ಮೆಟ್ರೋ ಕಾರ್‌ ಶೆಡ್‌ ಪ್ರಾಜೆಕ್ಟ್‌ ಮತ್ತೆ ಅರೆ ಕಾಲೋನಿಗೆ ಶಿಫ್ಟ್‌, ಸಿಎಂ ಏಕನಾಥ್‌ ಶಿಂಧೆ ನಿರ್ಧಾರ!

Published : Jul 01, 2022, 07:53 PM IST
ಮೆಟ್ರೋ ಕಾರ್‌ ಶೆಡ್‌ ಪ್ರಾಜೆಕ್ಟ್‌ ಮತ್ತೆ ಅರೆ ಕಾಲೋನಿಗೆ ಶಿಫ್ಟ್‌, ಸಿಎಂ ಏಕನಾಥ್‌ ಶಿಂಧೆ ನಿರ್ಧಾರ!

ಸಾರಾಂಶ

ಮುಂಬೈ ಮೆಟ್ರೋ ರೈಲು ನಿಗಮವು 2019 ರಲ್ಲಿ ಆರೆ ಕಾಲೋನಿಯಲ್ಲಿ ಮೆಟ್ರೊ ಕಾರ್‌ ಶೆಡ್‌ ನಿರ್ಮಾಣ ಮಾಡುವ ಸಲುವಾಗಿ ಮರಗಳನ್ನು ಕಡಿಯಲು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಅನುಮತಿಯನ್ನು ಕೋರಿತ್ತು. ಆದರೆ ಈ ಯೋಜನೆಗೆ ಮುಂಬೈನಲ್ಲಿ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಉದ್ಧವ್‌ ಠಾಕ್ರೆ ಸರ್ಕಾರ ಈ ಯೋಜನೆಯನ್ನು ಕೈಬಿಟ್ಟಿತ್ತು.

ಮುಂಬೈ (ಜು. 1): ಮುಂಬೈನ ಅರೆ ಕಾಲೋನಿಯಲ್ಲಿ (Aarey Colony) ಮೆಟ್ರೋ ಕಾರ್‌ ಶೆಡ್‌ (Metro Car Shed) ಯೋಜನೆಗೆ ತಡೆ ನೀಡುವ ಉದ್ದವ್‌ ಠಾಕ್ರೆ (Uddhav Thackeray) ಸರ್ಕಾರದ ನಿರ್ಧಾರವನ್ನು ಮಹಾರಾಷ್ಟ್ರದ ನೂತನ ಸಿಎಂ ಏಕನಾಥ್‌ ಶಿಂಧೆ (Maharashtra New CM Eknath Shind) ಹಿಂಪಡೆದಿದ್ದಾರೆ. ಹೊಸ ಮಹಾರಾಷ್ಟ್ರ ಸರ್ಕಾರವು ಮುಂಬೈನ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಅನ್ನು ನಿರ್ಮಿಸಲು ಸಜ್ಜಾಗಿದೆ.

ಅದರೊಂದಿಗೆ ದೇವೇಂದ್ರ ಫಡ್ನವಿಸ್‌ (Devendra Fadnavis) ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಯೋಜಿಸಲಾಗಿದ್ದ ಪ್ರಮುಖ ಜಲಸಂರಕ್ಷಣಾ ಯೋಜನೆಯಾದ ಜಲಯುಕ್ತ ಶಿವರ ಅಭಿಯಾನವನ್ನು (Jalyukt Shivar Abhiyan) ಪುನರಾರಂಭಿಸಲು ಕೂಡ ಆದೇಶ ನೀಡಿದ್ದಾರೆ. 2019 ರಲ್ಲಿ ದೇವೇಂದ್ರ ಫಡ್ನವಿಸ್ ಸರ್ಕಾರದ ಅಡಿಯಲ್ಲಿ ಯೋಜಿಸಿದಂತೆ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಿಸಲಾಗುವುದು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ  ಎಂದು ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ (Advocate General Ashutosh Kumbhakoni) ಅವರಿಗೆ ನೂತನ ಸಿಎಂ ಏಕನಾಥ್‌ ಶಿಂಧೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ಮೆಟ್ರೋ ರೈಲು ನಿಗಮವು 2019 ರಲ್ಲಿ ಆರೆ ಕಾಲೋನಿಯಲ್ಲಿ ಮೆಟ್ರೊ ಕಾರ್‌ ಶೆಡ್‌ ನಿರ್ಮಾಣ ಮಾಡುವ ಸಲುವಾಗಿ ಮರಗಳನ್ನು ಕಡಿಯಲು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಅನುಮತಿಯನ್ನು ಕೋರಿತ್ತು. ಆದರೆ ಈ ಯೋಜನೆಗೆ ಮುಂಬೈನಲ್ಲಿ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಉದ್ಧವ್‌ ಠಾಕ್ರೆ ಸರ್ಕಾರ ಈ ಯೋಜನೆಯನ್ನು ಕೈಬಿಟ್ಟಿತ್ತು.

ಮುಂಬೈ ಮೆಟ್ರೊ ರೈಲು ನಿಗಮಕ್ಕೆ ಬಿಎಂಸಿ ಅನುಮತಿ ನೀಡಿದ ನಂತರ ಪ್ರತಿಭಟನೆಗಳು ಭುಗಿಲೆದ್ದವು. ಆಗಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 'ಮೆಟ್ರೋ ಕಾರ್ ಶೆಡ್‌ಗಾಗಿ ಕೋರಿದ ಪ್ರದೇಶವನ್ನು ಜೀವವೈವಿಧ್ಯ ಅಥವಾ ಅರಣ್ಯ ಭೂಮಿ ಎಂದು ವರ್ಗೀಕರಿಸಲಾಗಿಲ್ಲ' ಮತ್ತು 'ಮೆಟ್ರೋ ನಿರ್ಮಾಣವು ಇಂಗಾಲದ ಅಂಶವನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತದೆ' ಎಂದು ವಾದಿಸಿದ್ದರು.

ನಾವು ಮರಗಳನ್ನು ಉಳಿಸಲು ಕಾರಣವೇನು, ವಾಯುವಿನಲ್ಲಿ ಇಂಗಾಲದ ಪ್ರಮಾಣ ಕಡಿಮೆ ಆಗಬೇಕು ಎನ್ನುವ ಕಾರಣಕ್ಕಾಗಿ ತಾನೇ. ನಾವು ನಿರ್ಮಾಣ ಮಾಡಲಿರುವ ಭೂಗತ ಮೆಟ್ರೋ ಕಾರಣದಿಂದಾಗಿ ಎಷ್ಟು ಪ್ರಮಾಣದ ಇಂಗಾಲದ ಪ್ರಮಾಣ ಕಡಿಮೆ ಆಗುತ್ತದೆ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಫಡ್ನವಿಸ್‌ ಹೇಳಿದ್ದರು.

ಅಧಿಕಾರಕ್ಕೆ ಬಂದ ನಂತರ, ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಮೆಟ್ರೋ ಕಾರ್ ಶೆಡ್ ಅನ್ನು ಕಂಜುರ್ಮಾರ್ಗ್‌ಗೆ ಸ್ಥಳಾಂತರಿಸುವ ನಿರ್ಧಾರವನ್ನು ಮಾಡಿತ್ತು. ನಂತರ, ಈ ನಿರ್ಧಾರವನ್ನು ಪ್ರಶ್ನಿಸಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2020 ರಲ್ಲಿ ಬಾಂಬೆ ಹೈಕೋರ್ಟ್‌ಗೆ ತೆರಳಿ ಈ ಭೂಮಿ ತನ್ನ ಉಪ್ಪು ಇಲಾಖೆಗೆ ಸೇರಿದೆ ಎಂದು ಹೇಳಿಕೊಂಡಿದೆ. ಅಂದಿನಿಂದ ಮೆಟ್ರೋ ಕಾರ್ ಶೆಡ್ ಯೋಜನೆ ನನೆಗುದಿಗೆ ಬಿದ್ದಿದೆ.

ಮೆಟ್ರೋ ಡಿಪೋಗೆ 2656 ಮರಗಳ ಹನನ!

ಈ ಯೋಜನೆಯ ಕಾಮಗಾರಿಯನ್ನು ಪುನರಾರಂಭಿಸುವ ಮಹಾರಾಷ್ಟ್ರದ ನೂತನ ಸಿಎಂ ಏಕನಾಥ್ ಶಿಂಧೆ ಅವರ ನಿರ್ಧಾರವನ್ನು ಬಿಜೆಪಿ ನಾಯಕ ಕಿರಿತ್ ಸೋಮಿಯಾ ಬೆಂಬಲಿಸಿದ್ದಾರೆ. "ಆರೆಯಲ್ಲಿರುವ ಮೆಟ್ರೋಕಾರ್ ಶೆಡ್ ಅನ್ನು ಮರಳಿ ತರಲು ಶಿಂದೆ ಫಡ್ನವಿಸ್ ಸರ್ಕಾರದ ನಿರ್ಧಾರವು ಮುಂಬೈ ಮೆಟ್ರೋ ಕೆಲಸವನ್ನು ಮತ್ತೆ ಟ್ರ್ಯಾಕ್‌ಗೆ ತರುತ್ತದೆ" ಎಂದು ಬಿಜೆಪಿ ನಾಯಕ ಟ್ವೀಟ್ ಮಾಡಿದ್ದಾರೆ. 2019 ರಲ್ಲಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಠಾಕ್ರೆ ಕೊಲಾಬಾ-ಬಾಂದ್ರಾ-ಸೀಪ್ಜ್ ಮೆಟ್ರೋ 3 ಕಾರಿಡಾರ್ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದರು ಮತ್ತು ಪರ್ಯಾಯ ಪ್ಲಾಟ್‌ಗಳನ್ನು ಹುಡುಕಲು ಸಮಿತಿಯನ್ನು ರಚಿಸಿದ್ದರು. ನಂತರ ಅವರ ಸರ್ಕಾರವು ಆರೆ ಕಾಲೋನಿಯನ್ನು ಮೀಸಲು ಅರಣ್ಯ ಎಂದು ಗೊತ್ತುಪಡಿಸಿತು.

ಕಾಡು ಕಡಿಯದಂತೆ ರೋಹಿತ್ ಟ್ವೀಟ್: ಉಲ್ಟಾ ಹೊಡೆದ ಫ್ಯಾನ್ಸ್!

ಠಾಕ್ರೆ ಅವರು ಜಲಯುಕ್ತ ಶಿವರ್ ಅಭಿಯಾನವನ್ನು ಸ್ಥಗಿತಗೊಳಿಸಿದರು ಮತ್ತು ಯೋಜನೆಯ ಅಕ್ರಮಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದರು. ಫಡ್ನವೀಸ್ ಅವರ ಪಿಇಟಿ ಯೋಜನೆಯಾದ ಬರ-ನಿರೋಧಕ ಯೋಜನೆಯನ್ನು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತನ್ನ ವರದಿಯಲ್ಲಿ 2020 ರ ಸೆಪ್ಟೆಂಬರ್‌ನಲ್ಲಿ ರಾಜ್ಯ ಶಾಸಕಾಂಗಕ್ಕೆ ಮಂಡಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್