ಪ್ರಯಾಣದ ನಡುವೆ ಗಂಡ-ಹೆಂಡ್ತಿ ಗಲಾಟೆ, ಅವಳಿ ಮಕ್ಕಳನ್ನು ಕಾಡಿಗೆ ಕರೆದುಕೊಂಡು ಹೋಗಿ ಕತ್ತುಸೀಳಿ ಕೊಂದ ಗಂಡ!

Published : Oct 25, 2025, 09:56 PM IST
maharashtra man murders twin daughters

ಸಾರಾಂಶ

Maharashtra Man Murders Twin Daughters in Forest After Wife Leaves Him ಪೊಲೀಸರ ಪ್ರಕಾರ, ಆರೋಪಿಯನ್ನು ವಾಶಿಮ್ ಜಿಲ್ಲೆಯ ನಿವಾಸಿ ರಾಹುಲ್ ಚವಾಣ್ ಎಂದು ಗುರುತಿಸಲಾಗಿದೆ. 

ಮುಂಬೈ (ಅ.25): ಮಹಾರಾಷ್ಟ್ರದ ವಾಶಿಮ್‌ ಜಿಲ್ಲೆಯ ಬುಲ್ದಾನಾದಲ್ಲಿ ಗಂಡ-ಹೆಂಡತಿ ನಡುವಿನ ಜಗಳ ಅಮಾಯಕ ಅವಳಿ ಮಕ್ಕಳ ಕತ್ತು ಸೀಳಿ ಕೊಲೆಯಾಗುವುದರೊಂದಿಗೆ ಅಂತ್ಯವಾಗಿದೆ. ಅವಳಿ ಮಕ್ಕಳನ್ನು ಕೊಂದ ವ್ಯಕ್ತಿಯನ್ನು ರಾಹುಲ್‌ ಚವಾಣ್‌ ಎಂದು ಗುರುತಿಸಲಾಗಿದೆ. ಗಂಡ-ಹೆಂಡತಿ ನಡುವೆ ಗಲಾಟೆ ಆಗುತ್ತಿದ್ದ ಸಮಯದಲ್ಲಿಯೇ ಸಿಟ್ಟಿಗೆದ್ದ ಹೆಂಡತಿ ಇಡೀ ಕುಟುಂಬವನ್ನೇ ತೊರೆದು ತವರುಮನೆಗೆ ಸೇರಿಕೊಂಡಿದ್ದಳು. ಹೆಂಡತಿ ತನ್ನ ಬಿಟ್ಟು ತವರು ಮನೆಗೆ ಹೋದ ಸಿಟ್ಟಿನಲ್ಲಿಯೇ ಆ ವ್ಯಕ್ತಿ ತನ್ನ ಎರಡು ವರ್ಷದ ಅವಳಿ ಮಕ್ಕಳನ್ನು ಕಾಡಿಗೆ ಕರೆದುಕೊಂಡು ಹೋಗಿ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ ಪೊಲೀಸ್‌ ಠಾಣೆಗೆ ನಡೆದುಕೊಂಡು ಹೋಗಿ ತಾನು ಆ ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪ್ರಯಾಣದ ವೇಳೆ ನಡೆದಿರುವ ಗಲಾಟೆ

ಪೊಲೀಸರ ಪ್ರಕಾರ, ಆರೋಪಿಯನ್ನು ರಾಹುಲ್ ಚವಾಣ್ ಎಂದು ಗುರುತಿಸಲಾಗಿದ್ದು, ಈತ ವಾಶಿಮ್ ಜಿಲ್ಲೆಯ ನಿವಾಸಿ. ಚವಾಣ್ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಪ್ರಯಾಣ ಮಾಡುತ್ತಿದ್ದ ವೇಳೆ ದಂಪತಿಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಜಗಳದ ಸಮಯದಲ್ಲಿ, ರಾಹುಲ್‌ ಚವಾಣ್‌ನ ಪತ್ನಿ ಗಂಡನನ್ನು ಬಿಟ್ಟು ತವರು ಮನಗೆ ಹೋಗಲು ನಿರ್ಧಾರ ಮಾಡಿದ್ದಾಳೆ. ಆದರೆ, ರಾಹುಲ್‌ ಚವಾಣ್‌ ಮಾತ್ರ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಏಕಾಂಗಿಯಾಗಿ ಪ್ರಯಾಣ ಮಾಡಿದ್ದ.

ಅತಿಯಾದ ಸಿಟ್ಟಿನಲ್ಲಿದ್ದ ರಾಹುಲ್‌ ಚವಾಣ್‌, ಇಬ್ಬರು ಹೆಣ್ಣುಮಕ್ಕಳನ್ನು ಬುಲ್ಧಾನಾ ಜಿಲ್ಲೆಯ ಅಂಚಾರ್ವಾಡಿಯಲ್ಲಿರುವ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಕೊಲೆಯ ನಂತರ ಶವ ಸುಡಲು ಪ್ರಯತ್ನಿಸಿದ್ದ

ಘಟನೆಯ ನಂತರ, ಚವಾಣ್ ನೇರವಾಗಿ ವಾಶಿಮ್ ಪೊಲೀಸ್ ಠಾಣೆಗೆ ಕಾರಿನಲ್ಲಿ ಹೋಗಿದ್ದು, ಅವರ ಎದುರಲ್ಲಿ ತಾನು ಮಾಡಿದ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ತಪ್ಪೊಪ್ಪಿಗೆಯ ನಂತರ, ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಮಕ್ಕಳ ಶವಗಳನ್ನು ವಶಪಡಿಸಿಕೊಂಡಿದೆ. ಪ್ರಾಥಮಿಕ ಶೋಧನೆಗಳ ಪ್ರಕಾರ ಶವಗಳು ಭಾಗಶಃ ಸುಟ್ಟುಹೋಗಿವೆ ಎಂದು ಸೂಚಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಕೊಲೆಗಳ ನಂತರ ಚವಾಣ್ ಬೆಂಕಿ ಹಚ್ಚುವ ಮೂಲಕ ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಆದರೆ, ಪೊಲೀಸ್ ಅಧಿಕಾರಿಗಳು ತನಿಖೆಯ ಈ ಅಂಶವನ್ನು ಇನ್ನೂ ದೃಢಪಡಿಸಿಲ್ಲ. ಸಾವಿಗೆ ನಿಖರವಾದ ಕಾರಣ ಮತ್ತು ಬಾಲಕಿರಯನ್ನು ಮರಣೋತ್ತರವಾಗಿ ಸುಟ್ಟುಹಾಕಲಾಗಿದೆಯೇ ಎಂದು ನಿರ್ಧರಿಸಲು ವಿಧಿವಿಜ್ಞಾನ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಆರಂಭಿಕ ವಿಚಾರಣೆಯ ಭಾಗವಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಮನೀಷಾ ಕದಮ್ ಮತ್ತು ಇತರರು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು. ಪೊಲೀಸರು ಸ್ಥಳದಲ್ಲೇ ಪರಿಶೀಲನೆ ಮತ್ತು ದಾಖಲೆಗಳನ್ನು ನಡೆಸಿ, ಪ್ರದೇಶದಿಂದ ವಿಧಿವಿಜ್ಞಾನ ಮಾದರಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್‌ ಲೈಫ್‌ ಇನ್ಶುರೆನ್ಸ್‌ ಪಾಲು ಮಾರಾಟಕ್ಕೆ ನಿರ್ಧಾರ!
ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!