ್ಯೆ 721ಕ್ಕೆ ಹೆಚ್ಚಳವಾಗಿದೆ.
ಸಚಿವರಿಗೂ ಕೊರೋನಾ ಸೋಂಕು ದೃಢ, ಬೆಚ್ಚಿ ಬಿದ್ದ ಸರ್ಕಾರ
ಧಾರಾವಿ: 200ಕ್ಕೇರಿದ ಸೋಂಕಿತರು
ಏಷ್ಯಾದ ಅತಿದೊಡ್ಡ ಸ್ಲಂಗಳಲ್ಲಿ ಒಂದಾಗಿರುವ ಮುಂಬೈನ ಧಾರಾವಿಯಲ್ಲಿ ಶುಕ್ರವಾರ 25 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 200ರ ಗಡಿ ದಾಟಿ 214ಕ್ಕೆ ಹೆಚ್ಚಳಗೊಂಡಿದೆ. ಈವರೆಗೆ ಈ ಕೊಳಗೇರಿಯಲ್ಲಿ 13 ಜನರು ಕೊರೋನಾಗೆ ಬಲಿಯಾಗಿದ್ದಾರೆ.