
ಮಹಾರಾಷ್ಟ್ರ[ಡಿ.19]: ಶಿವಸೇನೆ ನಾಯಕ ಹಾಗೂ ಮೊದಲ ಬಾರಿ ಶಾಸಕರಾದ ಆದಿತ್ಯ ಠಾಕ್ರೆ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. 'ಅದೆಷ್ಟೇ ಕೆಸರೆರಚಿದ್ರೂ ನಾವು ಕಮಲ ಅರಳಲು ಬಿಡುವುದಿಲ್ಲ' ಎಂಬ ಆದಿತ್ಯ ಹೇಳಿಕೆ ಸದ್ಯ ಬಿಜೆಪಿಗರ ಕೆಂಗಣ್ಣಿಗೀಡಾಗಿದೆ. ಅಧಿಕಾರದ ಆಸೆಗಾಗಿ ಹೇಗೆ ತಮ್ಮ ಮಿತ್ರರನ್ನೇ ಕಡೆಗಣಿಸುತ್ತಾರೆಎಂಬುವುದನ್ನು ತಾನು ಕಂಡಿರುವುದಾಗಿ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವರಲೀ ಕ್ಷೇತ್ರದಿಂದ ಮೊದಲ ಶಾಸಕರಾಗಿ ಆಯ್ಕೆಯಾಗಿರುವ ಆದಿತ್ಯ ಠಾಕ್ರೆ ಬಿಜೆಪಿ ಹೆಸರೆತ್ತದೆ ವಾಗ್ದಾಳಿ ನಡೆಸಿದ್ದಾರೆ. 'ಅಧಿಕಾರದ ಆಸೆಗಾಗಿ ತಮ್ಮ ಸ್ನೇಹಿತರನ್ನೇ ಕಡೆಗಣಿಸುವವರನ್ನು ನಾನು ಕಂಡಿದ್ದೇನೆ. ಅವರು ಅದೆಷ್ಟೇ ಕೆಸರು ಎರಚಿದ್ರೂ ನಾವು ಕಮಲ ಅರಳಲು ಬಿಡುವುದಿಲ್ಲ' ಎಂದಿದ್ದಾರೆ. ಆದಿತ್ಯ ಬಿಜೆಪಿ ಹೆಸರೆತ್ತದೆ ಪರೋಕ್ಷವಾಗಿ ಛಾಟಿ ಬೀಸಿದ್ದು, ಪಕ್ಷದ ನಾಯಕರಿಗೆ ನುಂಗಲಾರದ ತುತ್ತಾಗಿದೆ.
ಈ ನಡುವೆ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಹಾಲಿ ಸಿಎಂ ಉದ್ದವ್ ಠಾಕ್ರೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ಉದ್ದವ್ ಠಾಕ್ರೆ ಈ ಭೋಜನ ಕೂಟಕ್ಕೆ ರಾಜ್ಯದ ಎಲ್ಲಾ ಶಾಸಕರನ್ನು ಆಹ್ವಾನಿಸಿದ್ದರು. ಬಹುಶಃ ರಾಜ್ಯದ ಮುಖ್ಯಮಂತ್ರಿಯೊಬ್ಬರು ಎಲ್ಲಾ ಪಕ್ಷದ ಶಾಸಕರನ್ನು ಆಹ್ವಾನಿಸಿದ್ದು ಇದೇ ಮೊದಲ ಬಾರಿ ಅನಿಸುತ್ತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ