'ಆಕ್ಸಿಜನ್‌ ಪೂರೈಕೆಗೆ ಕರ್ನಾಟಕ ಅಡ್ಡಿ!'

By Suvarna NewsFirst Published May 9, 2021, 10:06 AM IST
Highlights

ಆಕ್ಸಿಜನ್‌ ಪೂರೈಕೆಗೆ ಕರ್ನಾಟಕ| ಅಡ್ಡಿ ಮಹಾರಾಷ್ಟ್ರ ಸಚಿವ ಪಾಟೀಲ್‌ ದೂರು ಕೇಂದ್ರದ ಮಧ್ಯಪ್ರವೇಶಕ್ಕೆ ಆಗ್ರಹ| ಕೊಲ್ಹಾಪುರ, ಸಾಂಗ್ಲಿ, ಸತಾರ, ಸಿಂಧುದುರ್ಗ, ರತ್ನಗಿರಿ ಸೇರಿ ಹಲವು ಜಿಲ್ಲೆಗಳಲ್ಲಿ ಆಮ್ಲಜನಕ ಪೂರೈಕೆಯಲ್ಲಿ ಕೊರತೆ

ಮುಂಬೈ(ಮೇ.09): ಮಹಾರಾಷ್ಟ್ರದ ಪಶ್ಚಿಮದ ಜಿಲ್ಲೆಗಳಲ್ಲಿ ಆಮ್ಲಜನಕ ಪೂರೈಕೆಗೆ ಕರ್ನಾಟಕ ಸರ್ಕಾರ ಅಡ್ಡಿ ಮಾಡುತ್ತಿದೆ ಎಂದು ಮಹಾರಾಷ್ಟ್ರದ ಗೃಹ ಖಾತೆ ರಾಜ್ಯ ಸಚಿವ ಸತೇಜ್‌ ಪಾಟೀಲ್‌ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಪಾಟೀಲ್‌, ಕರ್ನಾಟಕದ ಬಳ್ಳಾರಿ ಉಕ್ಕು ಕಾರ್ಖಾನೆಯಿಂದ ಪಶ್ಚಿಮ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ 50 ಮೆಟ್ರಿಲ್‌ ಟನ್‌ನಷ್ಟುಆಮ್ಲಜನಕ ಪೂರೈಕೆಯಾಗುತ್ತಿತ್ತು. ಆದರೆ ಇದೀಗ ಕರ್ನಾಟಕ ಸರ್ಕಾರ ಸರಬರಾಜಿಗೆ ತಡೆ ಮಾಡುತ್ತಿದೆ.

ಹೀಗಾಗಿ ಕೊಲ್ಹಾಪುರ, ಸಾಂಗ್ಲಿ, ಸತಾರ, ಸಿಂಧುದುರ್ಗ, ರತ್ನಗಿರಿ ಸೇರಿ ಹಲವು ಜಿಲ್ಲೆಗಳಲ್ಲಿ ಆಮ್ಲಜನಕ ಪೂರೈಕೆಯಲ್ಲಿ ಕೊರತೆಯಾಗಿದೆ. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಸುಗಮ ಪೂರೈಕೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ.

click me!