ಬಿಜೆಪಿ ಮಹಾಯುತಿಗೆ ಕ್ಲೀನ್ ಸ್ವೀಪ್ ಗೆಲುವು, ಕೇರಳ ಗೆದ್ದಾಗ ಪ್ರಜಾಪ್ರಭುತ್ವ ಮಹಾರಾಷ್ಟ್ರ ಸೋತಾಗ ಕೊತ ಕೊತ

Published : Dec 21, 2025, 10:13 PM IST
mahayuti

ಸಾರಾಂಶ

ಬಿಜೆಪಿ ಮಹಾಯುತಿಗೆ ಕ್ಲೀನ್ ಸ್ವೀಪ್ ಗೆಲುವು, ಕೇರಳ ಗೆದ್ದಾಗ ಪ್ರಜಾಪ್ರಭುತ್ವ ಮಹಾರಾಷ್ಟ್ರ ಸೋತಾಗ ಕೊತ ಕೊತ, ಮಹಾರಾಷ್ಟ್ರದಲ್ಲಿ ಮಹಾಯುತಿ 214 ಸ್ಥಾನ ಗೆದ್ದಿದೆ. ಇದು ಇವಿಎಂ, ಚುನಾವಣಾ ಆಯೋಗದ ಕೃಪೆ ಎಂದು ಕಾಂಗ್ರೆಸ್ ಸೇರಿ ವಿಪಕ್ಷ ಆರೋಪಿಸಿದೆ. 

ಮುಂಬೈ (ಡಿ.21) ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾಣೆಯಲ್ಲಿ ಕಾಂಗ್ರೆಸ್ ನೇೃತ್ವದ ಯುಡಿಎಫ್ ಕ್ಲೀನ್ ಸ್ವೀಪ್ ಗೆಲುವು ಸಾಧಿಸಿತ್ತು. ಆಡಳಿತರೂಡ ಕಮ್ಯೂನಿಸ್ಟ್ ನೇತೃತ್ವದ ಎಲ್‌ಡಿಎಫ್ ಮಕಾಡೆ ಮಲಗಿತ್ತು. ಈ ವೇಳೆ ಕಾಂಗ್ರೆಸ್ ಇದು ಪ್ರಜಾಪ್ರಭುತ್ವದ ಗೆಲುವು ಎಂದಿದ್ದರು. ಆದರೆ ಇದೇ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಕಾಡೆ ಮಲಗಿದೆ. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಬಿರುಗಾಳಿ ಮುಂದೆ ಮಹಾ ವಿಕಾಸ್ ಅಘಾಡಿ ಭಾರಿ ಮುಖಭಂಗ ಅನುಭವಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್, ಉದ್ಧವ್ ಠಾಕ್ರೆ ಬಣದ ಶಿವಸೇನೆ ಹಾಗೂ ಎನ್‌ಸಿಪಿ ನಾಯಕರು ಇದು ಇವಿಎಂ ಅಕ್ರಮ, ಚುನಾವಣಾ ಆಯೋಗ ಕೃಪೆ ಹಾಗೂ ಹಣಬಲದಿಂದ ಗೆಲುವು ಸಾಧಿಸಿದೆ ಎಂದುು ಆರೋಪಿಸಿದೆ. ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಯ ಚುನಾವಣೆಯ ಈವರಿಗೆನ ಫಲಿತಾಂಶದ ಪ್ರಕಾರ, 286 ಸ್ಥಾನ ಪೈಕಿ 214 ಸ್ಥಾನದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಗೆಲುವು ಕಂಡಿದೆ. ಚುನಾವಣಾ ಆಯೋಗದ ಅಧಿಕೃತ ಫಲಿತಾಂಶ ಪಟ್ಟಿ ಇನ್ನಷ್ಟೇ ಬರಬೇಕಿದೆ.

ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

ಮಹಾರಾಷ್ಟ್ರ ನಗರ ಪಂಚಾಯತ್, ನಗರ ಪರಿಷತ್ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. 2024ರ ವಿಧಾನಸಭೆ ಚುನವಾಣೆಯಲ್ಲಿ ಬಿಜೆಪಿ, ಏಕನಾಥ್ ಶಿವಸೇನೆ ಬಣದ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮೈತ್ರಿ ಜೊತೆಯಾಗಿ ಭಾರಿ ಗೆಲುವು ಕಂಡಿತ್ತು. ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಇದೇ ಗೆಲುವು ಮುಂದುವರಿಸುವಲ್ಲಿ ಮಹಾಯುತಿ ಯಶಸ್ವಿಯಾಗಿದೆ. ಮಹಾಯುತಿ 214 ಸ್ಥಾನ ಗೆದ್ದುಕೊಂಡಿದೆ. ಇದರಲ್ಲಿ 118 ಸ್ಥಾನದಲ್ಲಿ ಬಿಜೆಪಿ ಗೆಲುವು ದಾಖಲಿಸುವ ಮೂಲಕ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ

ಮಹಾಯುತಿ ಪಕ್ಷದ ಫಲಿತಾಂಶ-214

  • ಬಿಜೆಪಿ: 118
  • ಶಿಂಧೆ ಶಿವಸೇನೆ : 59
  • ಅಜಿತ್ ಪವಾರ್ ಎನ್‌ಸಿಪಿ: 37

ಮಹಾ ವಿಕಾಸ್ ಅಘಾಡಿ ಫಲಿತಾಂಶ-49

  • ಕಾಂಗ್ರೆಸ್ : 32
  • ಶರದ್ ಪವಾರ್ ಎನ್‌ಸಿಪಿ :9
  • ಉದ್ಧವ್ ಠಾಕ್ರೆ ಶಿವಸೇನೆ: 8
  • ಕೆರಳಿದ ಕಾಂಗ್ರೆಸ್ ಹಾಗೂ ವಿಪಕ್ಷ

ಮಹಾರಾಷ್ಟ್ರದಲ್ಲಿ ಹೀನಾಯ ಸೋಲಿಗೆ ಮಹಾ ವಿಕಾಸ್ ಅಘಾಡಿ ಕೆರಳಿದೆ. ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಗೆಲುವಿಗೆ ಚುನಾವಣಾ ಆಯೋಗ ನೆರವು ನೀಡಿದೆ. ಚುನಾವಣಾ ಆಯೋಗ ಆಡಳಿತರೂಡ ಮಹಾಯುತಿ ಸರ್ಕಾರಕ್ಕೆ ಸಹಾಯ ಮಾಡಿದೆ. ಪಾರದರ್ಶಕ ಚುನಾವಣೆ ನಡೆದಿಲ್ಲ ಎಂದಿದ್ದಾರೆ. ಇತ್ತ ಶಿವಸೇನೆ ನಾಯಕ ಸಂಜಯ್ ರಾವತ್, ಇವಿಎಂ ಟ್ಯಾಂಪರ್ ಮಾಡಿ ಗೆಲುವು ಕಂಡಿದ್ದಾರೆ. ಇದು ಅಕ್ರಮ ಗೆಲುವು ಎಂದು ಆರೋಪಿಸಿದ್ದಾರೆ. ಸೋಲಿಗೆ ಬಿಜೆಪಿಯ ಅಕ್ರಮ, ಹಣದ ಬಲ ಹಾಗೂ ಚುನಾವಣಾ ಆಯೋಗದ ನರೆವು ಕಾರಣ ಎಂದಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಚುನಾವಣೆ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿದೆ. ಆದರೆ ಕೇರಳದಲ್ಲಿ ಕಾಂಗ್ರೆಸ್ ಗೆಲುವಿಗೆ ತುಟಿಕ್ ಪಿಟಿಕ್ ಅನ್ನದೆ ಸಂಭ್ರಮಾಚರಣೆ ನಡೆಸುತ್ತಿದೆ ಎಂದು ಹಲವರು ಸೋಶಿಯಲ್ ಮೀಡಿಯಾ ಮೂಲಕ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸೋನಿಯಾ ಗಾಂಧಿ ತ್ಯಾಗದಿಂದ ಮಾತ್ರ ನಾವು ಕ್ರಿಸ್ಮಸ್ ಆಚರಿಸಲು ಸಾಧ್ಯವಾಗಿದೆ, ರೇವಂತ್ ರೆಡ್ಡಿ ವಿವಾದ